2021ರ ವಿಶ್ವ ಅಥ್ಲೆಟಿಕ್ಸ್‌ 2022ಕ್ಕೆ ಮುಂದೂಡಿಕೆ

By Suvarna News  |  First Published Apr 1, 2020, 11:40 AM IST

ಟೋಕಿಯೋ ಒಲಿಂಪಿಕ್ಸ್ ಮುಂದೂಡಿದ ಬೆನ್ನಲ್ಲೇ ಇದೀಗ ವಿಶ್ವ ಅಥ್ಲೇಟಿಕ್ಸ್ ಚಾಂಪಿಯನ್‌ಶಿಪ್‌ ಟೂರ್ನಿ ಕೂಡಾ ಮುಂದೂಡಲ್ಪಟ್ಟಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.


ಪ್ಯಾರಿಸ್‌(ಏ.01): ಟೋಕಿಯೋ ಒಲಿಂಪಿಕ್ಸ್‌ 2021ಕ್ಕೆ ಮುಂದೂಡಲ್ಪಟ್ಟಿರುವ ಹಿನ್ನೆಲೆಯಲ್ಲಿ ಅಮೆರಿಕದ ಒರೆಗಾನ್‌ ರಾಜ್ಯದ ಯುಜೀನ್‌ನಲ್ಲಿ 2021ರಲ್ಲಿ ನಡೆಯಬೇಕಿದ್ದ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಅನ್ನು 2022ರಲ್ಲಿ ನಡೆಸುವುದಾಗಿ ವಿಶ್ವ ಅಥ್ಲೆಟಿಕ್ಸ್‌ ಸಂಸ್ಥೆ ಮಂಗಳವಾರ ಘೋಷಿಸಿದೆ. 

2021ರ ಟೋಕಿಯೋ ಒಲಿಂಪಿಕ್ಸ್‌ಗೆ ಡೇಟ್ ಫಿಕ್ಸ್..!

Latest Videos

undefined

ಸೋಮವಾರವಷ್ಟೇ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಟೋಕಿಯೋ ಗೇಮ್ಸ್‌ನ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. 2021ರ ಜು.23ರಿಂದ ಆ.8ರ ವರೆಗೂ ಕ್ರೀಡಾಕೂಟ ನಡೆಯಲಿದೆ ಎಂದು ತಿಳಿಸಿತ್ತು. ಇನ್ನು 2021ರ ಆ.6ರಿಂದ 21ರ ವರೆಗೂ ವಿಶ್ವ ಅಥ್ಲೆಟಿಕ್ಸ್‌ ನಿಗದಿಯಾಗಿತ್ತು. ಆದರೆ ಈ ಸಮಯದಲ್ಲೇ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುವುದರಿಂದ ವಿಶ್ವ ಅಥ್ಲೇಟಿಕ್ಸ್ ಕ್ರೀಡಾಕೂಟವನ್ನು ಮುಂದೂಡಲಾಗಿದೆ. ಹೊಸ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಬಿಡುಗಡೆಗೊಳಿಸುವುದಾಗಿ ವಿಶ್ವ ಅಥ್ಲೆಟಿಕ್ಸ್‌ ಸಂಸ್ಥೆ ತಿಳಿಸಿದೆ.

ಟೋಕಿಯೋ ಒಲಿಂಪಿಕ್ಸ್ ಮುಂದೂಡಿಕೆ: ಜಪಾನಿಗೆ 20 ಸಾವಿರ ಕೋಟಿ ರುಪಾಯಿ ಹೊರೆ..!

ಎಲ್ಲವೂ ಯೋಜನೆಯಂತೆ ನಡೆದಿದ್ದರೆ ಟೋಕಿಯೋ ಒಲಿಂಪಿಕ್ಸ್ ಕ್ರೀಡಾ ಜಾತ್ರೆಯು 2020ರ ಜುಲೈ 24ರಿಂದ ಆಗಸ್ಟ್ 09ರವರೆಗೆ ನಡೆಯಬೇಕಿತ್ತು. ಆದರೆ ಕೊರೋನಾ ವೈರಸ್ ಎನ್ನುವ ಮಹಾಮಾರಿ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಮುಂದೂಡುವಂತೆ ಮಾಡಿದೆ. ಅಂದಹಾಗೆ ಕೋವಿಡ್ 19ನಿಂದಾಗಿ ಒಲಿಂಪಿಕ್ಸ್ ಮಾತ್ರವಲ್ಲದೇ ಐಪಿಎಲ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಟೂರ್ನಿಗಳು ಮುಂದೂಡಲ್ಪಟ್ಟಿವೆ.

click me!