ಭ್ರಷ್ಟಾಚಾರ ಮುಕ್ತ ಕ್ರಿಕೆಟ್ ಸಾಧ್ಯವಿಲ್ಲ

By Suvarna Web DeskFirst Published Dec 17, 2016, 3:51 PM IST
Highlights

ಆಟಗಾರರ ಮೇಲೆ ಭ್ರಷ್ಟಾಚಾರದ ನೆರಳು ಬೀಳದಂತೆ ತಡೆಯಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯು (ಐಸಿಸಿ) ಕೈಗೊಂಡಿರುವ ಕಟ್ಟು ನಿಟ್ಟಿನ ನಿಯಮಗಳು ಸ್ವಾಗತಾರ್ಹ

- ಸಲ್ಮಾನ್ ಬಟ್

ಕರಾಚಿ(ಡಿ.17): ಕ್ರಿಕೆಟ್ ಕ್ರೀಡೆಯನ್ನು ಸಂಪೂರ್ಣವಾಗಿ ಭ್ರಷ್ಟಾಚಾರ ಮುಕ್ತವಾಗಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಕಳಂಕಿತ ಕ್ರಿಕೆಟಿಗ ಸಲ್ಮಾನ್ ಬಟ್ ಹೇಳಿದ್ದಾರೆ.

ಆದರೆ, ಆಟಗಾರರ ಮೇಲೆ ಭ್ರಷ್ಟಾಚಾರದ ನೆರಳು ಬೀಳದಂತೆ ತಡೆಯಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯು (ಐಸಿಸಿ) ಕೈಗೊಂಡಿರುವ ಕಟ್ಟು ನಿಟ್ಟಿನ ನಿಯಮಗಳು ಸ್ವಾಗತಾರ್ಹ ಎಂದು ಬಟ್ ಹೇಳಿದ್ದಾರೆ.

2010ರಲ್ಲಿ ನಡೆದಿದ್ದ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಐದು ವರ್ಷದ ನಿಷೇಧಕ್ಕೊಳಗಾಗಿದ್ದ ಸಲ್ಮಾನ್ ಬಟ್ ಅವರ ಶಿಕ್ಷೆಯು ಇದೇ ವರ್ಷ ಸೆಪ್ಟಂಬರ್‌ನಲ್ಲಿ ಮುಗಿದಿದ್ದು ಶೀಘ್ರದಲ್ಲೇ ವೃತ್ತಿಪರ ಕ್ರಿಕೆಟ್‌'ಗೆ ಮರಳಲು ಅವರು ತಯಾರಿ ನಡೆಸಿದ್ದಾರೆ.

click me!