ಈ ಯುವತಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕಾಲುವೆಹಳ್ಳಿ ಗ್ರಾಮದ ಮಂಜುನಾಥ್ ಮತ್ತು ಶಾಂತ ದಂಪತಿಗಳ ಪುತ್ರಿ ಪಲ್ಲವಿ. ಈಕೆ ನೋಡಲು ಸುಂದರವಾಗಿದ್ರು ಸಹ ಈಕೆಯ ಹಿನ್ನೆಲೆ ಮಾತ್ರ ತುಂಭಾ ಶೋಚನೀಯ. ಆದ್ರೆ ಆ ನೆಪದಲ್ಲಿ ಅಶಕ್ತಳೆಂದು ಮನೆಯಲ್ಲಿ ಕೂರದ ಪಲ್ಲವಿ ಮಾಡಿರುವ ಸಾಧನೆ ಇಡೀ ದೇಶಕ್ಕೊಂದು ಹೆಮ್ಮೆ, ಜಿಲ್ಲೆಗೆ ಸಾಧನೆ ಗರಿ.
- ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ(ಜು.28): ಆಕೆ ಎಲ್ಲರಂತೆ ಓಡಾಡಿ ಕೊಂಡಿರಬೇಕಿದ್ದ ಯುವತಿ. ಆದ್ರೆ 20ವರ್ಷದ ಹಿಂದೆ ನಡೆದ ಆಕಸ್ಮಿಕ ಅಪಘಾತ ಆಕೆಯ ಬದುಕಿಗೆ ಕೊಳ್ಳಿ ಇಟ್ಟಿತ್ತು. ಹೀಗಾಗಿ ಓಡಾಡಲು ಆಗದಂತಹ ಸ್ಥಿತಿಯಲ್ಲಿದ್ರು ಎದೆಗುಂದದ ಆ ಯುವತಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರತಿಭೆಯನ್ನು ಅನಾವರಣ ಮಾಡಿದ್ದಾರೆ. ಇಡೀ ದೇಶವೇ ಮೆಚ್ಚುವಂತಹ ಸಾಧನೆಗೈದಿದ್ದಾರೆ. ಅರೆ..! ಅಷ್ಟಕ್ಕೂ ಆಕೆ ಮಾಡಿರುವ ಸಾ ಧನೆ ಆದ್ರು ಏನಂತೀರ..? ಹಾಗಾದ್ರೆ ಈ ಸ್ಟೋರಿ ನೋಡಿ....,
undefined
ನೋಡಿ ಹೀಗೆ ವೀಲ್ ಚೇರ್ ಮೇಲೆ ಕುಳಿತಿರೋ ಈ ಯುವತಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕಾಲುವೆಹಳ್ಳಿ ಗ್ರಾಮದ ಮಂಜುನಾಥ್ ಮತ್ತು ಶಾಂತ ದಂಪತಿಗಳ ಪುತ್ರಿ ಪಲ್ಲವಿ. ಈಕೆ ನೋಡಲು ಸುಂದರವಾಗಿದ್ರು ಸಹ ಈಕೆಯ ಹಿನ್ನೆಲೆ ಮಾತ್ರ ತುಂಭಾ ಶೋಚನೀಯ. ಆದ್ರೆ ಆ ನೆಪದಲ್ಲಿ ಅಶಕ್ತಳೆಂದು ಮನೆಯಲ್ಲಿ ಕೂರದ ಪಲ್ಲವಿ ಮಾಡಿರುವ ಸಾಧನೆ ಇಡೀ ದೇಶಕ್ಕೊಂದು ಹೆಮ್ಮೆ, ಜಿಲ್ಲೆಗೆ ಸಾಧನೆ ಗರಿ. ಹೌದು, ಮನಸಿದ್ರೆ ಮಾರ್ಗ ಎಂಬ ಮಾತಿನಂತೆ, ತನ್ನ ನಾಲ್ಕನೆ ವಯಸ್ಸಲ್ಲಿ ಟ್ರಾಕ್ಟರೊಂದು ಡಿಕ್ಕಿ ಹೊಡೆದ ಪರಿಣಾಮ ತನ್ಮ ಸ್ಪೈನಲ್ ಕಾರ್ಡ್ ವೈಫಲ್ಯವಾಗಿ ತನ್ನ ಕಾಲು ಹಾಗೂ ಸೊಂಟದ ಸ್ವಾಧೀನ ಕಳೆದುಕೊಂಡ ಪಲ್ಲವಿ, ತನ್ನ ಬದುಕು ಇಲ್ಲಿಗೆ ಅಂತ್ಯವೆಂದು ಭಾವಿಸಿದ್ರು. ಆದ್ರೆ ಸ್ಪೈನಲ್ ಕಾರ್ಡ್ ಚಿಕಿತ್ಸೆಗೆಂದು ಬೆಂಗಳೂರಿಗೆ ತೆರಳಿದ್ದಾಗ, ಅಲ್ಲಿನ ವಿಕಲಚೇತನರಿಂದ ಸ್ಪೂರ್ತಿ ಪಡೆದ ಪಲ್ಲವಿ,ಛಲದಿಂದ ಬ್ಯಾಡ್ಮಿಂಟನ್ ಅಭ್ಯಾಸ ಮಾಡಿ ಉಗಾಂಡದಲ್ಲಿ ನಡೆದ ಅಂತರರಾಷ್ಟ್ರೀಯ ಪಂದ್ಯಾವಳಿಯಲ್ಲಿ ಬಂಗಾರದ ಪದಕ ಗಳಿಸಿದ್ದಾರೆ. ಈಕೆ ಅಂಗವಿಕಲರ ವಿಭಾಗದಲ್ಲಿ ಎರಡು ರಾಷ್ಟ್ರೀಯ ಹಾಗು ಒಂದು ಅಂತರರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದು, ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಇಂಡೋನೇಷಿಯಾದಲ್ಲಿ ಮತ್ತೊಂದು ಅಂತರರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗಿಯಾಗಲು ಸಜ್ಜಾಗಿದ್ದಾರೆ. ಈ ಯುವತಿಯ ಸಾಧನೆ ಆಕಸ್ಮಿಕ ಅವಘಡದಲ್ಲಿ ತಮ್ಮ ಅಂಗಾಂಗಗಳನ್ನು ಕಳೆದುಕೊಂಡ ವಿಕಲಚೇತನರಿಗೆ ಮಾದರಿ ಎನಿಸಿದೆ.
ಮುಗಿಯಿತಾ ಈ ಸ್ಟಾರ್ ಕ್ರಿಕೆಟಿಗನ ಅಂತಾರಾಷ್ಟ್ರೀಯ ವೃತ್ತಿಬದುಕು..! ಸುಳಿವು ಕೊಟ್ಟ ಟೀಂ ಇಂಡಿಯಾ ವೇಗಿ..!
ಇನ್ನು ಈ ಯುವತಿಯು ಜೀವನ ಪರ್ಯಂತ ಹೆತ್ತವರಿಗೆ ಹೊರೆಯಾಗಿರುವುದು ಹೇಗೆಂಬ ಆತಂಕದಲ್ಲಿದ್ದಾಗ ಬ್ಯಾಡ್ಮಿಟನ್ ಈಕೆಯ ಬದುಕಿಗೆ ಸ್ಪೂರ್ತಿಯಾಗಿದೆ. ಸಾಧಿಸುವ ಹಂಬಲವನ್ನು ಹೆಚ್ಚಿಸಿದೆ. ಆದರೆ ಮನೆಯಲ್ಲಿ ಕಿತ್ತು ತಿನ್ನುವ ಬಡತನದಿಂದಾಗಿ ಈಕೆಯ ಸಾಧನೆಗೆ ಸ್ವಲ್ಪ ಹಿನ್ನಡೆಯಾಗುವ ಭೀತಿ ಪಲ್ಲವಿಯಲ್ಲಿದೆ. ಹೀಗಾಗಿ ಮುಂಬರುವ ಅಂತರರಾಷ್ಟ್ರೀಯ ಪಂದ್ಯಾವಳಿಯಲ್ಲಿಭಾರತದಿಂದ ಪ್ರತಿನಿಧಿಸಲು ಅಗತ್ಯ ಖರ್ಚು ವೆಚ್ಚವನ್ನು ಸರ್ಕಾರ ಭರಿಸುವಂತೆ ಚಿತ್ರದುರ್ಗ ಡಿಸಿಗೆ ಮನವಿ ಸಲ್ಲಿಸಿದ್ದಾರೆ.
ಒಟ್ಟಾರೆ ಅಶಕ್ತರಾದರು ಛಲವನ್ನು ಬಿಡದ ಪಲ್ಲವಿ ಉಗಾಂಡದಲ್ಲಿ ಒನಕೆ ಓಬವ್ವನಂತೆ ಹೋರಾಡಿ ಭಾರತಕ್ಕೆ ಬಂಗಾರದ ಗರಿ ಗಳಿಸಿದ್ದಾರೆ. ಹೀಗಾಗಿ ಇವರ ಸಾಧನೆಗೊಂದು ಸಲಾಂ ಅಂತೆಯೇ ಚಿತ್ರದುರ್ಗ ಜಿಲ್ಲಾಡಳಿತ ಇವರ ಮುಂದಿನ ಸಾಧನೆಗೆ ಅಗತ್ಯ ನೆರವು ಕಲ್ಪಿಸುವ ಮೂಲಕ ಮತ್ತೊಂದು ಸಾಧನೆ ಪಲ್ಲವಿಯ ಮುಡಿಗೇರಲು ಸಹಕಾರಿಯಾಗಲಿ ಅನ್ನೋದು ಎಲ್ಲರ ಆಶಯ.