
ಲಂಡನ್: ಅನುಭವಿ ಆಟಗಾರ ರಮಣ್'ದೀಪ್ ಸಿಂಗ್ ಅವರ ಅದ್ಭುತ ಆಟದ ನೆರವಿನಿಂದ ಭಾರತ, ಹಾಕಿ ವಿಶ್ವ ಲೀಗ್ ಸೆಮಿಫೈನಲ್ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ 4-1 ಗೋಲುಗಳಿಂದ ಸ್ಕಾಟ್ಲೆಂಡ್ ಎದುರು ಗೆಲುವು ದಾಖಲಿಸಿದೆ. ಈ ಮೂಲಕ ಮನ್'ಪ್ರೀತ್ ಸಿಂಗ್ ಪಡೆ ಶುಭಾರಂಭ ಮಾಡಿದೆ.
ಗುರುವಾರ ನಡೆದ ಪಂದ್ಯದಲ್ಲಿ ಭಾರತದ ಪರ ರಮಣ್'ದೀಪ್ ಸಿಂಗ್ 31 ಹಾಗೂ 34ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ಆಕಾಶ್40ನೇ ಹಾಗೂ ಹರ್ಮನ್‌ಪ್ರೀತ್ ಸಿಂಗ್ 42ನೇ ನಿಮಿಷದಲ್ಲಿ ಗೋಲು ಗಳಿಸಿದರು. ಅತ್ತ ಸ್ಕಾಟ್ಲೆಂಡ್ ಪರ ಕ್ರಿಸ್ ಗ್ರಾಸಿಕ್ 6ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.
ಪಂದ್ಯದ ಆರಂಭದಲ್ಲೇ ಸ್ಕಾಟ್ಲೆಂಡ್‌ಗೆ ಗೋಲು ಬಿಟ್ಟುಕೊಟ್ಟಭಾರತ ಒತ್ತಡಕ್ಕೆ ಸಿಲುಕಿತು. ಮೊದಲ ಕ್ವಾರ್ಟರ್ ಮುಕ್ತಾಯಕ್ಕೆ ಮುನ್ನಡೆ ಕಾಯ್ದುಕೊಂಡ ಸ್ಕಾಟ್ಲೆಂಡ್, ಮೊದಲಾರ್ಧದ ಅಂತ್ಯದ ವರೆಗೂ ಭಾರತಕ್ಕೆ ಗೋಲು ಬಾರಿಸುವ ಅವಕಾಶ ನೀಡಲಿಲ್ಲ. ಆದರೆ 10 ನಿಮಿಷದ ವಿರಾಮದ ವೇಳೆ ಕೋಚ್ ರೋಲೆಂಟ್ ಓಲ್ಟ್‌ಮನ್ಸ್ ರೂಪಿಸಿದ ರಣತಂತ್ರ ತಂಡದ ಕೈಹಿಡಿಯಿತು. ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟಕ್ಕಿಳಿದ ಭಾರತ ಪುಟಿದೆದ್ದು, 12 ನಿಮಿಷಗಳಲ್ಲಿ 4 ಬಾರಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸುವಲ್ಲಿ ಯಶಸ್ವಿಯಾಯಿತು. ಕೊನೆ ಕ್ವಾರ್ಟರ್‌ನಲ್ಲಿ ತಂಡ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿ ಯಾಗಿ ಪಂದ್ಯವನ್ನು ತನ್ನದಾಗಿಸಿಕೊಂಡಿತು.
ಭಾರತಕ್ಕೆ ಮುಂದಿನ ಪಂದ್ಯ: ಜೂ.17ರಂದು ಕೆನಡಾ ವಿರುದ್ಧ
epaper.kannadaprabha.in
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.