ವೈಡ್ ಎಸೆದು ಶತಕ ತಪ್ಪಿಸಿದ ಬೌಲರ್: ಸೆಹ್ವಾಗ್ ಶತಕ ಮಿಸ್ ಆಗಿದ್ದನ್ನು ನೆನಪಿಸಿದ ಈ ಪಂದ್ಯ

By Suvarna Web DeskFirst Published Feb 11, 2018, 3:58 PM IST
Highlights

ಇಲ್ಲಿನ ರೀಜನಲ್ ಸೂಪರ್‌ 50 ಏಕದಿನ ಪಂದ್ಯಾವಳಿಯ ಲೀವಾರ್ಡ್ ಐಲೆಂಡ್ಸ್ ಹಾಗೂ ಕೆಂಟ್ ತಂಡಗಳ ನಡುವಿನ ಪಂದ್ಯದಲ್ಲಿ, ಐಲೆಂಡ್ಸ್ ತಂಡ ಎದುರಾಳಿಗೆ 184 ರನ್ ಗುರಿ ನೀಡಿತು. ಇದನ್ನು ಬೆನ್ನಟ್ಟಿದ ಕೆಂಟ್ ತಂಡದ ಆರಂಭಿಕ ಜ್ಯಾಕ್ ಕ್ರಾವ್ಲೆ 98 ರನ್ ಗಳಿಸಿ ಶತಕದ ನಿರೀಕ್ಷೆಯಲ್ಲಿದ್ದಾಗ, ಬೌಲರ್ ಶೀನೊ ಬ್ರಿಡ್ಜ್ ಉದ್ದೇಶಪೂರ್ವಕವಾಗಿ 2 ವೈಡ್ ಎಸೆತಗಳನ್ನು ಎಸೆದರು.

ನಾರ್ಥ್‌ಸೌಂಡ್(ಫೆ.11): ಬ್ಯಾಟ್ಸ್‌'ಮನ್ 98 ರನ್ ಗಳಿಸಿ ಶತಕದ ಹೊಸ್ತಿಲಲ್ಲಿದ್ದಾನೆ. ತಂಡದ ಗೆಲುವಿಗೆ 4 ರನ್‌ಗಳು ಬೇಕಿವೆ. ಬೌಲರ್ ಬೇಕಂತಲೇ 2 ವೈಡ್ ಎಸೆದು ಬ್ಯಾಟ್ಸ್‌ಮನ್ ಶತಕ ವಂಚಿತನಾಗುವಂತೆ ಮಾಡಿದ ಘಟನೆ ವೆಸ್ಟ್‌ಇಂಡೀಸ್‌'ನ ದೇಸಿ ಕ್ರಿಕೆಟ್‌'ನಲ್ಲಿ ನಡೆದಿದೆ.

ಇಲ್ಲಿನ ರೀಜನಲ್ ಸೂಪರ್‌ 50 ಏಕದಿನ ಪಂದ್ಯಾವಳಿಯ ಲೀವಾರ್ಡ್ ಐಲೆಂಡ್ಸ್ ಹಾಗೂ ಕೆಂಟ್ ತಂಡಗಳ ನಡುವಿನ ಪಂದ್ಯದಲ್ಲಿ, ಐಲೆಂಡ್ಸ್ ತಂಡ ಎದುರಾಳಿಗೆ 184 ರನ್ ಗುರಿ ನೀಡಿತು. ಇದನ್ನು ಬೆನ್ನಟ್ಟಿದ ಕೆಂಟ್ ತಂಡದ ಆರಂಭಿಕ ಜ್ಯಾಕ್ ಕ್ರಾವ್ಲೆ 98 ರನ್ ಗಳಿಸಿ ಶತಕದ ನಿರೀಕ್ಷೆಯಲ್ಲಿದ್ದಾಗ, ಬೌಲರ್ ಶೀನೊ ಬ್ರಿಡ್ಜ್ ಉದ್ದೇಶಪೂರ್ವಕವಾಗಿ 2 ವೈಡ್ ಎಸೆತಗಳನ್ನು ಎಸೆದರು.

ನಂತರದ ಎಸೆತದಲ್ಲಿ ಒಂಟಿ ರನ್ ಪಡೆದ ಜ್ಯಾಕ್‌'ಗೆ ಶತಕ ಪೂರೈಸಲು ಮತ್ತೊಂದು ಬದಿಯಲ್ಲಿದ್ದ ಬ್ಯಾಟ್ಸ್‌'ಮನ್ ಸೀನ್ ಡಿಕ್ಸನ್ ನೆರವಾಗಲು ಪ್ರಯತ್ನಿಸಿದರು. ಆದರೆ ಅವರ ಪ್ರಯತ್ನವನ್ನೂ ಕೆಂಟ್ ಆಟಗಾರರು ವಿಫಲಗೊಳಿಸಿದರು. ಓವರ್‌'ನ ಕೊನೆ ಎಸೆತದಲ್ಲಿ ಸೀನ್ ಡಿಕ್ಸನ್'ರ ಬ್ಯಾಟ್‌'ಗೆ ತಗುಲಿದ ಸಾಗಿದ ಚೆಂಡನ್ನು ಬೌಂಡರಿಗೆ ಬಿಟ್ಟು ಪಂದ್ಯ ಮುಕ್ತಾಯಗೊಳಿಸಿದರು. ಜ್ಯಾಕ್ ಕ್ರಾವ್ಲೆ 99 ರನ್ ಗಳಿಸಿ ಅಜೇಯರಾಗಿ ಉಳಿದರು. 20 ವರ್ಷದ ಜ್ಯಾಕ್ ಕ್ರಾವ್ಲೆ ಲಿಸ್ಟ್ 'ಎ' ಕ್ರಿಕೆಟ್'ನಲ್ಲಿ ಚೊಚ್ಚಲ ಶತಕ ಬಾರಿಸುವ ಕನಸನ್ನು ಶೀನೋ ಬ್ರಿಡ್ಜ್ ವಿಫಲಗೊಳಿಸಿದರು. ಕೆಂಟ್ ತಂಡದ ಈ ನಡವಳಿಕೆ, ಕ್ರೀಡಾ ಸ್ಫೂರ್ತಿಗೆ ಧಕ್ಕೆ ಉಂಟುಮಾಡಿದ್ದು, ಸಾಮಾಜಿಕ ತಾಣಗಳಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ.

ಇದು ಸೆಹ್ವಾಗ್ 99 ರನ್'ಗಳಿದ್ದಾಗ ಸೂರಜ್ ರಣ್'ದೀವ್ ನೋ ಬಾಲ್ ಹಾಕಿದ್ದನ್ನು ನೆನಪು ಮಾಡಿದಂತಿತ್ತು.

click me!