5,202 ಎಸೆತದ ಬಳಿಕ ಮೊದಲ ನೋ ಬಾಲ್; ಇಂಗ್ಲೆಂಡ್ ವೇಗಿಗೆ ನಿರಾಸೆ!

By Web DeskFirst Published Sep 17, 2019, 6:04 PM IST
Highlights

ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್ ಟೆಸ್ಟ್ ಕರಿಯರ್‌ನಲ್ಲಿ ಇದೇ ಮೊದಲ ಬಾರಿಗೆ ನೋ ಬಾಲ್ ಎಸೆದಿದ್ದಾರೆ. ಇಷ್ಟು ದಿನ ನೋ ಬಾಲ್ ಎಸೆಯದ ಸರದಾರ ಅನ್ನೋ ಪಟ್ಟ ಕಳಚಿಕೊಂಡಿದೆ.

ಲಂಡನ್(ಸೆ.17): ಆ್ಯಷಸ್ ಟೆಸ್ಟ್ ಸರಣಿ ಅಂತ್ಯಗೊಂಡಿದೆ. ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿದರೂ, ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಟ್ರೋಫಿ ತನ್ನಲ್ಲೇ ಉಳಿಸಿಕೊಂಡಿದೆ. ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ಉತ್ತಮ ಪ್ರದರ್ಶನ ನೀಡಿ ಸರಣಿಯನ್ನು 2-2 ಅಂತರದದಲ್ಲಿ ಸಮಬಲ ಮಾಡಿಕೊಂಡು ನಿಟ್ಟುಸಿರು ಬಿಟ್ಟಿತು. ಆದರೆ ಈ ಪಂದ್ಯದಲ್ಲಿ ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್ ಎಸೆತದ ನೋ ಬಾಲ್ ಇದೀಗ ಭಾರೀ ಸದ್ದು ಮಾಡಿದೆ.

ಇದನ್ನೂ ಓದಿ: ಆ್ಯಷಸ್‌ ಕದನ: ಇಂಗ್ಲೆಂಡ್’ಗೆ 135 ರನ್ ಗೆಲುವು

ಕ್ರಿಸ್ ವೋಕ್ಸ್ ಎಸೆತ ಬಾಲ್, ಆಸ್ಟ್ರೇಲಿಯಾ ಮಧ್ಯಮ  ಕ್ರಮಾಂಕದ ಬ್ಯಾಟ್ಸ್‌ಮನ್ ಮಿಚೆಲ್ ಮಾರ್ಶ್‌ ಬ್ಯಾಟ್‌ಗೆ ತಾಗಿ ಸ್ಲಿಪ್ ಫೀಲ್ಡರ್‌ನತ್ತ ಚಿಮ್ಮಿತ್ತು. ತಕ್ಷಣವೇ ರೊರಿ ಬರ್ನ್ಸ್ ಅದ್ಭುತವಾಗಿ ಕ್ಯಾಚ್ ಹಿಡಿದಿದ್ದರು.  ಇತ್ತ ಇಂಗ್ಲೆಂಡ್ ಸಂಭ್ರಮ ಆರಂಭಗೊಂಡಿತ್ತು. ಆದರೆ ಅಂಪೈರ್ ನೋ ಬಾಲ್ ಎಂದು ಘೋಷಿಸಿದರು. ಈ ನಿರ್ಧಾರ ಕ್ರಿಸ್ ವೋಕ್ಸ್ ಹಾಗೂ ಇಂಗ್ಲೆಂಡ್‌ಗೆ  ನಿರಾಸೆ ಮಾತ್ರವಲ್ಲ. ತೀವ್ರ ಹಿನ್ನಡೆಯನ್ನು ತಂದಿತ್ತು. ಈ ನೋ ಬಾಲ್ ಕ್ರಿಸ್ ವೋಕ್ಸ್ ಕ್ರಿಕೆಟ್ ಕರಿಯರ್‌ನಲ್ಲಿ ನೋ ಬಾಲ್ ಎಸೆಯದ ಸರದಾರ ಅನ್ನೋ ಪಟ್ಟವನ್ನು ಕಿತ್ತುಕೊಂಡಿತು.

ಇದನ್ನೂ ಓದಿ: ICC ಟೆಸ್ಟ್ ರ‍್ಯಾಂಕಿಂಗ್ ಪ್ರಕಟ; ಅಗ್ರಸ್ಥಾನದಲ್ಲಿ ಸ್ಮಿತ್, ವಿರಾಟ!

ಕ್ರಿಸ್ ವೋಕ್ಸ್ ಬರೋಬ್ಬರಿ 867 ಓವರ್ ಬಳಿಕ, ಅಂದರೆ 5,202 ಎಸೆತದ ಬಳಿಕ ಕ್ರಿಸ್ ವೋಕ್ಸ್ ಮೊದಲ ನೋ ಬಾಲ್ ಎಸೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೇ ಒಂದು ನೋ ಬಾಲ್ ಎಸೆಯದ ಕ್ರಿಸ್ ವೋಕ್ಸ್, ಆ್ಯಷಸ್ ಸರಣಿಯಲ್ಲಿ ನೋ ಬಾಲ್ ಎಸೆಯೋ ಮೂಲಕ ತೀವ್ರ ನಿರಾಸೆ ಅನುಭವಿಸಿದರು. ಇಷ್ಟೇ ಅಲ್ಲ ಯಾವುದೇ ವಿಕೆಟ್ ಕಬಳಿಸಿದೇ ಹಿನ್ನಡೆ ಅನುಭವಿಸಿದರು.

click me!