
ಲೀಡ್ಸ್(ಜು.17): ಭಾರತ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನತ್ತ ದಾಪುಗಾಲಿಟ್ಟಿದೆ. ಜೋ ರೂಟ್ ಹಾಗೂ ನಾಯಕ ಇಯಾನ್ ಮಾರ್ಗನ್ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ಸರಣಿ ಗೆಲುವಿಗೆ ಸಜ್ಜಾಗಿದೆ.
3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ 257 ರನ್ ಟಾರ್ಗೆಟ್ ಚೇಸ್ ಮಾಡುತ್ತಿರುವ ಇಂಗ್ಲೆಂಡ್ ತಂಡಕ್ಕೆ ಜಾನಿ ಬೈರಿಸ್ಟೋ ಹಾಗೂ ಜೇಮ್ಸ್ ವಿನ್ಸ್ ಅತ್ಯುತ್ತಮ ಆರಂಭ ನೀಡಿದರು. ಬೈರಿಸ್ಟೋ 30 ರನ್ ಸಿಡಿಸಿ ಔಟಾದರು. ಜೇಮ್ಸ್ ವಿನ್ಸ್ 27 ರನ್ ಕಾಣಿಕೆ ನೀಡಿದರು.
ಆರಂಭಿಕರ ವಿಕೆಟ್ ಕಬಳಿಸಿ ಯಶಸ್ಸು ಸಾಧಿಸಿದ ಟೀಂ ಇಂಡಿಯಾ ಮತ್ತೆ ಮಕಾಡೆ ಮಲಗಿತು. ಜೋ ರೂಟ್ ಹಾಗೂ ನಾಯಕ ಇಯಾನ್ ಮಾರ್ಗನ್ ಜೊತೆಯಾಟಕ್ಕೆ ಟೀಂ ಇಂಡಿಯಾ ಸುಸ್ತಾಯಿತು. ರೂಟ್ ಹಾಗೂ ಮಾರ್ಗನ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು.
ರೂಟ್ ಹಾಗೂ ಮಾರ್ಗನ್ ಶತಕದ ಜೊತೆಯಾಟದಿಂದ ಟೀಂ ಇಂಡಿಯಾದ ಸರಣಿ ಗೆಲುವಿನ ಕನಸು ಬಹುತೇಕ ಕಮರಿಹೋಗಿದೆ. ಸದ್ಯ ಇಂಗ್ಲೆಂಡ್ ಉತ್ತಮ ಸ್ಥಿತಿಯಲ್ಲಿದ್ದೂ ಭಾರತದ ಸರಣಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕೋ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.