ಫ್ರೆಂಚ್‌ ಓಪನ್ ಗ್ರ್ಯಾನ್‌ಸ್ಲಾಂ ಫೈನಲ್‌ಗೆ ಕಾರ್ಲೊಸ್‌ ಆಲ್ಕರಜ್‌

By Kannadaprabha NewsFirst Published Jun 8, 2024, 10:18 AM IST
Highlights

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ 2ನೇ ಶ್ರೇಯಾಂಕಿತ, ಇಟಲಿಯನ ಯಾನ್ನಿಕ್‌ ಸಿನ್ನರ್‌ ವಿರುದ್ಧ 21ರ ಆಲ್ಕರಜ್‌ 2-6, 6-3, 3-6, 6-4, 6-3 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಇದರೊಂದಿಗೆ ಹಾಲಿ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌, 22ರ ಸಿನ್ನರ್‌ರ ಚೊಚ್ಚಲ ಫ್ರೆಂಚ್‌ ಓಪನ್‌ ಫೈನಲ್‌ ಕನಸು ಭಗ್ನಗೊಂಡಿತು.

ಪ್ಯಾರಿಸ್‌: ಚೊಚ್ಚಲ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸ್ಪೇನ್‌ನ ಯುವ ತಾರೆ ಕಾರ್ಲೊಸ್‌ ಆಲ್ಕರಜ್‌ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ 2ನೇ ಶ್ರೇಯಾಂಕಿತ, ಇಟಲಿಯನ ಯಾನ್ನಿಕ್‌ ಸಿನ್ನರ್‌ ವಿರುದ್ಧ 21ರ ಆಲ್ಕರಜ್‌ 2-6, 6-3, 3-6, 6-4, 6-3 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಇದರೊಂದಿಗೆ ಹಾಲಿ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌, 22ರ ಸಿನ್ನರ್‌ರ ಚೊಚ್ಚಲ ಫ್ರೆಂಚ್‌ ಓಪನ್‌ ಫೈನಲ್‌ ಕನಸು ಭಗ್ನಗೊಂಡಿತು.

Latest Videos

2022ರಲ್ಲಿ ಯುಎಸ್‌ ಓಪನ್‌, ಕಳೆದ ವರ್ಷ ವಿಂಬಲ್ಡನ್ ಗೆದ್ದಿರುವ ಆಲ್ಕರಜ್‌ ಚೊಚ್ಚಲ ಬಾರಿ ಫ್ರೆಂಚ್‌ ಓಪನ್‌ ಫೈನಲ್‌ಗೆ ಇಟ್ಟಿದ್ದು, ಟ್ರೋಫಿ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿಕೊಂಡಿದ್ದಾರೆ. ಭಾನುವಾರ ಫೈನಲ್‌ ಪಂದ್ಯ ನಡೆಯಲಿದೆ.

ಅಮೆರಿಕ ಟೀಂ ಯಶಸ್ಸಿನ ಹಿಂದೆ ಭಾರತೀಯರ ಪಾತ್ರ; ಐತಿಹಾಸಿಕ ಗೆಲುವಿನ ಹಿಂದೆ ಬರೋಬ್ಬರಿ 7 ಮಂದಿ ಭಾರತೀಯರು..!

ಇಗಾ vs ಪೌಲಿನಿ ಫೈನಲ್‌ ಇಂದು

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಮಹಿಳಾ ಸಿಂಗಲ್ಸ್‌ ಫೈನಲ್‌ ಶನಿವಾರ ನಡೆಯಲಿದ್ದು, ಪ್ರಶಸ್ತಿಗಾಗಿ ವಿಶ್ವ ನಂ.1 ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ಹಾಗೂ 12ನೇ ಶ್ರೇಯಾಂಕಿತೆ ಇಟಲಿಯ ಜ್ಯಾಸ್ಮಿಸ್‌ ಪೌಲಿನಿ ಸೆಣಸಲಿದ್ದಾರೆ.

