ಕಾರ್ಪೊರೇಟ್ ಕಪ್- ಲಾರ್ಡ್ಸ್‌ನಲ್ಲಿ ಕಿಚ್ಚ ಸುದೀಪ್ ಟೀಂ ಚಾಂಪಿಯನ್!

Published : Jun 14, 2019, 08:56 PM ISTUpdated : Jun 14, 2019, 09:00 PM IST
ಕಾರ್ಪೊರೇಟ್ ಕಪ್- ಲಾರ್ಡ್ಸ್‌ನಲ್ಲಿ ಕಿಚ್ಚ ಸುದೀಪ್ ಟೀಂ ಚಾಂಪಿಯನ್!

ಸಾರಾಂಶ

ಲಾರ್ಡ್ಸ್ ಮೈದಾನದಲ್ಲಿ ನಡೆದ ಕಾರ್ಪೊರೇಟ್ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಕಿಚ್ಚ ಸುದೀಪ್ ಟೀಂ ಚಾಂಪಿಯನ್ ಪಟ್ಟ ಅಲಂಕರಿಸಿದೆ. ರೋಚಕ ಟೂರ್ನಿ ಹಾಗೂ ಗೆಲುವಿನ ಕುರಿತು ಸುದೀಪ್ ಸಂತಸವನ್ನು ಹಂಚಿಕೊಂಡಿದ್ದಾರೆ.  

ಲಂಡನ್(ಜೂ.14): ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಕಾರ್ಪೊರೇಟ್ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸ್ಯಾಂಡಲ್‌ವುಡ್ ನಟ, ಕಿಚ್ಚ ಸುದೀಪ್ ನೇತೃತ್ವದ ವಿಷನೇರ್ ತಂಡ ಸತತ 2ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.  12 ತಂಡಗಳನ್ನೊಳಗೊಂಡಿರುವ ಕಾರ್ಪೋರೇಟ್ ಲೀಗ್ ಟೂರ್ನಿಯಲ್ಲಿ ಸುದೀಪ್ ನಾಯಕತ್ವದ ತಂಡ ಪ್ರಶಸ್ತಿ ಗೆದ್ದುಕೊಂಡಿದೆ.

 

ಇದನ್ನೂ ಓದಿ: ವಿಶ್ವಕಪ್ ಟೂರ್ನಿ ಭಾರತಕ್ಕೆ ವರ್ಗಾಯಿಸಲು ಅಮಿತಾಬ್ ಬಚ್ಚನ್ ಆಗ್ರಹ!

ಗೆಲುವಿನ ಸಂತಸವನ್ನು ಕಿಚ್ಚ ಸುದೀಪ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪ್ರಬಲ ಪೈಪೋಟಿಯಿಂದ ಕೂಡಿದ ಟೂರ್ನಿಯಲ್ಲಿ ವಿಷನೇರ್ ತಂಡ ಚಾಂಪಿಯನ್ ಆಗಿದೆ. ಅದ್ದೂರಿ ಸ್ವಾಗತ, ಅತ್ಯುತ್ತಮ ಸತ್ಕಾರ ನೀಡಿದ ಲಾರ್ಡ್ಸ್ ಆಡಳಿತ ಮಂಡಳಿಗೆ ಧನ್ಯವಾದ. ಕಳೆದ ಬಾರಿ ತಂಡದಲ್ಲಿದ್ದು, ಈ ಬಾರಿ ಅಗಲಿರುವ ನಟ ಧ್ರುವನಿಗೆ ಈ ಟ್ರೋಫಿ ಅರ್ಪಿಸುವುದಾಗಿ ಸುದೀಪ್ ಟ್ವೀಟ್ ಮಾಡಿದ್ದಾರೆ.

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ
ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