7ನೇ ಸೋಲಿಗೆ ಸಾಕ್ಷಿಯಾಗುತ್ತಾ ಕೆಕೆಆರ್..?

By Web DeskFirst Published Apr 28, 2019, 1:41 PM IST
Highlights

ಇದುವರೆಗೂ ಐಪಿಎಲ್‌ನಲ್ಲಿ ಮುಂಬೈ ಹಾಗೂ ಕೆಕೆಆರ್ 23 ಪಂದ್ಯಗಳಲ್ಲಿ ಎದುರಾಗಿವೆ. ಇದರಲ್ಲಿ ಮುಂಬೈ 18 ಪಂದ್ಯಗೆದ್ದು ಪ್ರಾಬಲ್ಯ ಸಾಧಿಸಿದೆ. ಅಲ್ಲದೇ ಈ ಹಿಂದೆ ಆಡಿದ ಸತತ 8 ಪಂದ್ಯಗಳಲ್ಲಿ ಜಯಭೇರಿ ಬಾರಿಸಿರುವ ಮುಂಬೈ ಇದನ್ನು ಮುಂದುವರಿಸುವ ವಿಶ್ವಾಸದಲ್ಲಿದೆ.

ಕೋಲ್ಕತಾ[ಏ.28]: ಪ್ಲೇ ಆಫ್ ಮೇಲೆ ಕಣ್ಣಿಟ್ಟಿರುವ ಮುಂಬೈ ಇಂಡಿಯನ್ಸ್ ಇಲ್ಲಿನ ಈಡನ್ ಗಾರ್ಡನ್ಸ್‌ನಲ್ಲಿ ಭಾನುವಾರ ಕೋಲ್ಕತಾ ನೈಟ್ ರೈಡರ್ಸ್ ಎದುರು ಸೆಣಸಲು ಸಜ್ಜಾಗಿದೆ. ಚೆನ್ನೈ ವಿರುದ್ಧ ಕಳೆದ ಪಂದ್ಯದಲ್ಲಿ ಗೆದ್ದಿದ್ದ ರೋಹಿತ್ ಶರ್ಮಾ, ಕೆಕೆಆರ್ ವಿರುದ್ಧ ಮತ್ತೊಂದು ಗೆಲುವು ಸಾಧಿಸಿ ಪ್ಲೇ ಆಫ್ ಹಾದಿಯನ್ನು ಖಚಿತ ಪಡಿಸಿ ಕೊಳ್ಳುವ ಉತ್ಸಾಹದಲ್ಲಿದ್ದಾರೆ.

ಇದುವರೆಗೂ ಐಪಿಎಲ್‌ನಲ್ಲಿ ಮುಂಬೈ ಹಾಗೂ ಕೆಕೆಆರ್ 23 ಪಂದ್ಯಗಳಲ್ಲಿ ಎದುರಾಗಿವೆ. ಇದರಲ್ಲಿ ಮುಂಬೈ 18 ಪಂದ್ಯಗೆದ್ದು ಪ್ರಾಬಲ್ಯ ಸಾಧಿಸಿದೆ. ಅಲ್ಲದೇ ಈ ಹಿಂದೆ ಆಡಿದ
ಸತತ 8 ಪಂದ್ಯಗಳಲ್ಲಿ ಜಯಭೇರಿ ಬಾರಿಸಿರುವ ಮುಂಬೈ ಇದನ್ನು ಮುಂದುವರಿಸುವ ವಿಶ್ವಾಸದಲ್ಲಿದೆ.

ಕೆಕೆಆರ್ ಕಳೆದ 4 ವರ್ಷಗಳ ಹಿಂದೆ ಮುಂಬೈ ತಂಡವನ್ನು ಮಣಿಸಿತ್ತು. ಆದಾದ ಮೇಲೆ ಕೆಕೆಆರ್, ಮುಂಬೈ ವಿರುದ್ಧ ಒಂದು ಗೆಲುವು ಸಾಧಿಸಿಲ್ಲ. ಈಡನ್ ಗಾರ್ಡನ್ಸ್ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ. ಈ ಪಿಚ್‌ನಲ್ಲಿ ನಡೆದಿರುವ ಹಿಂದಿನ 5 ಪಂದ್ಯಗಳ 3 ಇನ್ನಿಂಗ್ಸ್‌ಗಳಲ್ಲಿ 200ಕ್ಕಿಂತ ಹೆಚ್ಚಿನ ಮೊತ್ತ ದಾಖಲಾಗಿದೆ. ಆ ಐದು ಪಂದ್ಯಗಳ ಪೈಕಿ ಮೂರರಲ್ಲಿ ಮೊದಲು ಬೌಲಿಂಗ್ ಮಾಡಿದ ತಂಡ ಗೆದ್ದಿದೆ. ಅಂದರೆ ಚೇಸಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಲಾಭ ದೊರಕಿದೆ. ಹೀಗಾಗಿ ಟಾಸ್ ಪ್ರಮುಖ ಪಾತ್ರವಹಿಸಲಿದೆ.

ಸಂಭಾವ್ಯ ತಂಡ:

ಕೆಕೆಆರ್: ಲಿನ್, ಗಿಲ್, ರಾಣಾ, ಕಾರ್ತಿಕ್,ನರೈನ್, ರಸೆಲ್, ಬ್ರಾಥ್’ವೈಟ್, ರಿಂಕು, ಪೀಯೂಶ್, ಪೃಥ್ವಿರಾಜ್, ಪ್ರಸಿದ್ಧ್

ಮುಂಬೈ: ರೋಹಿತ್, ಡಿಕಾಕ್, ಲೆವಿಸ್, ಕೃನಾಲ್, ಹಾರ್ದಿಕ್, ಪೊಲ್ಲಾರ್ಡ್, ಸೂರ್ಯಕುಮಾರ್, ಅನುಕೂಲ್, ರಾಹುಲ್, ಮಾಲಿಂಗ, ಬುಮ್ರಾ

ಸ್ಥಳ; ಕೋಲ್ಕತಾ
ಆರಂಭ: ರಾತ್ರಿ 8.00
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1   

click me!