Commonwealth Games 2022: ಭಜರಂಗ್‌ ಪೂನಿಯಾಗೆ ಸ್ವರ್ಣ, ಜನ್ಮದಿನದಂದೇ ಬೆಳ್ಳಿ ಗೆದ್ದ ಅನ್ಶು ಮಲೀಕ್‌!

By Santosh NaikFirst Published Aug 5, 2022, 10:48 PM IST
Highlights

ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಅದ್ಭುತ ನಿರ್ವಹಣೆ ಮುಂದುವರಿದ್ದು, ಶುಕ್ರವಾರ ರೆಸ್ಲಿಂಗ್ ಸ್ಪರ್ಧೆಯಲ್ಲಿ 1 ಚಿನ್ನ 1 ಬೆಳ್ಳಿ ಪದಕವನ್ನು ಈವರೆಗೂ ಸಾಧನೆ ಮಾಡಿದೆ. ಪುರುಷರ 65 ಕೆಜಿ ಫ್ರೀ ಸ್ಟೈಲ್‌ ಕುಸ್ತಿಯಲ್ಲಿ ಭಜರಂಗ್‌ ಪೂನಿಯಾ ಸ್ವರ್ಣ ಪದಕ ಸಾಧನೆ ಮಾಡಿದರೆ, ಮಹಿಳೆಯರ 57 ಕೆಜಿ ಫ್ರೀಸ್ಟೈಲ್‌ನಲ್ಲಿ ಅನ್ಶು ಮಲೀಕ್‌ ತಮ್ಮ ಜನ್ಮದಿನದಂದೇ ಬೆಳ್ಳಿ ಪದಕವನ್ನು ಗೆದ್ದು ಸಂಭ್ರಮ ಆಚರಿಸಿದರು.
 

ಬರ್ಮಿಂಗ್‌ಹ್ಯಾಂ (ಆ.5): ಭಾರತೀಯ ಕುಸ್ತಿಪಟುಗಳು 2022ರ ಬರ್ಮಿಂಗ್‌ಹ್ಯಾಂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬರ್ಜರಿ ನಿರ್ವಹಣೆ ತೋರಿದ್ದಾರೆ. ಶುಕ್ರವಾರ ಸ್ಪರ್ಧೆಯಲ್ಲಿ 8 ಮಂದಿ ರೆಸ್ಲರ್‌ಗಳ ಪೈಕಿ ನಾಲ್ವರು ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದರು. ಇನ್ನು ಫೈನಲ್‌ ಪಂದ್ಯಗಳ ಪೈಕಿ, ಭಜರಂಗ್‌ ಪೂನಿಯಾ ಸ್ವರ್ಣ ಪದಕದ ಫಲಿತಾಂಶ ಪಡೆದರೆ, ಶುಕ್ರವಾರವೇ ತಮ್ಮ 21ನ ವರ್ಷದ ಜನ್ಮದಿನ ಆಚರಿಸಿಕೊಂಡ ಅನ್ಶು ಮಲೀಕ್‌ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು. ರಿಯೋ ಒಲಿಂಪಿಕ್‌ ಪದಕ ವಿಜೇತೆ ಸಾಕ್ಷಿ ಮಲೀಕ್‌ ಹಾಗೂ ದೀಪಕ್‌ ಪೂನಿಯಾ ಅವರ ಫಲಿತಾಂಶಗಳು ಇನ್ನಷ್ಟೇ ಬರಬೇಕಿದೆ. ಇನ್ನು ಮೋಹಿತ್‌ ಗ್ರೇವಾಲ್‌ ಹಾಗೂ ದಿವ್ಯಾ ಕ್ಯಾಕ್ರಿನ್‌ ಕಂಚಿನ ಪದಕದ ಹೋರಾಟದಲ್ಲಿ ಉಳಿದುಕೊಂಡಿದ್ದಾರೆ. ಪುರುಷರ 67 ಕೆಜಿ ವಿಭಾಗದಲ್ಲಿ ಭಜರಂಗ್‌ ಪೂನಿಯಾ ಸ್ವರ್ಣ ಪದಕ ಜಯಿಸಿದರು. ಫೈನಲ್‌ ಪಂದ್ಯದಲ್ಲಿ ಭರ್ಜರಿ ನಿರ್ವಹಣೆ ನೀಡಿದ ಟೋಕಿಯೋ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ಭಜರಂಗ್‌ ಪೂನಿಯಾ ಕೆನಡಾ ಎಲ್‌ ಮ್ಯಾಕ್ರನ್‌ರನ್ನು 9-2 ಅಂತರದಿಂದ ಸೋಲಿಸಿ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ತಮ್ಮ 2ನೇ ಸ್ವರ್ಣ ಪದಕ ಜಯಿಸಿದರು. ಇದಕ್ಕೂ ಮುನ್ನ 2018ರಲ್ಲಿ ಗೋಲ್ಡ್‌ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲೂ ಇದೇ ವಿಭಾಗದಲ್ಲಿ 28 ವರ್ಷದ ಭಜರಂಗ್‌ ಪೂನಿಯಾ ಸ್ವರ್ಣ ಸಾಧನೆ ಮಾಡಿದ್ದರು.

