
ಲಂಡನ್(ನ.18): ವಿಶ್ವ ಕ್ರಿಕೆಟ್'ನ ಸ್ಟಾರ್ ಮಾಜಿ ಆಟಗಾರ ಆಸ್ಟ್ರೇಲಿಯಾದ ಶೇನ್ ವಾರ್ನ್ ಆಯೋಜಿಸುವ ಸೂಪರ್'ಸ್ಟಾರ್ಸ್ ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡುವುದಾಗಿ ಇಂಗ್ಲೆಂಡ್‌ನ ಕೆವಿನ್ ಪೀಟರ್ಸನ್ ಮತ್ತು ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಂ ಒಪ್ಪಂದಕ್ಕೆ ಸಹಿಹಾಕಿದ್ದಾರೆ.
ಟೂರ್ನಿಯು ಮುಂದಿನ ವರ್ಷ ಸೆಪ್ಟೆಂಬರ್ ಮತ್ತು ಅಕ್ಟೋಬರ್'ನಲ್ಲಿ ನಡೆಯಲಿದೆ.
ಕಳೆದ ವರ್ಷ ನ್ಯೂಯಾರ್ಕ್'ನ ಹ್ಯೂಸ್ಟನ್ ಮತ್ತು ಲಾಸ್ ಏಂಜಲೀಸ್‌ನಲ್ಲಿ ಕ್ರಿಕೆಟ್ ಆಲ್ ಸ್ಟಾರ್ ಸರಣಿ ನಡೆದಿತ್ತು. ಶೇನ್ ವಾರ್ನ್ ವಾರಿಯರ್ಸ್ ಮತ್ತು ಸಚಿನ್ ತೆಂಡೂಲ್ಕರ್ ಬ್ಲಾಸ್ಟರ್ಸ್ ತಂಡಗಳು ತಲಾ 3 ಪಂದ್ಯಗಳನ್ನಾಡಿದ್ದವು. ಇದರಲ್ಲಿ ಶೇನ್ ವಾರ್ನ್ ತಂಡ 3-0ಯಿಂದ ಗೆಲುವು ಸಾಧಿಸಿತ್ತು.
ಈ ಬಾರಿ ಪಾಕಿಸ್ತಾನದ ಶಾಹಿದ್ ಅಫ್ರಿದಿ, ಆಸ್ಟ್ರೇಲಿಯಾದ ಮಿಚೆಲ್ ಜಾನ್ಸನ್ ಮತ್ತು ಮೈಕೆಲ್ ಕ್ಲಾರ್ಕ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.
ಇನ್ನು ಕುಮಾರ ಸಂಗಾಕ್ಕಾರ, ಮಹೇಲ ಜಯವರ್ಧನೆ, ಗ್ಲೇನ್ ಮೆಗ್ರಾಥ್, ಜಾಕಸ್ ಕಾಲೀಸ್, ರಿಕ್ಕಿ ಪಾಂಟಿಂಗ್, ಶೋಯೆಬ್ ಅಖ್ತರ್, ಬ್ರಿಯನ್ ಲಾರಾ, ಸೇರಿದಂತೆ ಇತರೆ ಆಟಗಾರರು 2ನೇ ವರ್ಷ ಆಯಾ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.