ಕೆನಾಡ ಟಿ20 ಲೀಗ್ ಟೂರ್ನಿಯಲ್ಲಿ ವೆಸ್ಟ್ಇಂಡೀಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಬಾರಿ ಸದ್ದು ಮಾಡಿದ್ದಾರೆ. ಈ ಬಾರಿ ಗೇಲ್ ಸುದ್ದಿಯಾಗಿರೋದು ಬ್ಯಾಟಿಂಗ್ ಮೂಲಕ ಅಲ್ಲ, ಅದ್ಬುತ ಕ್ಯಾಚ್ ಹಿಡಿಯೋ ಮೂಲಕ. ಹಾಗಾದರೆ ಗೇಲ್ ಕ್ಯಾಚ್ ಹೇಗಿದೆ? ಇಲ್ಲಿದೆ ನೋಡಿ.
ಲಂಡನ್(ಜು.18): ಕೆನಾಡ ಗ್ಲೋಬಲ್ ಟಿ20 ಲೀಗ್ ಟೂರ್ನಿ ಎಷ್ಟು ಜನಪ್ರೀಯವಾಗಿದೆಯೋ ಗೊತ್ತಿಲ್ಲ, ಆದರೆ ಟೂರ್ನಿಯಲ್ಲಿ ವೆಸ್ಟ್ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಹಿಡಿದ ಕ್ಯಾಚ್ ಮಾತ್ರ ಭಾರಿ ವೈರಲ್ ಆಗಿದೆ.
ಇತ್ತೀಚೆಗಷ್ಟೇ ಮುಕ್ತಾಯ ವಾದ ಕೆನಡಾ ಟಿ20 ಲೀಗ್‌ನಲ್ಲಿ ವಿಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಸ್ಲಿಪ್‌ನಲ್ಲಿ ಒಂದು ಕೈಯಲ್ಲಿ ಹಿಡಿದ ಕ್ಯಾಚ್ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಎಡಗೈನಲ್ಲಿ ಚೆಂಡು ಪುಟಿದಿದ್ದರಿಂದ ಬಲಗೈನಲ್ಲಿ ಕ್ಯಾಚ್ ಪಡೆಯುವಲ್ಲಿ ಗೇಲ್ ಯಶಸ್ವಿಯಾದರು.
What a catch from the pic.twitter.com/GhDmgWDFGi
— GT20 Canada (@GT20Canada)
ಸ್ಫೋಟಕ ಬ್ಯಾಟಿಂಗ್ ಮೂಲಕ ಅಭಿಮಾನಿಗಳನ್ನ ರಂಜಿಸುತ್ತಿದ್ದ ಕ್ರಿಸ್ ಗೇಲ್, ವೃತ್ತಿಜೀವನದಲ್ಲಿ ಶ್ರೇಷ್ಠಕ್ಯಾಚ್ ಹಿಡಿದ ಸಾಧನೆಗೂ ಪಾತ್ರರಾಗಿದ್ದಾರೆ. ಭಾನು ವಾರ ನಡೆದ ಕೆನಡಾ ಟಿ20 ಲೀಗ್ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ‘ಬಿ’ ತಂಡವನ್ನು 7 ವಿಕೆಟ್ ಗಳಿಂದ ಮಣಿಸಿದ ಗೇಲ್ ನಾಯಕತ್ವದ ವ್ಯಾನ್‌ಕೊವರ್ ನೈಟ್ಸ್ ತಂಡ ಚಾಂಪಿಯನ್ ಆಯಿತು