
ನವದೆಹಲಿ(ಜೂ.16): ಕ್ಯಾಪ್ಟನ್ ಕೂಲ್ ಎಂದೇ ಪ್ರಸಿದ್ಧಿ ಗಳಿಸಿದ MS ಧೋನಿ ಸದ್ಯ ಟೀಂ ಇಂಡಿಯಾದ ಕ್ಯಾಪ್ಟನ್ ಅಲ್ಲದಿದ್ದರೂ ವಿರೋಧ ತಂಡವನ್ನು ಸದೆಬಡಿಯಲು ಅತ್ಯುತ್ತಮ ರಣತಂತ್ರ ರೂಪಿಸುವಲ್ಲಿ ಈಗಲೂ ಹಿಂದೆ ಸರಿಯುವುದಿಲ್ಲ. ಇದೀಗ ಮತ್ತೊಮ್ಮೆ ಟೀಂ ಇಂಡಿಯಾದ ಪಾಲಿಗೆ ಧೋನಿ ಆಸರೆಯಾಗಿದ್ದಾರೆ. ತನ್ನ ಮಾತಿನಂತೆ ಕೊಹ್ಲಿಗೆ ಅತ್ಯುತ್ತಮ ಸಲಹೆ ನೀಡಿ ಟೀಂ ಇಂಡಿಯಾದ ಯಶಸ್ಸಿಗೆ ಕಾರಣರಾಗಿದ್ದಾರೆ. ಧೋನಿಯ ಕುರಿತಾಗಿ ಉಲ್ಲೇಖಿಸಿರುವ ಕ್ಯಾಪ್ಟನ್ ಕೊಹ್ಲಿ ನಿನ್ನೆ ನಡೆದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಜಯ ಸಾಧಿಸಲು ಧೋನಿಯೇ ಕಾರಣ ಎಂದಿದ್ದಾರೆ. ಧೋನಿ ಅಷ್ಟಕ್ಕೂ ಅವರು ನೀಡಿದ ಸಲಹೆ ಏನು? ಅಂತೀರಾ ಇಲ್ಲಿದೆ ವಿವರ
ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾ ತಂಡ ಮಧ್ಯದ ಓವರ್'ಗಳಲ್ಲಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುತ್ತಿತ್ತು. ತಮೀಮ್ ಇಕ್ಬಾಲ್ ಹಾಗೂ ಮುಶ್ಫಿಕುರ್ ರಹೀಂ ಇವರಿಬ್ಬರು ಜೊತೆಯಾಟದಲ್ಲಿ 100 ಕ್ಕೂ ಅಧಿಕ ರನ್ ಗಳಿಸುವಲ್ಲಿ ಸಫಲರಾಗಿದ್ದರು. ಈ ಸಂದರ್ಭದಲ್ಲಿ ಕ್ಯಾಪ್ಟನ್ ಕೊಹ್ಲಿಗೆ ಕಷ್ಟದಲ್ಲಿದ್ದರು ಯಾಕೆಂದರೆ ತಂಡದ ಆಲ್'ರೌಂಡರ್ ಹಾರ್ದಿಕ್ ಪಾಂಡ್ಯಾ ಎಸೆಯುತ್ತಿದ್ದ ಬಾಲ್'ಗಳಿಂದ ಭರ್ಜರಿ ರನ್ ಪೇರಿಸುತ್ತಿದ್ದರು. ಆದರೆ ಈ ವೇಳೆ ಧೋನಿ ನೀಡಿದ ಅತ್ಯುತ್ತಮ ಸಲಹೆಯನ್ನು ನೀಡಿದ್ದಾರೆ.
