
ಮೊಹಾಲಿ(ಮಾ.30): ಐಪಿಎಲ್ ಟೂರ್ನಿಯಲ್ಲಿ ಕ್ರಿಸ್ ಗೇಲ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮೊಹಾಲಿ ಯಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕ್ರಿಸ್ ಗೇಲ್ ಬರೋಬ್ಬರಿ 300 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಈ ಬ್ಯಾಟ್ಸ್‌ಮನ್ ಐಪಿಎಲ್ ಟೂರ್ನಿಯಲ್ಲಿ ಯಾರೂ ಮಾಡದ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ CSKಗೆ ಶಾಕ್!
ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ ಗೇಲ್ ಮೊದಲ ಸ್ಥಾನ ಅಲಂಕರಿಸಿದ್ದಾರೆ. ವಿಶೇಷ ಅಂದರೆ 2 ಹಾಗೂ 3ನೇ ಸ್ಥಾನದಲ್ಲಿರುವ ಬ್ಯಾಟ್ಸ್‌ಮನ್‌ಗಳು 200 ಸಿಕ್ಸರ್ ಗಡಿ ಕೂಡ ದಾಟಿಲ್ಲ. 2ನೇ ಸ್ಥಾನದಲ್ಲಿರುವ ಎಬಿ ಡಿವಿಲಿರ್ಸ್ 192 ಸಿಕ್ಸರ್ ಸಿಡಿಸಿದ್ದರೆ, ಎಂ.ಎಸ್.ಧೋನಿ 187 ಸಿಕ್ಸರ್ ಬಾರಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಸೇರಿಕೊಂಡ್ರಾ ಕ್ರಿಸ್ ಗೇಲ್?
ಗೇಲ್ ಆರಂಭಿಕ 100 ಸಿಕ್ಸರ್‌ಗಳನ್ನು 37 ಇನ್ನಿಂಗ್ಸ್‌ಗಳಲ್ಲಿ ಪೂರೈಸಿದ್ದಾರೆ. ಇನ್ನು 200 ಸಿಕ್ಸರ್ 69 ಇನ್ನಿಂಗ್ಸ್ ಹಾಗೂ 114 ಇನ್ನಿಂಗ್ಸ್‌ಗಳಲ್ಲಿ 300 ಸಿಕ್ಸರ್ ಪೂರೈಸಿದ್ದಾರೆ. ಸಿಕ್ಸರ್‌ನಿಂದಲೇ ಗೇಲ್ 1800 ರನ್ ಸಿಡಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.