
ಚೆನ್ನೈ(ಅ.13): ಹಾಲೆಂಡ್ ಮೂಲದ ಮಿಡ್‌ಫೀಲ್ಡರ್ ಹಾನ್ಸ್ ಮುಲ್ಡರ್ ಹಾಗೂ ಡಿಫೆಂಡರ್ ಮೆಹ್ರಾಜುದ್ದೀನ್ ವಾಡೂ ದಾಖಲಿಸಿದ ತಲಾ ಒಂದೊಂದು ಗೋಲಿನ ನೆರವಿನಿಂದ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಮಾಲೀಕತ್ವದ ಚೆನ್ನೈಯಿನ್ ಎಫ್‌ಸಿ ತಂಡ, ಇಂದು ನಡೆದ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಗೋವಾ ಎಫ್‌ಸಿ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.
ಇಲ್ಲಿನ ಜವಾಹರಲಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಚೆನ್ನೈಯಿನ್ ಪಡೆ ಎದುರಾಳಿಗಳ ಎಲ್ಲಾ ತಂತ್ರಗಾರಿಕೆಗಳನ್ನೂ ಸಮರ್ಥವಾಗಿ ಹತ್ತಿಕ್ಕುವಲ್ಲಿ ಯಶಸ್ವಿಯಾಯಿತು. ಹನ್ಸ್ ಮುಲ್ಡರ್ ಅವರು ಪಂದ್ಯದ 15ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಮ್ಮ ತಂಡಕ್ಕೆ 1-0 ಗೋಲಿನ ಮುನ್ನಡೆ ಒದಗಿಸಿಕೊಟ್ಟರು. ಇನ್ನು, ಪಂದ್ಯದ ಪ್ರಥಮಾರ್ಧ ಮುಗಿಯಲು ಇನ್ನು ಕೆಲವೇ ನಿಮಿಷಗಳು ಬಾಕಿಯಿದ್ದಾಗ (26ನೇ ನಿಮಿಷ) ಮೆಹ್ರಾಜುದ್ದೀನ್ ಅವರು, ಎದುರಾಳಿಗಳ ರಕ್ಷಣಾ ಪಡೆ ಬೇಧಿಸಿ ಚೆನ್ನೈಯಿನ್ ಪಡೆಗೆ ಎರಡನೇ ಗೋಲು ತಂದುಕೊಟ್ಟರು.
ಕಳೆದ ಪಂದ್ಯದಲ್ಲಿ ಡೆಲ್ಲಿ ಡೈನಮೋಸ್ ತಂಡದ ವಿರುದ್ಧ 1-3 ಗೋಲುಗಳ ಅಂತರದಲ್ಲಿ ಸೋತಿದ್ದ ಚೆನ್ನೈಯಿನ್ ತಂಡವು, ಗೋವಾ ವಿರುದ್ಧದ ಪಂದ್ಯಕ್ಕಾಗಿ ತನ್ನಲ್ಲಿ ಐದು ಬದಲಾವಣೆಗಳನ್ನು ಮಾಡಿಕೊಂಡಿತ್ತು. ಡುವಾಯ್ನೆ ಕೆರ್, ಡುಡು ಒಮಾಗ್ಬೆಮಿ, ಜೆಜೆ ಲಾಲ್ಪೆಕ್ಲುವಾ, ಬರ್ನಾರ್ಡ್ ಮೆಂಡಿ ಹಾಗೂ ನಲ್ಲಪ್ಪಾನ್ ಮೋಹನ್ರಾಜ್ ಅವರ ಬದಲಿಗೆ ಕಾರಂಜೀತ್ ಸಿಂಗ್, ಮ್ಯನುಯೆಲೆ ಬ್ಲಾಸಿ, ಡೇವಿಡ್ ಸುಕ್ಕಿ, ಎಲಿ ಸಬಿಯಾ ಹಾಗೂ ಜೆರ್ರಿ ಲಾಲ್ರಿಂಜುವೆಲಾ ಅವರಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ಪ್ರಯೋಗ ಫಲ ನೀಡಿ ಚೆನ್ನೈಯಿನ್ಗೆ ಜಯ ಒಲಿದು ಬಂದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.