
ಮುಂಬೈ(ಡಿ.17): ಅಚ್ಚರಿಯೆನಿಸಿದರೂ ಇದು ಸತ್ಯ. ಇಂಗ್ಲೆಂಡ್ ಕ್ರಿಕೆಟ್‌ನ ದಂತಕತೆಗಳಲ್ಲೊಬ್ಬರಾದ ಜೆಫ್ರಿ ಬಯ್ಕಾಟ್ ಅವರು ತಮ್ಮ ಕನಸಿನ ಕ್ರಿಕೆಟ್ ತಂಡವೊಂದರನ್ನು ಪ್ರಕಟಿಸಿದ್ದು, 11 ಆಟಗಾರರಿರುವ ಈ ತಂಡದಲ್ಲಿ ಭಾರತದ ಯಾರೊಬ್ಬರೂ ಇಲ್ಲ!
90ರ ದಶಕದ ಸ್ಟಾರ್ ಆಟಗಾರರಾದ ಸಚಿನ್ ತೆಂಡೂಲ್ಕರ್, ಗಂಗೂಲಿ, ಅಜರುದ್ದೀನ್ ಅವರಂಥವರು ಬಿಡಿ, ಭಾರತೀಯ ಕ್ರಿಕೆಟ್'ನ ದಂತಕತೆಗಳೆನಿಸಿರುವ ಸುನಿಲ್ ಗವಾಸ್ಕರ್, ಕಪಿಲ್ ದೇವ್ ಅವರಿಗೂ ಪಟ್ಟಿಯಲ್ಲಿ ಸ್ಥಾನ ಸಿಕ್ಕಿಲ್ಲ.
ಆದರೆ, ಈ ಬಗ್ಗೆ ಜೆಫ್ರಿ ಅವರೇ ಸ್ಪಷ್ಟನೆ ನೀಡಿದ್ದಾರೆ. ಮುಂಬೈನಲ್ಲಿ ನಡೆದ ಸಮಾರಂಭವೊಂದರ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಗವಾಸ್ಕರ್ ಅತ್ಯುತ್ತಮ ಆಟಗಾರರಲ್ಲೊಬ್ಬರು ಹಾಗೂ ನನ್ನ ಸ್ನೇಹಿತರು. ಗ್ರೇಸ್ ಹಾಗೂ ಹಾಬ್ಸ್ ಅವರ ಜತೆ ಅವರನ್ನು ಸೇರಿಸಲು ಇಷ್ಟವಿರಲಿಲ್ಲ. ಹಾಗೆಂದ ಮಾತ್ರಕ್ಕೆ ಭಾರತೀಯರನ್ನು ಮೆಚ್ಚಿಸಲು ನಾನು ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗುವುದಿಲ್ಲ. ಇಂದಿನ ಕ್ರಿಕೆಟ್ ಬೇಡುವ ಅಗತ್ಯತೆಗಳಿಗೆ ತಕ್ಕಂತೆ ತಂಡವನ್ನು ಆರಿಸಿದ್ದೇನೆ. ಹಾಗಾಗಿ, ಖುದ್ದು ನನ್ನ ಹೆಸರನ್ನೇ ತಂಡದಲ್ಲಿ ಸೇರ್ಪಡೆಗೊಳಿಸಿಲ್ಲ’’ ಎಂದರು.
ಬಯ್ಕಾಟ್ ಅವರ ತಂಡ ಇಂತಿದೆ:
ಜ್ಯಾಕ್ ಹಾಬ್ಸ್, ಲೆನ್ ಹಟನ್, ಡೊನಾಲ್ಡ್ ಬ್ರಾಡ್ಮನ್, ಜಾರ್ಜ್ ಹೆಡ್ಲಿ, ವಿವಿಯನ್ ರಿಚರ್ಡ್ಸ್, ಗ್ಯಾರಿ ಸೋಬರ್ಸ್, ಅಲಾನ್ ನಾಟ್, ಸಿಡ್ನಿ ಬಾರ್ನ್ಸ್, ಮಾಲ್ಕೋಮ್ ಮಾರ್ಷಲ್, ಶೇನ್ ವಾರ್ನ್ ಹಾಗೂ ಡೆನ್ನಿಸ್ ಲಿಲ್ಲಿ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.