ಕೆನಡಾ ರೆಸ್ಲರ್‌ ವಿರುದ್ಧ ಜಯ: ಫೈನಲ್‌ ಪಂದ್ಯದ ಮೊದಲ ಅವಧಿಯ ಆಟದಲ್ಲಿಯೇ 4 ಅಂಕಗಳ ಮುನ್ನಡೆ ಪಡೆದುಕೊಂಡಿದ್ದ ಭಜರಂಗ್‌ ಪೂನಿಯಾಗೆ 2ನೇ ಅವಧಿಯ ಆಟದಲ್ಲಿ ಮೆಕ್ಲಾರೆನ್‌ ತಿರುಗೇಟು ನೀಡುವ ಪ್ರಯತ್ನ ಮಾಡಿದರು.  ಆರಂಭದಲ್ಲಿಯೇ ಎರಡು ಅಂಕ ಸಂಪಾದಿಸಲು ಯಶ ಕಂಡ ಮೆಕ್ಲಾರೆನ್‌ ಹೋರಾಟವನ್ನು ಮಣಿಸುವಲ್ಲಿ ಯಶಸ್ವಿಯಾದ ಭಜರಂಗ್‌ ಪೂನಿಯಾ ಸ್ವರ್ಣ ಪದಕವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭದ್ರತಾ ಉಲ್ಲಂಘನೆ: ಕುಸ್ತಿ ಅಖಾಡ ಬೇರೆಡೆಗೆ ಶಿಫ್ಟ್..!

