ಅಗ್ರಸ್ಥಾನಕ್ಕೇರುವ ಮುಂಬಾ ಕನಸು ಭಗ್ನ-ಗುಜರಾತ್‌‌ಗೆ ಅಗ್ರಸ್ಥಾನ

Published : Dec 23, 2018, 09:23 AM IST
ಅಗ್ರಸ್ಥಾನಕ್ಕೇರುವ ಮುಂಬಾ ಕನಸು ಭಗ್ನ-ಗುಜರಾತ್‌‌ಗೆ ಅಗ್ರಸ್ಥಾನ

ಸಾರಾಂಶ

ಯುಪಿ ಯೋಧಾ ಹಾಗೂ ಯು ಮುಂಬಾ ನಡುವಿನ ರೋಚಕ ಹೋರಾಟದಲ್ಲಿ ಯುಪಿ ಗೆಲುವಿನ ನಗೆ ಬೀರಿದೆ. ಕನ್ನಡಿಗ ಪ್ರಶಾಂತ್ ರೈ ಉತ್ತಮ ಪ್ರದರ್ಶನದಿಂದ ಯಪಿ ಗೆಲುವು ಸಾಧಿಸಿತು. ಇಲ್ಲಿದೆ ಪಂದ್ಯದ ಹೈಲೈಟ್ಸ್! 

ಕೋಲ್ಕತಾ(ಡಿ.23): ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ ‘ಎ’ ವಲಯದಲ್ಲಿ ಅಗ್ರಸ್ಥಾನ ಪಡೆದು ಪ್ಲೇ-ಆಫ್‌ನ ಕ್ವಾಲಿಫೈಯರ್‌-1 ಪಂದ್ಯಕ್ಕೆ ಆರ್ಹತೆ ಪಡೆಯುವ ಯು ಮುಂಬಾ ಕನಸು ಭಗ್ನಗೊಂಡಿದೆ. ಶನಿವಾರ ಇಲ್ಲಿ ನಡೆದ ಅಂತರ ವಲಯ ವೈಲ್ಡ್‌ಕಾರ್ಡ್‌ ಪಂದ್ಯದಲ್ಲಿ ಯು.ಪಿ.ಯೋಧಾ ವಿರುದ್ಧ 32-34ರಲ್ಲಿ ಸೋಲು ಕಂಡ ಮುಂಬಾ ಲೀಗ್‌ ಹಂತದ ಪಂದ್ಯವನ್ನು ಮುಕ್ತಾಯಗೊಳಿಸಿದ್ದು ‘ಎ’ ವಲಯದಲ್ಲಿ 2ನೇ ಸ್ಥಾನದೊಂದಿಗೆ ಪ್ಲೇ-ಆಫ್‌ ಪ್ರವೇಶಿಸಲಿದೆ. ತಂಡ 22 ಪಂದ್ಯಗಳಲ್ಲಿ 15 ಗೆಲುವುಗಳೊಂದಿಗೆ 86 ಅಂಕ ಕಲೆಹಾಕಿದೆ. ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ 21 ಪಂದ್ಯಗಳಲ್ಲಿ 16 ಗೆಲುವುಗಳೊಂದಿಗೆ 88 ಅಂಕ ಸಂಪಾದಿಸಿದ್ದು, ಒಂದು ಪಂದ್ಯ ಬಾಕಿ ಇರುವಂತೆಯೇ ‘ಎ’ ವಲಯದಿಂದ ಕ್ವಾಲಿಫೈಯರ್‌-1 ಪಂದ್ಯಕ್ಕೇರುವ ತಂಡ ಎನಿಸಿಕೊಂಡಿದೆ. ದಬಾಂಗ್‌ ಡೆಲ್ಲಿ, ‘ಎ’ ವಲಯದಿಂದ ಪ್ಲೇ-ಆಫ್‌ಗೇರಲಿರುವ 3ನೇ ತಂಡ.

ರೋಚಕ ಹೋರಾಟಕ್ಕೆ ಸಾಕ್ಷಿಯಾದ ಪಂದ್ಯದಲ್ಲಿ ಮೊದಲಾರ್ಧದ ಮುಕ್ತಾಯಕ್ಕೆ 18-15ರಿಂದ ಮುಂದಿದ್ದ ಯೋಧಾ, ದ್ವಿತೀಯಾರ್ಧದಲ್ಲೂ ಎಚ್ಚರಿಕೆಯ ಆಟವಾಡಿ 2 ಅಂಕಗಳಿಂದ ಜಯಿಸಿತು. ಇದರೊಂದಿಗೆ ಪ್ಲೇ-ಆಫ್‌ಗೇರುವ ಕನಸನ್ನು ಯೋಧಾ ಜೀವಂತವಾಗಿರಿಸಿಕೊಂಡಿತು.

ಟರ್ನಿಂಗ್‌ ಪಾಯಿಂಟ್‌: ಅಂತಿಮ ನಿಮಿಷದಲ್ಲಿ ಉಭಯ ತಂಡಗಳು 32-32ರಲ್ಲಿ ಸಮಬಲ ಸಾಧಿಸಿದ್ದವು. ಆದರೆ ಪ್ರಶಾಂತ್‌ ರೈ ಕೊನೆ ಕ್ಷಣದಲ್ಲಿ 2 ಅಂಕ ಗಳಿಸಿ ಯೋಧಾ ಗೆಲುವಿಗೆ ಕಾರಣರಾದರು.

ಗಣೇಶ್‌ ಪ್ರಸಾದ್‌ ಕುಂಬ್ಳೆ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಪ್‌ ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!