
ನವದೆಹಲಿ(ಡಿ.17): ಹತ್ತು ತಿಂಗಳ ಹಿಂದೆ ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿದ್ದ ಡಬ್ಲ್ಯೂಬಿಒ ಏಷ್ಯಾ ಪೆಸಿಫಿಕ್ ಸೂಪರ್ ಮಿಡಲ್'ವೇಟ್ ಪ್ರಶಸ್ತಿಯ ಪಂದ್ಯದಲ್ಲಿ ಆಸ್ಟ್ರೇಲಿಯಾದ ಕೆರ್ರಿ ಹೋಪ್ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದಿದ್ದ ಭಾರತದ ಪ್ರೊ ಬಾಕ್ಸರ್ ವಿಜೇಂದರ್ ಸಿಂಗ್, ಇಂದು ಅದೇ ಕ್ರೀಡಾಂಗಣದಲ್ಲಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸೆಣಸಲಿದ್ದಾರೆ.
ಈ ಬಾರಿ ಅವರು ಹಿಂದೆಂದಿಗಿಂತಲೂ ದೊಡ್ಡ ಸವಾಲನ್ನು ಎದುರಿಸಲು ಸಜ್ಜಾಗಿದ್ದಾರೆ. ಡಬ್ಲ್ಯೂಬಿಎಫ್ ಸೂಪರ್ ಮಿಡಲ್'ವೇಟ್ ಚಾಂಪಿಯನ್ ಆದ ತಾಂಜೇನಿಯಾದ ಫ್ರಾನ್ಸಿಸ್ ಚೆಕಾ ವಿರುದ್ಧ ಸೆಣಸಲಿದ್ದಾರೆ. ಕೇವಲ 18 ತಿಂಗಳುಗಳ ಹಿಂದಷ್ಟೇ ಪ್ರೊ ಬಾಕ್ಸಿಂಗ್'ಗೆ ಕಾಲಿಟ್ಟು, ಈವರೆಗೆ ಆಡಿರುವ ಆರು ಬಾಕ್ಸಿಂಗ್ ಪಂದ್ಯಗಳಲ್ಲಿ ಎಲ್ಲವನ್ನೂ ಗೆದ್ದಿರುವ ಆತ್ಮವಿಶ್ವಾಸ ವಿಜಿಯದ್ದಾದರೆ, ಈವರೆಗೆ ಆಡಿರುವ 40 ಪಂದ್ಯಗಳಲ್ಲಿ 30 ಪಂದ್ಯಗಳಲ್ಲಿ ಗೆದ್ದಿರುವ ಅನುಭವ ಚೆಕಾ ಅವರದ್ದು. ಹಾಗಾಗಿ, ಅನುಭವ, ಆತ್ಮವಿಶ್ವಾಸಗಳ ಮುಖಾಮುಖಿಯಲ್ಲಿ ಯಾವುದು ಗೆಲ್ಲಲಿದೆ ಎಂಬುದು ಈಗಾಗಲೇ ಬಾಕ್ಸಿಂಗ್ ಪ್ರಿಯರ ನಿದ್ದೆಗೆಡಿಸಿದೆ.
ತಮ್ಮ ಮುಂದಿನ ಈ ದೈತ್ಯ ಸವಾಲಿನ ಬಗ್ಗೆ ಮಾತನಾಡಿರುವ ವಿಜಿ, ‘‘ಅನುಭವ ಹಾಗೂ ಯಶಸ್ಸಿನಲ್ಲಿ ಚೆಕಾ ಅವರು ನನಗಿಂತಲೂ ದೊಡ್ಡ ಕ್ರೀಡಾಳು ಎಂಬುದು ನನಗೆ ತಿಳಿದಿದೆ. ಆದರೆ, ನಾನು ಎದೆಗುಂದಿಲ್ಲ. ಅವರಿಗಿಂತ ವಯಸ್ಸಿನ ಚಿಕ್ಕವನಾಗಿರುವುದೇ ನನ್ನ ದೊಡ್ಡ ಲಾಭವಾಗಿದ್ದು ಅವರಿಗಿಂತ ಚುರುಕಾಗಿ, ಪರಿಣಾಮಕಾರಿಯಾಗಿ ಸೆಣಸಬಲ್ಲೆ ಎಂಬ ಆತ್ಮವಿಶ್ವಾಸ ನನ್ನಲ್ಲಿದೆ’’ ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.