ವಿಶ್ವಕಪ್ 2019: ಪಾಕ್ ತಂಡಕ್ಕೆ ಮಾರಕ ವೇಗಿ ಆಯ್ಕೆ- ಶುರುವಾಯ್ತು ನಡುಕ!

By Web Desk  |  First Published May 17, 2019, 8:37 PM IST

ಪಾಕಿಸ್ತಾನ ವಿಶ್ವಕಪ್ ತಂಡದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಆರಂಭದಲ್ಲಿ ನಿರ್ಲಕ್ಷ್ಯಸಿದ್ದ ಮಾರಕ ವೇಗಿಗೆ ಇದೀಗ ಆಯ್ಕೆ ಸಮಿತಿ ಸ್ಥಾನ ನೀಡಿದೆ. ಪಾಕಿಸ್ತಾನ ತಂಡ ಸೇರಿಕೊಂಡ ಸೂಪರ್ ಫಾಸ್ಟ್ ವೇಗಿ ಯಾರು? ಇಲ್ಲಿದೆ ವಿವರ.


ಇಸ್ಲಾಮಾಬಾದ್(ಮೇ.17): ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭಿಸಿರುವ ಪಾಕಿಸ್ತಾನ ತಂಡ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದೆ. ಆತಿಥೇಯ ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನದ ಹೀನಾಯ ಸೋಲಿನ ಬಳಿಕ ಇದೀಗ ಆಯ್ಕೆ ಸಮಿತಿ ವಿಶ್ವಕಪ್ ತಂಡದಲ್ಲಿ ಕೆಲ ಬದಲಾವಣೆ ಮಾಡಿದೆ. ಕಳಪೆ ಫಾರ್ಮ್‌ನಿಂದ ವಿಶ್ವಕಪ್ ತಂಡದ ಆರಂಭಿಕ ಆಯ್ಕೆಯಲ್ಲಿ ಸ್ಥಾನ ಪಡೆಯದ ಮಾರಕ ವೇಗಿ ಮೊಹಮ್ಮದ್ ಅಮೀರ್‌ಗೆ ಇದೀಗ ಬುಲಾವ್ ನೀಡಲಾಗಿದೆ.

ಇದನ್ನೂ ಓದಿ: ವಿಶ್ವಕಪ್ ಟ್ರೋಫಿ ಪ್ರಶಸ್ತಿ ಮೊತ್ತ ಬಹಿರಂಗ- ಗೆದ್ದ ತಂಡಕ್ಕೆ ಕೋಟಿ ಕೋಟಿ!

Latest Videos

ಸದ್ಯ ಇಂಗ್ಲೆಡ್ ವಿರುದ್ಧ ನಡೆಯುತ್ತಿರುವ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನದಿಂದ ಪಾಕ್ ಆಯ್ಕೆ ಸಮಿತಿ ತಂಡದಲ್ಲಿ ಕೆಲ ಬದಲಾವಣೆ ಮಾಡಿದೆ. ಪಾಕ್ ಸೂಪರ್ ಫಾಸ್ಟ್ ವೇಗಿ ಮೊಹಮ್ಮದ್ ಅಮೀರ್‌ಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಲಾಗಿದೆ. ಅಮೀರ್ ಆಯ್ಕೆ ಟೀಂ ಇಂಡಿಯಾದ ಮೇಲೂ ಪರಿಣಾಮ ಬೀರಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಇದನ್ನೂ ಓದಿ: ವಿಶ್ವಕಪ್ ಕಾಮೆಂಟ್ರಿ: ಕನ್ನಡಿಗನಿಗಿಲ್ಲ ಸ್ಥಾನ..!

2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣರಾಗಿದ್ದ ಮೊಹಮ್ಮದ್ ಅಮೀರ್ ಇದೀಗ ಪಾಕ್ ತಂಡ ಸೇರಿಕೊಂಡಿದ್ದಾರೆ. ಈ ಮೂಲಕ ಪಾಕಿಸ್ತಾನ ಮತ್ತಷ್ಟು ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ.

click me!