ಬಿಸಿಸಿಐ ಲೋಗೋ ಬಗ್ಗೆ ಮಾಹಿತಿ ಆಯೋಗ ಅಸಮಾಧಾನ

By Suvarna Web DeskFirst Published Jun 19, 2017, 4:45 PM IST
Highlights

1857ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಬಳಿಕ, ಬ್ರಿಟಿಷರು ಭಾರತದ ಮೇಲೆ ಸಾರ್ವಭೌಮತ್ವ ಸಾಧಿಸಿದರು.

ನವದೆಹಲಿ(ಜೂ.19): ಬಿಸಿಸಿಐ ಬಳಸುತ್ತಿರುವ ಲಾಂಛನದ ಬಗ್ಗೆ ಕೇಂದ್ರ ಮಾಹಿತಿ ಆಯೋಗ ಅಸಮಧಾನ ವ್ಯಕ್ತಪಡಿಸಿದೆ.

ವಸಾಹತುಶಾಯಿ ಆಡಳಿತದ ಸಂದರ್ಭದಲ್ಲಿ  ಬ್ರಿಟಿಷರು ತಮ್ಮ ನೆಚ್ಚಿನ ರಾಜರಿಗೆ ನೀಡುತ್ತಿದ್ದ 'ಸ್ಟಾರ್ ಇಂಡಿಯಾ' ಗೌರವವನ್ನೇ ಹೋಲುವ ಲಾಂಛನವನ್ನು ಬಿಸಿಸಿಐ ಇನ್ನೂ ಏಕೆ ಬಳಸುತ್ತಿದೆ ಎಂದು ಪ್ರಧಾನಿ ಕಚೇರಿ, ಕ್ರೀಡಾ ಮತ್ತು ಕಾನೂನು ಸಚಿವಾಲಯವನ್ನು ಪ್ರಶ್ನಿಸಿದೆ.

‘1857ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಬಳಿಕ, ಬ್ರಿಟಿಷರು ಭಾರತದ ಮೇಲೆ ಸಾರ್ವಭೌಮತ್ವ ಸಾಧಿಸಿದರು. ಅಂದಿನಿಂದ ಭಾರತದಲ್ಲಿ ಆಡಳಿತ ನಡೆಸುವ ನಿಷ್ಠಾವಂತ ರಾಜರಿಗೆ ನೈಡ್‌ ಹುಡ್‌ ಗೌರವ ನೀಡುವ ಪರಿಪಾಠ ಆರಂಭಿಸಿತು. 1948ರ ಬಳಿಕ ಈ ಯಾರಿಗೂ ಈ ಗೌರವ ಪ್ರದಾನ ಮಾಡಿಲ್ಲ. ಆದರೆ, ಬಿಸಿಸಿಐ ಇಂದಿಗೂ ಸಾಂಕೇತಿಕವಾಗಿ ವಸಾಹತು ಶಾಹಿ ವ್ಯವಸ್ಥೆಗೆ ಜೋತು ಬಿದ್ದಂತೆ ಕಾಣುತ್ತದೆ. ತಮ್ಮ ಬಾವುಟ ಹಾಗೂ ಲಾಂಛನದಲ್ಲಿ ಬ್ರಿಟಿಷರರು ಬಳಸುತ್ತಿದ್ದ ಸ್ಟಾರ್‌' ಅನ್ನೇ ಬಳಸುತ್ತಿದ್ದಾರೆ ಎಂದಿದೆ.

ಕೇಂದ್ರ ಸರ್ಕಾರ ಇದರತ್ತ ಗಮನ ಹರಿಸಬೇಕಾಗಿದೆ. ನಮ್ಮತನವನ್ನು ಪ್ರತಿಬಿಂಬಿಸುವ ಲಾಂಛನ ಬಳಸುವುದು ಸೂಕ್ತ ಎಂದಿದೆ.

click me!