ಪುರುಷರ ಪಂದ್ಯಕ್ಕೆ ಮಹಿಳಾ ಅಂಪೈರ್..!

Published : Apr 28, 2019, 02:57 PM IST
ಪುರುಷರ ಪಂದ್ಯಕ್ಕೆ ಮಹಿಳಾ ಅಂಪೈರ್..!

ಸಾರಾಂಶ

ನಮೀಬಿಯಾ ಹಾಗೂ ಒಮನ್ ನಡುವಿನ ವಿಶ್ವ ಕ್ರಿಕೆಟ್ ಲೀಗ್ ಡಿವಿಜನ್-2 ಫೈನಲ್ ಪಂದ್ಯದಲ್ಲಿ ಕ್ಲೈರ್ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದರು. ಈ ಸಾಧನೆ ಮಾಡಿದ ಮೊದಲ ಮಹಿಳಾ ಅಂಪೈರ್ ಎಂಬ ಖ್ಯಾತಿಗೆ ಕ್ಲೈರ್ ಪಾತ್ರರಾಗಿದ್ದಾರೆ.

ದುಬೈ(ಏ.28): ಪುರುಷರ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಣೆ ಮಾಡುವ ಮೂಲಕ ಆಸ್ಟ್ರೇಲಿಯಾದ ಕ್ಲೈರ್ ಪೊಲೊಸಾಕ್ ನೂತನ ಇತಿಹಾಸ ನಿರ್ಮಿಸಿದ್ದಾರೆ. 

ಈ ಸಾಧನೆ ಮಾಡಿದ ಮೊದಲ ಮಹಿಳಾ ಅಂಪೈರ್ ಎಂಬ ಖ್ಯಾತಿಗೆ ಕ್ಲೈರ್ ಪಾತ್ರರಾಗಿದ್ದಾರೆ. ನಮೀಬಿಯಾ ಹಾಗೂ ಒಮನ್ ನಡುವಿನ ವಿಶ್ವ ಕ್ರಿಕೆಟ್ ಲೀಗ್ ಡಿವಿಜನ್-2 ಫೈನಲ್ ಪಂದ್ಯದಲ್ಲಿ ಕ್ಲೈರ್ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದರು. 

ಏಕದಿನ ವಿಶ್ವಕಪ್: ಕೊಹ್ಲಿಗೆ ಶುಭ ಕೋರಿದ ಖನ್ನಾ

ನವದೆಹಲಿ: ಬಿಸಿಸಿಐನ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ಶನಿವಾರ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಭೇಟಿ ಮಾಡಿದ್ದು, ಮುಂಬರುವ ಏಕದಿನ ವಿಶ್ವಕಪ್ ಹಿನ್ನೆಲೆಯಲ್ಲಿ ಶುಭ ಕೋರಿದ್ದಾರೆ. 

ವೈಯಕ್ತಿಕ ಕಾರಣಗಳಿಂದ ಶನಿವಾರ ನಡೆದ ಸಿಒಎ ಸಭೆಗೆ ಗೈರಾಗಿದ್ದ ಖನ್ನಾ, ಆರ್‌ಸಿಬಿ ತಂಡ ಉಳಿದುಕೊಂಡಿದ್ದ ಹೋಟೆಲ್‌ಗೆ ತೆರಳಿ ವಿರಾಟ್ ಕೊಹ್ಲಿಯನ್ನು ಭೇಟಿಯಾಗಿದ್ದಾರೆ. ‘ಒಳ್ಳೆಯದಾಗಲಿ ಎಂದು ಕೊಹ್ಲಿಗೆ ಶುಭ ಕೋರಿದೆ. ಕೊಹ್ಲಿ ನೇತೃತ್ವದಲ್ಲಿ ಭಾರತ ತಂಡವು ವಿಶ್ವಕಪ್ ಜಯಿಸಲಿದೆ ಎನ್ನುವ ವಿಶ್ವಾಸವಿದೆ ಎಂದು ಖನ್ನಾ ತಿಳಿಸಿದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಬ್ಯಾಗ್ ಪ್ಯಾಕ್ ಮಾಡಿ ರೆಡಿಯಾಗು': ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಹೀಗಂದಿದ್ದು ಯಾರಿಗೆ ಗೊತ್ತಾ?
ಹಿಂದು-ಮುಸ್ಲಿಂ ಧರ್ಮದ ಗೋಡೆ ದಾಟಿ ಒಂದಾದ ಮೊಹಮ್ಮದ್ ಕೈಫ್-ಪೂಜಾ ಯಾದವ್ ಜೋಡಿ; ಇದು ಬಾಲಿವುಡ್‌ಗಿಂತ ರೋಚಕ ಲವ್‌ಸ್ಟೋರಿ!