Commonwealth Games 2022: ಎದುರಾಳಿಯನ್ನು ಫಾಲ್‌ ಮಾಡಿ ಸೂಪರ್‌ ಗೆಲುವು ಕಂಡ ಸಾಕ್ಷಿಗೆ ಸ್ವರ್ಣ!

By Santosh Naik  |  First Published Aug 5, 2022, 11:12 PM IST

ಒಂದು ಹಂತದಲ್ಲಿ ಫೈನಲ್‌ ಪಂದ್ಯದಲ್ಲಿ 0-4 ರಿಂದ ಹಿನ್ನಡೆಯಲ್ಲಿದ್ದ ಸಾಕ್ಷಿ ಮಲೀಕ್‌, ಎದುರಾಳಿಯನ್ನು ಫಾಲ್‌ ಮಾಡುವ ಮೂಲಕ ತಮ್ಮ ಮೊಟ್ಟಮೊದಲ ಕಾಮನ್ವೆಲ್ತ್‌ ಗೇಮ್ಸ್‌ ಸ್ವರ್ಣ ಪದಕವನ್ನು ಗೆಲ್ಲುವಲ್ಲಿ ಯಶ ಕಂಡಿದ್ದಾರೆ.
 


ಬರ್ಮಿಂಗ್‌ ಹ್ಯಾಂ (ಆ.5): ಫೈನಲ್‌ ಪಂದ್ಯದಲ್ಲಿ ಐತಿಹಾಸಿಕ ಎನಿಸುವಂಥ ನಿರ್ವಹಣೆ ತೋರಿದ ರಿಯೋ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ, ಇನ್ನೇನು ಸೋಲುವ ಹಂತದಲ್ಲಿ ಎದುರಾಳಿಯನ್ನು ಫಾಲ್ ಮಾಡುವ ಮೂಲಕ ಅದ್ಭುತ ಗೆಲುವು ಕಂಡು 2022ರ ಬರ್ಮಿಂಗ್‌ಹ್ಯಾಂ ಕಾಮನ್ವೆಲ್ತ್‌ ಗೇಮ್ಸ್‌ನ ಮಹಿಳೆಯ 62 ಕೆಜಿ ವಿಭಾಗದಲ್ಲಿ ಸ್ವರ್ಣ ಪದಕ ಮುಡಿಗೇರಿಸಿಕೊಂಡಿದ್ದಾರೆ. ಕುಸ್ತಿ ಸ್ಪರ್ಧೆಯಲ್ಲಿ ಎದುರಾಳಿಯ ಬೆನ್ನನ್ನು ಮ್ಯಾಟ್‌ಗೆ ತಾಕಿಸಿದರೆ, ಅದನ್ನು ಫಾಲ್‌ ಅಥವಾ ಪಿನ್‌ ಎಂದು ಪರಿಗಣನೆ ಮಾಡಲಾಗುತ್ತದೆ. ಹಾಗೇನಾದರೂ ಮಾಡಿದಲ್ಲಿ, ಎದುರಾಳಿ 10 ಅಂಕದ ಒಳಗಾಗಿ ಎಷ್ಟೇ ಅಂಕದ ಮುನ್ನಡೆಯಲ್ಲಿದ್ದರೂ, ಫಾಲ್‌ ಮಾಡಿರುವ ಸ್ಪರ್ಧಿ ವಿಜೇತರಾಗುತ್ತಾರೆ. ಇದರೊಂದಿಗೆ ಭಾರತ ಕಾಮನ್ವೆಲ್ತ್‌ ಗೇಮ್ಸ್ನಲ್ಲಿ 8ನೇ ಚಿನ್ನದ ಪದಕ ಸಾಧನೆ ಮಾಡಿದಂತಾಗಿದೆ. 8 ಬೆಳ್ಳಿ ಪದಕ ಹಾಗೂ 7 ಕಂಚಿನ ಪದಕದೊಂದಿಗೆ ಭಾರತ ತಂಡ ಗೇಮ್ಸ್‌ನಲ್ಲಿ ಗೆದ್ದಿರುವ ಪದಕಳ ಸಂಖ್ಯೆ 23ಕ್ಕೇರಿದೆ. ಇದಕ್ಕೂ ಮುನ್ನ ಭಜರಂಗ್‌ ಪೂನಿಯಾ, ಪುರುಷರ 65 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಸಾಧನೆ ಮಾಡಿದ್ದರು. ಮಹಿಳೆಯರ 57 ಕೆಜಿ ವಿಭಾಗದಲ್ಲಿ ಆನ್ಶು ಮಲೀಕ್‌ ಬೆಳ್ಳಿ ಪದಕ ಗೆದ್ದಿದ್ದರು

ಫೈನಲ್ ಪಂದ್ಯದಲ್ಲಿ ಸಾಕ್ಷಿ ಮಲೀಕ್‌ ಕೆನಡಾದ ಅನಾ ಗೊಡಿನೆಜ್ ಗೊನ್ಜಾಲೆಜ್ ಅವರನ್ನು ಎದುರಿಸಿದ್ದರು. ಆರಂಭದಿಂದಲೇ ಮುನ್ನಡೆ ಕಂಡಿದ್ದ ಅನಾ, ಮೊದಲ ಅವಧಿಯ ಆಟದಲ್ಲಿ 4-0 ಮುನ್ನಡೆ ಕಂಡಿದ್ದರು. ಆದರೆ, 2ನೇ ಅವಧಿಯ ಆರಂಭದಲ್ಲಿಯೇ ಎದುರಾಳಿಯನ್ನು ಫಾಲ್‌ ಮಾಡಿದ ಸಾಕ್ಷಿ ಮಲೀಕ್‌ ಐತಿಹಾಸಿಕ ಚಿನ್ನದ ಪದಕ ಜಯಿಸಿದರು.

Tap to resize

Latest Videos

COMMONWEALTH GAMES 2022: ಭಜರಂಗ್‌ ಪೂನಿಯಾಗೆ ಸ್ವರ್ಣ, ಜನ್ಮದಿನದಂದೇ ಬೆಳ್ಳಿ ಗೆದ್ದ ಅನ್ಶು ಮಲೀಕ್‌!

ಇದಕ್ಕೂ ಮುನ್ನ 2014ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸಾಕ್ಷಿ ಮಲೀಕ್‌, 2018ರ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.

Commonwealth Games 2022: ಲಾಂಗ್‌ಜಂಪ್‌ನಲ್ಲಿ ಬೆಳ್ಳಿ ಗೆದ್ದು ಚರಿತ್ರೆ ನಿರ್ಮಿಸಿದ ಮುರುಳಿ ಶ್ರೀಶಂಕರ್

click me!