
ಅಡಿಲೇಡ್(ನ.10): ವಿಶ್ವ ಚಾಂಪಿಯನ್ ಆಸ್ಪ್ರೇಲಿಯಾ ಕೊನೆಗೂ ಸೋಲಿನ ಕೂಪದಿಂದ ಮೇಲೆದ್ದಿದೆ. ಸತತ 7 ಏಕದಿನ ಪಂದ್ಯಗಳನ್ನು ಸೋತಿದ್ದ ಆಸೀಸ್, ಶುಕ್ರವಾರ ಕೊನೆಗೂ ಗೆಲುವಿನ ಸಿಹಿಯುಂಡಿತು. ದ.ಆಫ್ರಿಕಾ ವಿರುದ್ಧ ಇಲ್ಲಿ ನಡೆದ 3 ಪಂದ್ಯಗಳ ಸರಣಿಯ 2ನೇ ಪಂದ್ಯದಲ್ಲಿ 7 ರನ್‌ಗಳ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ ಸರಣಿಯಲ್ಲಿ 1-1ರ ಸಮಬಲ ಸಾಧಿಸಿತು. ಅಚ್ಚರಿಯ ವಿಷಯ ಎಂದರೆ, ಆಸ್ಪ್ರೇಲಿಯಾ ಕೊನೆ 20 ಏಕದಿನ ಪಂದ್ಯಗಳಲ್ಲಿ ಕೇವಲ 3ರಲ್ಲಿ ಮಾತ್ರ ಗೆಲುವು ಪಡೆದಿದೆ.
ಮೊದಲು ಬ್ಯಾಟ್ ಮಾಡಿದ ಆಸ್ಪ್ರೇಲಿಯಾ 48.3 ಓವರ್‌ಗಳಲ್ಲಿ 231 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ದ. ಆಫ್ರಿಕಾ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 224 ರನ್‌ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕ ಆ್ಯರೋನ್ ಫಿಂಚ್ (41), ಕ್ರಿಸ್ ಲಿನ್ (44), ಅಲೆಕ್ಸ್ (47) ರನ್‌ಗಳಿಸಿ ಆಸ್ಪ್ರೇಲಿಯಾ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದರು. ಇನ್ನುಳಿದ ಬ್ಯಾಟ್ಸ್‌ಮನ್‌ಗಳು ನೀರಸ ಪ್ರದರ್ಶನ ತೋರಿದರು. ಆಫ್ರಿಕಾ ಪರ ವೇಗಿ ರಬಾಡ 4, ಪ್ರಿಟೋರಿಯಸ್ 3 ವಿಕೆಟ್ ಪಡೆದು ಮಿಂಚಿದರು.
ಸವಾಲಿನ ಗುರಿ ಬೆನ್ನಟ್ಟಿದ ಆಫ್ರಿಕಾ, ಆಸೀಸ್ ಬೌಲರ್‌ಗಳ ಬಿಗುವಿನ ದಾಳಿಗೆ ರನ್ ಗಳಿಸಲು ಪರದಾಡಿತು. ನಾಯಕ ಫಾಫ್ ಡು ಪ್ಲೆಸಿ (47), ಡೇವಿಡ್ ಮಿಲ್ಲರ್ (51) ಹೊರತುಪಡಿಸಿದರೆ ಉಳಿದ ಆಟಗಾರರಿಂದ ಹೋರಾಟ ಕಂಡುಬರಲಿಲ್ಲ. ಆಸ್ಪ್ರೇಲಿಯಾ ಪರ ಮಾರ್ಕಸ್ ಸ್ಟೋಯ್ನಿಸ್ 3, ಜೋಶ್ ಹೇಜಲ್‌ವುಡ್, ಮಿಚೆಲ್ ಸ್ಟಾರ್ಕ್ ತಲಾ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ಆಸ್ಪ್ರೇಲಿಯಾ 231/10
(ಅಲೆಕ್ಸ್ 47, ಲಿನ್ 44, ರಬಾಡ 4-54)
ದಕ್ಷಿಣ ಆಫ್ರಿಕಾ 224/9
(ಮಿಲ್ಲರ್ 51, ಡು ಪ್ಲೆಸಿ 47, ಸ್ಟೋಯ್ನಿಸ್ 3-35)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.