ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗಿದು ಬ್ಯಾಡ್ ನ್ಯೂಸ್..!

By Suvarna Web DeskFirst Published Feb 11, 2018, 3:17 PM IST
Highlights

‘ಸಾಮಾನ್ಯವಾಗಿ ಐಸಿಸಿ ಪಂದ್ಯಾವಳಿಗಳಿಗೆ ಆತಿಥ್ಯ ವಹಿಸುವ ರಾಷ್ಟ್ರಗಳು, ತೆರಿಗೆ ವಿನಾಯ್ತಿ ನೀಡುತ್ತವೆ. ಆದರೆ ಭಾರತ ಸರ್ಕಾರ ಮಾತ್ರ ಪ್ರತಿ ಬಾರಿ ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾ ಬಂದಿದೆ. ಐಸಿಸಿ ಹಾಗೂ ಬಿಸಿಸಿಐ ನಿರಂತರವಾಗಿ ಈ ಬಗ್ಗೆ ಮನವಿ ಮಾಡಿಕೊಳ್ಳುತ್ತಿದ್ದರೂ ಯಾವುದೇ ಧನಾತ್ಮಕ ಪ್ರತಿ ಕ್ರಿಯೆ ಲಭ್ಯವಾಗಿಲ್ಲ’ ಎಂದು ಐಸಿಸಿ ತಿಳಿಸಿದೆ.

ದುಬೈ(ಫೆ.11): ಕೇಂದ್ರ ಸರ್ಕಾರ ತೆರಿಗೆ ವಿನಾಯ್ತಿ ನೀಡದಿದ್ದರೆ, 2021ರ ಚಾಂಪಿಯನ್ಸ್ ಟ್ರೋಫಿಯನ್ನು ಭಾರತದಿಂದ ಸ್ಥಳಾಂತರಿಸಲಾಗುವುದು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಿಳಿಸಿದೆ.

ಭಾರತದ ಬದಲು ಆತಿಥ್ಯ ವಹಿಸಬಲ್ಲ ಏಷ್ಯಾದ ರಾಷ್ಟ್ರಗಳ ಹುಡುಕಾಟವನ್ನು ಐಸಿಸಿ ಆರಂಭಿಸಿದೆ. ಶುಕ್ರವಾರ ನಡೆದ ಸಭೆ ಬಳಿಕ ಐಸಿಸಿ, ಭಾರತ ಸರ್ಕಾರ ತೆರಿಗೆ ವಿನಾಯ್ತಿ ನೀಡಲು ನಿಕಾರಿಸುತ್ತಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತು. ಆದರೆ, ಬಿಸಿಸಿಐ ಸಹಾಯದೊಂದಿಗೆ ಭಾರತ ಸರ್ಕಾರದೊಂದಿಗೆ ಮತ್ತೆ ಕೆಲ ಸುತ್ತುಗಳ ಮಾತುಕತೆ ನಡೆಸುವುದಾಗಿ ಐಸಿಸಿ ತಿಳಿಸಿದೆ. ಒಂದೊಮ್ಮೆ ತೆರಿಗೆ ವಿನಾಯ್ತಿ ನೀಡದಿದ್ದರೆ, ಐಸಿಸಿಗೆ ಸುಮಾರು ₹642 ಕೋಟಿ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ.

click me!