ಮಹಿಳೆಯರ 57 ಕೆಜಿ ವಿಭಾಗದ ಫೈನಲ್‌ನಲ್ಲಿ ಅನ್ಶು ಮಲಿಕ್ ನೈಜೀರಿಯಾದ ಒಡುನಾಯೊ ಫೋಲಸಾಡೆ ಅವರನ್ನು ಎದುರಿಸಿದರು ಆದರೆ ಅಂಶು ಅವರು ಅತ್ಯುತ್ತಮ ಪ್ರದರ್ಶನ ಈ ಪಂದ್ಯದಲ್ಲಿ ಬರಲಿಲ್ಲ. ಇದರಿಂದಾಗಿ 3-7 ಅಂತರದಿಂದ ಸೋಲು ಕಂಡರು. ಆನ್ಶು ಕೊನೆಯ ಸೆಕೆಂಡುಗಳಲ್ಲಿ ಕೆಲವು ಅಂಕಗಳನ್ನು ಗಳಿಸುವ ಮೂಲಕ ತಿರುಗೇಟು ನೀಡಲು ಪ್ರಯತ್ನಿಸಿದರು ಆದರೆ ಅದು ಸಾಕಾಗಲಿಲ್ಲ. ಇದರಿಂದಾಗಿ ಅನ್ಶು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಮತ್ತೊಂದೆಡೆ, ಇದು ಒಡುನಾಯೊ ಅವರ ಸತತ ಮೂರನೇ  ಕಾಮನ್ವೆಲ್ತ್ ಗೇಮ್ಸ್‌ ಚಿನ್ನದ ಪದಕ ಇದಾಗಿದೆ. ಈ ಮನ್ನ ಗೋಲ್ಡ್‌ಕೋಸ್ಟ್‌ ಗೇಮ್ಸ್‌ನಲ್ಲಿ ಇದೇ ವಿಭಾಗದಲ್ಲಿ ಚಿನ್ನ ಗೆದ್ದಿದ್ದ ಒಡುನಾಯೊ, 2014ರ ಗ್ಲಾಸ್ಗೋ ಗೇಮ್ಸ್‌ನಲ್ಲಿ 53 ಕೆಜಿ ವಿಭಾಗದಲ್ಲಿ ಚಾಂಪಿಯನ್‌ ಆಗಿದ್ದರು. ಇದಕ್ಕೂ ಮುನ್ನ ಆನ್ಶು ಸೆಮಿಸ್‌ನಲ್ಲಿ ಶ್ರೀಲಂಕಾದ ನೆತ್ಮಿ ಪೊರುತೋಟಗೆಯನ್ನು ಸೋಲಿಸಿದ್ದರೆ,  ಕ್ವಾರ್ಟರ್‌ಫೈನಲ್‌ನಲ್ಲಿ ಆಸ್ಟ್ರೇಲಿಯದ ಐರಿನ್ ಸಿಮಿಯೊನಿಡಿಸ್ ಅವರನ್ನು ತಾಂತ್ರಿಕ ಶ್ರೇಷ್ಠತೆಯ ಮೂಲಕ ಮಣಿಸಿದ್ದರು. 2021 ರಲ್ಲಿ, ಅನ್ಶು ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡರು. 21ರ ಹರೆಯದ ಅವರು ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಮೂರು ಬಾರಿ ಪದಕ ಗೆದ್ದಿದ್ದಾರೆ.

ಗೆಲ್ಲೋಕೆ ಮೊದಲೇ ಮೊಬೈಲ್ ವಾಲ್‌ಪೇಪರ್‌ಗೆ ಚಿನ್ನದ ಪದಕ ಹಾಕ್ಕೊಂಡಿದ್ದೆ..! ಜೆರೆಮಿ ಲಾಲ್ರಿನುಂಗ ಮನದ ಮಾತು

ಫೈನಲ್‌ಗೇರಲು ವಿಫಲರಾದ ದಿವ್ಯಾ, ಮೋಹಿತ್‌: 68 ಕೆಜಿ ತೂಕ ವಿಭಾಗದಲ್ಲಿ ನೈಜೀರಿಯಾದ ಒಬೊರುದ್ದು ಬ್ಲೆಸ್ಸಿಂಗ್ ವಿರುದ್ಧ ದಿವ್ಯಾ ಕಕ್ರಾನ್ ಮಹಿಳೆಯರ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಕಂಡರು. ಆದರೆ ನಂತರ ಬ್ಲೆಸಿಂಗ್ ಫೈನಲ್ ತಲುಪಿದರು, ಇದರಿಂದಾಗಿ ದಿವ್ಯಾಗೆ ರೆಪೆಚೇಜ್ ಸುತ್ತಿನಲ್ಲಿ ಆಡುವ ಅವಕಾಶ ಸಿಕ್ಕಿತು. ಮೋಹಿತ್ ಗ್ರೆವಾಲ್ (125 ಕೆಜಿ) ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದರು, ನಂತರ ಅವರು ಕಂಚಿನ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ.
 

click me!