ಮೈಕಲ್ ವಾನ್ ಪಟ್ಟಿ ಮಾಡಿದ ಟೀಂ ಇಂಡಿಯಾದ 5 ಸಾರ್ವಕಾಲಿಕ ಕ್ರಿಕೆಟಿಗರಿವರು

By Suvarna Web DeskFirst Published Jan 24, 2018, 3:37 PM IST
Highlights

ಟೀಂ ಇಂಡಿಯಾ ಸುನಿಲ್ ಗವಾಸ್ಕರ್, ಕಪಿಲ್ ದೇವ್, ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್ ಮುಂತಾದ ಮಹಾನ್ ಆಟಗಾರರನ್ನು ಜಗತ್ತಿಗೆ ಪರಿಚಯಿಸಿದೆ. ಆದರೆ ಇಂಗ್ಲೆಂಡ್ ಮಾಜಿ ನಾಯಕ ವಾನ್ ಟೀಂ ಇಂಡಿಯಾದ ಈ ಐವರು ಕ್ರಿಕೆಟಿಗರನ್ನು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರೆಂದು ಗುರುತಿಸಿದ್ದಾರೆ.

ಲಂಡನ್(ಜ.24): ಇಂಗ್ಲೆಂಡ್ ತಂಡದ ಮಾಜಿ ನಾಯಕ ಟೀಂ ಇಂಡಿಯಾದ ಐವರು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರನ್ನು ಪಟ್ಟಿ ಮಾಡಿದ್ದಾರೆ.

ಟೀಂ ಇಂಡಿಯಾ ಸುನಿಲ್ ಗವಾಸ್ಕರ್, ಕಪಿಲ್ ದೇವ್, ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್ ಮುಂತಾದ ಮಹಾನ್ ಆಟಗಾರರನ್ನು ಜಗತ್ತಿಗೆ ಪರಿಚಯಿಸಿದೆ. ಆದರೆ ಇಂಗ್ಲೆಂಡ್ ಮಾಜಿ ನಾಯಕ ವಾನ್ ಟೀಂ ಇಂಡಿಯಾದ ಈ ಐವರು ಕ್ರಿಕೆಟಿಗರನ್ನು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರೆಂದು ಗುರುತಿಸಿದ್ದಾರೆ.

ಅವರುಗಳೆಂದರೆ...

1. ಸಚಿನ್ ತೆಂಡುಲ್ಕರ್:

ಕ್ರಿಕೆಟ್ ದೇವರು, ಕ್ರಿಕೆಟ್ ದಂತಕತೆ, 100 ಶತಕಗಳ ಒಡೆಯ, ಅಂತರಾಷ್ಟ್ರೀಯ ಕ್ರಿಕೆಟ್'ನಲ್ಲಿ 33 ಸಾವಿರಕ್ಕೂ ಅಧಿಕ ರನ್'ಗಳ ಸರದಾರ ಸಹಜವಾಗಿಯೇ ವಾನ್ ಮೊದಲ ಆಯ್ಕೆಯಾಗಿದೆ.

2. ಎಂ.ಎಸ್. ಧೋನಿ:

ಟೀಂ ಇಂಡಿಯಾ ಕಂಡ ಯಶಸ್ವಿ ನಾಯಕ, ಟಿ20 ಹಾಗೂ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ನಾಯಕ, ಗ್ರೇಟ್ ಫಿನಿಶರ್ ಖ್ಯಾತಿಯ ಕೂಲ್ ಕ್ಯಾಪ್ಟನ್.

3. ವಿರಾಟ್ ಕೊಹ್ಲಿ:

ಟೀಂ ಇಂಡಿಯಾ ಹಾಲಿ ನಾಯಕ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಮೂರು ಮಾದರಿಯ ಕ್ರಿಕೆಟ್'ನಲ್ಲೂ ಸಾಮ್ರಾಟನಾಗಿ ಮೆರೆಯುತ್ತಿರುವ ಕೊಹ್ಲಿ ಇಂಗ್ಲೆಂಡ್ ಮಾಜಿ ನಾಯಕನ ಮೂರನೇ ಆಯ್ಕೆಯಾಗಿದ್ದಾರೆ.   

4. ವಿರೇಂದ್ರ ಸೆಹ್ವಾಗ್:

ಕ್ರಿಕೆಟ್ ಜಗತ್ತಿನ ಸ್ಫೋಟಕ ಆರಂಭಿಕ ಬ್ಯಾಟ್ಸ್'ಮನ್  ಟೆಸ್ಟ್ ಕ್ರಿಕೆಟ್'ನಲ್ಲಿ 2 ತ್ರಿಶತಕ ಹಾಗೂ ಏಕದಿನ ಕ್ರಿಕೆಟ್'ನಲ್ಲಿ ಒಂದು ದ್ವಿಶತಕ ಸಿಡಿಸಿದ ಡೆಲ್ಲಿ ಡ್ಯಾಶರ್ ವಾನ್ ನಾಲ್ಕನೇ ಆಯ್ಕೆ ಆಗಿದೆ. ಯಾವುದೇ ಪಿಚ್ ಆಗಲೀ, ಎದುರಾಳಿ ಎಂತಹ ಶ್ರೇಷ್ಠ ಬೌಲರ್ ಆದರೂ ಚೆಂಡು ಇರುವುದೇ ದಂಡಿಸುವುದಕ್ಕೆ ಎಂಬ ಮನೋಭಾವದ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್.

5 ಅಜಿತ್ ಅಗರ್'ಕರ್:

ಈ ಆಯ್ಕೆ ನಿಜಕ್ಕೂ ಆಶ್ಚರ್ಯಕರ. ಟೆಸ್ಟ್ ಕ್ರಿಕೆಟ್'ನಲ್ಲಿ 58 ಹಾಗೂ ಏಕದಿನ ಕ್ರಿಕೆಟ್'ನಲ್ಲಿ 288 ವಿಕೆಟ್ ಕಬಳಿಸಿರುವ ಮುಂಬೈ ಕ್ರಿಕೆಟಿಗ. ಭಾರತ ಪರ ಏಕದಿನ ಕ್ರಿಕೆಟ್'ನಲ್ಲಿ ಅತಿವೇಗದ ಅರ್ಧಶತಕ(21 ಎಸೆತ) ಬಾರಿಸಿದ ದಾಖಲೆ ಅಗರ್'ಕರ್ ಹೆಸರಿನಲ್ಲಿದೆ.    

click me!