ಕೊಕೊ ಗಾಫ್ ಗೆ ಚೊಚ್ಚಲ ಫ್ರೆಂಚ್ ಓಪನ್ ಪ್ರಶಸ್ತಿ!

Published : Jun 08, 2025, 10:35 AM IST
COCO GAUFF

ಸಾರಾಂಶ

ಅಮೆರಿಕದ 21 ವರ್ಷದ ಕೊಕೊ ಗಾಫ್, ಫ್ರೆಂಚ್ ಓಪನ್ ಟೆನಿಸ್ ಗ್ರ್ಯಾನ್‌ಸ್ಲಾಂನ ಮಹಿಳಾ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಫೈನಲ್‌ನಲ್ಲಿ ವಿಶ್ವ ನಂ.2 ಆಟಗಾರ್ತಿ ಕೊಕೊ ಗಾಫ್, ವಿಶ್ವ ನಂ.1 ಬೆಲಾರುಸ್‌ನ ಅರೈನಾ ಸಬಲೆಂಕಾ ವಿರುದ್ಧ ಗೆಲುವು ಸಾಧಿಸಿದರು.

ಪ್ಯಾರಿಸ್: ಫ್ರೆಂಚ್ ಓಪನ್ ಟೆನಿಸ್ ಗ್ಯಾನ್‌ಸ್ಲಾಂ ಈ ವರ್ಷ ಹೊಸ ಚಾಂಪಿಯನ್‌ಗೆ ಸಾಕ್ಷಿಯಾಗಿದೆ. ಅಮೆರಿಕದ 21 ವರ್ಷದ ಕೊಕೊ ಗಾಫ್, ಮಹಿಳಾ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.ಶನಿವಾರ ನಡೆದ ಫೈನಲ್‌ನಲ್ಲಿ ವಿಶ್ವ ನಂ.2 ಆಟಗಾರ್ತಿ ಕೊಕೊ ಗಾಫ್, ವಿಶ್ವ ನಂ.1 ಬೆಲಾರುಸ್‌ನ ಅರೈನಾ ಸಬಲೆಂಕಾ ವಿರುದ್ಧ 6-7, 6-2, 6-4 ಸೆಟ್‌ಗಳಲ್ಲಿ ಗೆದ್ದು ಚೊಚ್ಚಲ ಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿಕೊಂಡರು.

ಭಾರೀ ರೋಚಕತೆಯಿಂದ ಕೂಡಿದ್ದ ಫೈನಲ್‌ನಲ್ಲಿ ಗೆಲುವು ಸಾಧಿಸಿದ ಕೊಕೊ, 10 ವರ್ಷ ಬಳಿಕ ಫ್ರೆಂಚ್ ಓಪನ್‌ನಲ್ಲಿ ಪ್ರಶಸ್ತಿ ಗೆದ್ದ ಅಮೆರಿಕ ಆಟಗಾರ್ತಿ ಎನ್ನುವ ಹಿರಿಮೆಗೆ ಪಾತ್ರರಾದರು. 2015ರಲ್ಲಿ ಸೆರೆನಾ ವಿಲಿಯಮ್ಸ್ ಜಯ ಸಾಧಿಸಿದ್ದ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕದ ಟೆನಿಸ್ ಆಟಗಾರ್ತಿಗೆ ಫ್ರೆಂಚ್ ಓಪನ್ ಒಲಿದಿದೆ. 78 ನಿಮಿಷಗಳ ಕಾಲ ನಡೆದ ಮೊದಲ ಸೆಟ್ ಟೈ ಬ್ರೇಕರ್ ಮೂಲಕ ನಿರ್ಧಾರಗೊಂಡಿತು. ಆರಂಭಿಕ ಮುನ್ನಡೆ ಪಡೆದ ಸಬಲೆಂಕಾ, ಚೊಚ್ಚಲ ಫ್ರೆಂಚ್ ಓಪನ್ ಜಯಿಸುವ ನಿರೀಕ್ಷೆಯಲ್ಲಿದ್ದರು. ಆದರೆ ಆ ನಂತರದ 2 ಸೆಟ್‌ಗಳಲ್ಲಿ ಕೊಕೊ, ಪ್ರಾಬಲ್ಯ ಮೆರೆದು ಪ್ರಶಸ್ತಿಗೆ ಮುತ್ತಿಟ್ಟರು.

 

2ನೇ ಗ್ರ್ಯಾನ್‌ಸ್ಲಾಂ ಜಯ

2023ರಲ್ಲಿ ತಮ್ಮ 19ನೇ ವಯಸ್ಸಿನಲ್ಲೇ ಯುಎಸ್ ಓಪನ್ ಗೆದ್ದಿದ್ದ ಕೊಕೊ ಗಾಫ್, 2ನೇ ಬಾರಿಗೆ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಜಯಿಸಿದ್ದಾರೆ. 2024ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಕೊಕೊ, 3 ಬಾರಿ ವಿಂಬಲ್ಡನ್‌ನಲ್ಲಿ 4ನೇ ಸುತ್ತಿನಲ್ಲೇ ಸೋಲು ಅನುಭವಿಸಿದ್ದಾರೆ. ಫ್ರೆಂಚ್ ಓಪನ್ ಹೊರತಾಗಿಯೂ ವಿಶ್ವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಕೊಕೊ 2ನೇ ಸ್ಥಾನದಲ್ಲೇ ಉಳಿಯಲಿದ್ದು, ಸಬಲೆಂಕಾ ಅಗ್ರಸ್ಥಾನ ಕಾಯ್ದುಕೊಳ್ಳಲಿದ್ದಾರೆ.