ವಾಸ್ತವವಾಗಿ ಇಂತಹ ಕಠಿಣ ಸಂದರ್ಭದಲ್ಲಿ ಕೊಹ್ಲಿಗೆ ಸಲಹೆ ನೀಡಿದ ಧೋನಿ ಕೇದಾರ್ ಜಾಧವ್'ನನ್ನು ಬೌಲಿಂಗ್ ಮಾಡಲು ಕಳುಹಿಸುವಂತೆ ಕೊಹ್ಲಿಗೆ ಸೂಚಿಸಿದ್ದಾರೆ. ಧೋನಿಯ ಈ ಸಲಹೆಯನ್ನು ಮರು ಮಾತನಾಡದೆ ಒಪ್ಪಿಕೊಂಡಿದ್ದಾರೆ. ಬೌಲಿಂಗ್ ಮಾಡಲು ಬಂದ ಕೇದಾರ್ ಬಾಂಗ್ಲಾದ ಬ್ಯಾಟ್ಸ್'ಮನ್ ತಮೀಮ್ ಇಕ್ಬಾಲ್'ನನ್ನು ಕ್ಲೀನ್ ಬೋಲ್ಡ್ ಮಾಡಿ ಆರಂಭದಲ್ಲೇ ಜಾದೂ ಮಾಡಿದ್ದಾರೆ. ಇದನ್ನು ಕಂಡ ಧೋನಿ ಫುಲ್ ಖುಷಿಯಾಗಿದ್ದಾರೆ. ಸಾಮಾನ್ಯವಾಗಿ ಮೈದಾನಕ್ಕಿಳಿದ ಬಳಿಕ ಧೋನಿ ತನ್ನ ಭಾವನೆಗಳನ್ನು ಹತ್ತಿಕ್ಕುತ್ತಾರೆ ಆದರೆ ತಮೀಮ್ ಜೌಟ್ ಆಗುತ್ತಿದ್ದಂತೆಯೇ ಖುಷಿಯಿಂದ ಸಂಭ್ರಮಿಸಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ಕೆದಾರ್ ಜಾಧವ್ ಮುಂದಿನ ಎಸೆತದಲ್ಲಿ ಮುಶ್ಪಿಕುರ್'ನನ್ನೂ ಪೆವಿಲಿಯನ್'ಗೆ ಕಳುಹಿಸಿ ಈ ಬಲಿಷ್ಟ ಜೋಡಿಯನ್ನು ಮುರಿದಿದ್ದಾರೆ.
ಇನ್ನು ಪಂದ್ಯದ ಬಳಿಕ ನಡೆದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿರುವ ಕೊಹ್ಲಿ 'ಈ ಪಂದ್ಯದ ಯಶಸ್ಸು ಧೋನಿ ಹಾಗೂ ಕೇದಾರ್'ಗೆ ಸಲ್ಲುತ್ತದೆ. ಕಠಿಣ ಸಂದರ್ಭದಲ್ಲಿ ಧೋನಿ ಅತ್ಯುತ್ತಮ ಸಲಹೆ ನೀಡಿದ್ದಾರೆ. ಅವರ ಸಲಹೆಯಂತೆ ಕೇದಾರ್'ಗೆ ಬೌಲಿಂಗ್ ಮಾಡುವ ಅವಕಾಶ ನೀಡಿದೆ. ಕೇದಾರ್'ನ ಬೌಲಿಂಗ್'ಗೆ ಬಾಂಗ್ಲಾ ತತ್ತರಿಸಿ ಮಂಡಿಯೂರಿದೆ. ನೆಟ್ಸ್'ನಲ್ಲಿ ಕೇದಾರ್ ಉತ್ತಮವಾಗಿ ಬೌಲಿಂಗ್ ಮಾಡದಿದ್ದರೂ ಅವರೊಬ್ಬ ಸ್ಮಾರ್ಟ್ ಕ್ರಿಕೆಟರ್. ಅವರಿಗೆ ಬೌಲರ್'ರನ್ನು ಸಂಕಷ್ಟಕ್ಕೀಡು ಮಾಡುವುದು ಹೇಗೆ ಎಂದು ತಿಳಿದಿದೆ. ಇನ್ನು ಬೌಲರ್ ಒಬ್ಬ ಬೌಲಿಂಗ್ ಮಾಡುವಾಗ ಬಾಟ್ಸ್'ಮನ್ ಏನು ಮಾಡಬಹುದು ಎಂದು ಯೋಚಿಸಿ ಬಾಲ್ ಎಸೆದರೆ ಅದರಿಂದ ನಮಗೆ ಪ್ರಯೋಜನವಾಗುತ್ತದೆ. ಇದನ್ನೇ ಕೇದಾರ್ ಅಳವಡಿಸಿದ್ದು, ಅವರ ಪ್ಲಾನ್ ಕೈ ಹಿಡಿದಿದೆ' ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.