
ಲಂಡನ್(ಆ.11): ಆಧುನಿಕ ಯುಗದಲ್ಲಿ ಯಾರಿಗೂ ಸಮಯವಿಲ್ಲ. ಕಚೇರಿ ಕೆಲಸ, ತಮ್ಮ ತಮ್ಮ ಕರಿಯರ್, ಟ್ರಾಫಿಕ್ ಸಮಸ್ಯೆ ಸೇರಿದಂತೆ ಹಲವು ಅಡೆತಡೆಗಳಿಂದ ವೈಯುಕ್ತಿ ಬದುಕಿಗೆ ಕನಿಷ್ಠ ಸಮಯ ನೀಡಲು ಯಾರಿಂದಲು ಸಾಧ್ಯವಾಗುತ್ತಿಲ್ಲ. ಇದು ಸಂಬಂಧಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಇದೀಗ ಸತತ ಕ್ರಿಕೆಟ್ ಇದೀಗ ಸಂಬಂಧವನ್ನ ಕಡಿದುಕೊಳ್ಳೋ ಮಟ್ಟಕ್ಕೆ ತಲುಪಿದೆ. ಸದ್ಯ ಭಾರತ ವಿರುದ್ಧದ ಟೆಸ್ಟ್ ಪಂದ್ಯ ಆಡುತ್ತಿರುವ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಹಾಗೂ ಗೆಳತಿ, ಗಾಯಕಿ ಮೊಲ್ಲಿ ಕಿಂಗ್ ನಡುವಿನ ಸಂಬಂಧ ಹಳಸಿದೆ ಎಂದು ಮಿಡ್ ಡೇ ವರದಿ ಮಾಡಿದೆ.
ಸ್ಟುವರ್ಟ್ ಬ್ರಾಡ್ ಸತತ ಕ್ರಿಕೆಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ಗೆಳತಿ ಮೊಲ್ಲಿ ಕಿಂಗ್ ತಮ್ಮ ಗಾಯನ ಹಾಗೂ ಶೋಗಳನ್ನ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಇವರಿಬ್ಬರಿಗೂ ಪರಸ್ವರ ಭೇಟಿಯಾಗಲು ಸಮಯ ಸಿಗುತ್ತಿಲ್ಲ. ಹೀಗಾಗಿ ಇವರಿಬ್ಬರು ಬೇರೆ ಬೇರೆಯಾಗಿದ್ದಾರೆ ಅನ್ನೋ ಮಾತುಗಳ ಕೇಳಿಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಒಬ್ಬನ್ನೊಬ್ಬರು ಅನ್ ಫಾಲೋ ಮಾಡಿದ್ದಾರೆ. ಈಗಾಗಲೇ ಇವರಿಬ್ಬರು ಬೇರೆಯಾಗಿದ್ದಾರೆ ಎಂದು ಮಿಡ್ ಡೇ ವರದಿ ಮಾಡಿದೆ. ಕಳೆದ 5 ತಿಂಗಳಿನಿಂದ ಸ್ಟುವರ್ಟ್ ಬ್ರಾಡ್ ಹಾಗೂ ಮೊಲ್ಲಿ ಕಿಂಗ್ ಗೆಳೆತನ ಗಟ್ಟಿಯಾಗಿತ್ತು. ಇದೀಗ ಸಮಯದ ಅಭಾವ ಈ ಜೋಡಿ ಹಕ್ಕಿಗಳನ್ನ ಕಾಡುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.