 

25ನೇ ಗ್ರ್ಯಾನ್ ಸ್ಲಾಂ ಗೆಲ್ಲುವ ಜೋಕೋವಿಚ್ ಕನಸು ಮತ್ತೆ ಭಗ್ನ!

ಪ್ಯಾರಿಸ್: ದಾಖಲೆಯ 25ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗೆಲ್ಲುವ ನೋವಾಕ್ ಜೋಕೋವಿಚ್ ಕನಸು ಮತ್ತೊಮ್ಮೆ ಭಗ್ನಗೊಂಡಿದೆ. ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿಸರ್ಬಿಯಾದ ಜೋಕೋವಿಚ್, ವಿಶ್ವ ನಂ.1, ಇಟಲಿಯ ಯಾನಿಕ್ ಸಿನ್ನರ್ ವಿರುದ್ಧ 4-6, 5-7, 7-6(3) ನೇರ ಸೆಟ್‌ಗಳಲ್ಲಿ ಜಯ ಸಾಧಿಸಿದರು.

ಒಂದೇ ಒಂದು ಸೆಟ್ ಸೋಲದೆ ಫೈನಲ್ ಪ್ರವೇಶಿಸಿರುವ ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಹಾಲಿ ಚಾಂಪಿಯನ್, ಸೇನ್‌ನ ಕಾರ್ಲೋಸ್ ಆಲ್ಕರಜ್ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.

ಮತ್ತೆ ಆಡುತ್ತೇನೋ ಗೊತ್ತಿಲ್ಲ!

ಇದು ನನ್ನ ಕೊನೆಯ ಫ್ರೆಂಚ್ ಓಪನ್ ಆದರೂ ಆಗಬಹುದು. ಮುಂದಿನ ವರ್ಷ ಇಲ್ಲಿ ಆಡಲು ನಾನು ಬರುತ್ತೇನೋ ಇಲ್ಲವೋ ಎಂಬುದು ಗೊತ್ತಿಲ್ಲ. ಈ ಕಾರಣಕ್ಕಾಗಿ ನಾನು ಹೆಚ್ಚು ಭಾವೋದ್ವೇಗಕ್ಕೆ ಒಳಗಾಗಿದ್ದೇನೆ.

• ನೋವಾಕ್ ಜೋಕೋವಿಚ್

ನಾರ್ವೆ ಚೆಸ್: ಕೊನೆ ಸುತ್ತಿನಲ್ಲಿ ಗುಕೇಶ್‌ಗೆ ಸೋಲು, ತಪ್ಪಿದ ಪ್ರಶಸ್ತಿ

ಸ್ಕ್ಯಾವೆಂಜರ್ (ನಾರ್ವೆ): ಹಾಲಿ ವಿಶ್ವ ಚಾಂಪಿಯನ್ ಡಿ.ಗುಕೇಶ್ ಶುಕ್ರವಾರ ಇಲ್ಲಿ ಮುಕ್ತಾಯಗೊಂಡ ಪ್ರತಿಷ್ಠಿತ ನಾರ್ವೆ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ಅವಕಾಶ ಕೈಚೆಲ್ಲಿದರು. 10ನೇ ಹಾಗೂ ಕೊನೆಯ ಸುತ್ತಿನಲ್ಲಿ ಗುಕೇಶ್, ಅಮೆರಿಕದ ಗ್ರ್ಯಾಂಡ್ ಮಾಸ್ಟರ್ ಫ್ಯಾಬಿಯಾನೋ ಕರುವಾನ ವಿರುದ್ಧ ಸೋಲುಂಡರು.

ಭಾರತದ ಅರ್ಜುನ್ ಎರಿಗೈಸಿ ವಿರುದ್ಧ ಡ್ರಾ ಸಾಧಿಸಿದ 5 ಬಾರಿ ವಿಶ್ವ ಚಾಂಪಿಯನ್, ನಾರ್ವೆಯ ಮ್ಯಾಗ್ನಸ್ ಕಾರ್ಲ್‌ನ್ 7ನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿದರು. ಕೊನೆಯ ಸುತ್ತಿನಲ್ಲಿ ಗುಕೇಶ್ ಗೆದ್ದಿದ್ದರೆ, ಚಾಂಪಿಯನ್ ಆಗುತ್ತಿದ್ದರು. ಮಹಿಳಾ ವಿಭಾಗದಲ್ಲಿ ಕೊನೆರು ಹಂಪಿ, ಆರ್.ವೈಶಾಲಿ ಸಹ ಪ್ರಶಸ್ತಿ ಗೆಲ್ಲಲು ವಿಫಲರಾದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

U19 Asia Cup: ಪಾಕಿಸ್ತಾನ ಎದುರು ಮುಗ್ಗರಿಸಿದ 14 ವರ್ಷದ ವೈಭವ್ ಸೂರ್ಯವಂಶಿ; ಸ್ಪರ್ಧಾತ್ಮಕ ಮೊತ್ತದತ್ತ ಯುವ ಪಡೆ ದಾಪುಗಾಲು
ಸಂಜು ಇನ್, ಗಿಲ್ ಔಟ್: ಮೂರನೇ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ; ಯಾರಿಗೆಲ್ಲಾ ಸಿಗಲಿದೆ ಚಾನ್ಸ್?