ಅಖಾಡದಲ್ಲೇ ಕುಸಿದು ಬಿದ್ದು ಕೊನೆಯುಸಿರೆಳೆದ 21 ವರ್ಷದ ವುಶು ಆಟಗಾರ: ಕೊನೆಯ ಕ್ಷಣಗಳು ವೈರಲ್

Published : Feb 25, 2025, 05:01 PM ISTUpdated : Feb 25, 2025, 05:08 PM IST
ಅಖಾಡದಲ್ಲೇ ಕುಸಿದು ಬಿದ್ದು ಕೊನೆಯುಸಿರೆಳೆದ 21 ವರ್ಷದ ವುಶು ಆಟಗಾರ: ಕೊನೆಯ ಕ್ಷಣಗಳು ವೈರಲ್

ಸಾರಾಂಶ

ಚಂಡೀಗಢ ವಿಶ್ವವಿದ್ಯಾನಿಲಯದ ಕ್ರೀಡಾಕೂಟದಲ್ಲಿ 21 ವರ್ಷದ ಆಟಗಾರ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ವುಶು ಪಂದ್ಯಾವಳಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

ಕೆಲ ದಿನಗಳ ಹಿಂದಷ್ಟೇ ಶಾಲೆಗೆ ಹೋಗುತ್ತಿದ್ದ 16 ವರ್ಷದ 10ನೇತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೋರ್ವಳು ಶಾಲೆಯ ಆವರಣದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಈಗ ಚಂಡೀಗಢದ ವಿಶ್ವವಿದ್ಯಾನಿಲಯದಲ್ಲಿ ನಡೆದ ಕ್ರೀಡಾಕೂಟದಲ್ಲಿ 21 ವರ್ಷದ ಆಟಗಾರನೋರ್ವ ಆಟದ ಅಖಾಡದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿದ್ದು, ಆತನ ಕೊನೆಕ್ಷಣಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಚಂಡೀಗಢದ ವಿಶ್ವವಿದ್ಯಾನಿಲಯದಲ್ಲಿ ವಿವಿ ಮಟ್ಟದ ವುಶು ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಈ ಆಟದಲ್ಲಿ ಸ್ಪರ್ಧಾಳುವಾಗಿ ಭಾಗವಹಿಸಿದ್ದ  21 ವರ್ಷದ ವಿದ್ಯಾರ್ಥಿಯೋರ್ವ ಆಟಕ್ಕಾಗಿ ಸಿದ್ಧಪಡಿಸಲಾದ ಅಖಾಡದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಇದು ಕ್ರೀಡಾವಲಯದಲ್ಲಿ ಆಘಾತ ಸೃಷ್ಟಿಸಿದೆ. ಹಠಾತ್ ಆಗಿ ಸಾವಿಗೀಡಾದ ಯುವ ಕ್ರೀಡಾಪಟುವಿನ ಸಾವಿಗೆ ಅನೇಕರು ಮರುಗುತ್ತಿದ್ದಾರೆ. 

ಕೆಲ ಪ್ರಾಥಮಿಕ ವರದಿಗಳ ಪ್ರಕಾರ, ಇಬ್ಬರು ಆಟಗಾರರು ವುಶು ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಅಖಾಡದಲ್ಲಿ ಆಟವಾಡುತ್ತಿದ್ದಾಗಲೇ ಸಡನ್ ಆಗಿ ಮ್ಯಾಟ್ ಮೇಲೆ ಕುಸಿದು ಬಿದ್ದಿದ್ದಾನೆ. ಕೂಡಲೇ ವೈದ್ಯಕೀಯ ತಂಡ ಅವರ ಬಳಿ ಧಾವಿಸಿ ಬಂದು ತಪಾಸಣೆ ನಡೆಸಿದರಾದರು ಆ ಹುಡುಗನನ್ನು ಬದುಕುಳಿಸಲು ಸಾಧ್ಯವಾಗದೇ ಸಾವನ್ನಪ್ಪಿದ್ದಾನೆ ಎಂದು ಘೋಷಣೆ ಮಾಡಲಾಯ್ತು. ಈ ಸಾವಿಗೆ ನಿಖರವಾದ ಕಾರಣ ತಿಳಿಯದೇ ಹೋದರೂ ಹೃದಯ ಸಂಬಂಧಿ ಸಮಸ್ಯೆಗಳಿಂದಲೇ ಆತ ಸಾವನ್ನಪ್ಪಿದ್ದಾನೆ ಎಂದು ನಂಬಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ. 

ಹೀಗೆ ಹಠಾತ್ ಆಗಿ ಎಳೆಯ ಪ್ರಾಯದ ಮಕ್ಕಳು, ಯವಕರು ಸಾವನ್ನಪ್ಪುತ್ತಿರುವ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಾ ಇದ್ದು, ಯುವ ಸಮೂಹದಲ್ಲಿ ಆತಂಕ ಸೃಷ್ಟಿಯಾಗಿದೆ. 


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

33 ಎಸೆತದಲ್ಲಿ ಅಲೆನ್ ಶತಕ ದಾಖಲೆ, ಸೌತ್ ಆಫ್ರಿಕಾ ಮಣಿಸಿ ಫೈನಲ್ ಪ್ರವೇಶಿಸಿದ ನ್ಯೂಜಿಲೆಂಡ್
Sanju Weds Charu: ಕ್ರಿಕೆಟಿಗ ಸಂಜು ಸ್ಯಾಮ್ಸನ್​ ಅಂತರ್​ಧರ್ಮೀಯ ರೋಚಕ ಫೇಸ್​ಬುಕ್ ಲವ್​ ಸ್ಟೋರಿ!