ಸತತ 3ನೇ ಬಾರಿಗೆ ಫೈನಲ್‌ ಪ್ರವೇಶಿಸಿರುವ ಇಗಾ 4ನೇ ಫ್ರೆಂಚ್‌ ಓಪನ್‌, ಒಟ್ಟಾರೆ 5ನೇ ಗ್ರ್ಯಾನ್‌ ಸ್ಲಾಂ ಗೆಲ್ಲುವ ಗುರಿ ಹೊಂದಿದ್ದಾರೆ. ಇದೇ ಮೊದಲ ಬಾರಿಗೆ ಗ್ರ್ಯಾನ್‌ ಸ್ಲಾಂ ಫೈನಲ್‌ಗೇರಿರುವ ಪೌಲಿನಿ, ಚೊಚ್ಚಲ ಪ್ರಯತ್ನದಲ್ಲೇ ಟ್ರೋಫಿ ಗೆಲ್ಲುವ ಕಾತರದಲ್ಲಿದ್ದಾರೆ. 20ರಲ್ಲಿ ಚೊಚ್ಚಲ ಫ್ರೆಂಚ್‌ ಓಪನ್‌ ಪ್ರಶಸ್ತಿ ಜಯಿಸಿದ್ದ ಇಗಾ, 2022ರಲ್ಲಿ ಯುಎಸ್‌ ಓಪನ್‌ ಟ್ರೋಫಿ ಜಯಿಸಿದ್ದರು.

ಪ್ರೊ ಲೀಗ್‌ ಹಾಕಿ: ಇಂದು ಭಾರತ vs ಜರ್ಮನಿ ಫೈಟ್‌

ಲಂಡನ್‌: ಪ್ಯಾರಿಸ್‌ ಒಲಿಂಪಿಕ್ಸ್‌ಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿರುವ ಭಾರತ ಪುರುಷರ ಹಾಕಿ ತಂಡ, ಶನಿವಾರ ಪ್ರೊ ಲೀಗ್‌ ಹಾಕಿ ಟೂರ್ನಿಯಲ್ಲಿ ಜರ್ಮನಿ ವಿರುದ್ಧ ಸೆಣಸಲಿದೆ. ಒಲಿಂಪಿಕ್ಸ್‌ಗೂ ಮುನ್ನ ಭಾರತ 2 ಪಂದ್ಯ ಮಾತ್ರ ಆಡಲಿದ್ದು, ಭಾನುವಾರ ಬ್ರಿಟನ್‌ ಸವಾಲು ಎದುರಾಗಲಿದೆ. ಮಹಿಳಾ ತಂಡ ಕೂಡಾ ಶನಿವಾರ ಜರ್ಮನಿ, ಭಾನುವಾರ ಬ್ರಿಟನ್‌ ವಿರುದ್ಧ ಸೆಣಸಲಿದೆ.

ಕ್ವಾರ್ಟರ್ ಫೈನಲ್‌ನಲ್ಲಿ ಸೋತ ಭಾರತದ ಲಕ್ಷ್ಯ ಸೇನ್

ಬ್ಯಾಂಕಾಕ್: ಇಂಡೋನೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯವಾಗಿದೆ. ಟೂರ್ನಿಯಲ್ಲಿ ಉಳಿದಿದ್ದ ಭಾರತದ ಏಕೈಕ ಸ್ಪರ್ಧಿಯಾಗಿದ್ದ ಲಕ್ಷ್ಯ ಸೇನ್ ಶುಕ್ರವಾರ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಡೆನ್ಮಾರ್ಕ್‌ನ ಆಂಡರ್ಸ್‌ ಆಂಟೋನ್ಸನ್ ವಿರುದ್ಧ 22-24,18-21 ಗೇಮ್‌ಗಳಲ್ಲಿ ವಿರೋಚಿತ ಸೋಲು ಕಂಡರು.

ವಿಶ್ವ ಶ್ರೇಯಾಂಕದಲ್ಲಿ 5ನೇ ಸ್ಥಾನದಲ್ಲಿರುವ ಡೆನ್ಮಾರ್ಕ್‌ನ ಆಟಗಾರನ ವಿರುದ್ಧ ಪಂದ್ಯದುದ್ದಕ್ಕೂ ಪ್ರಬಲ ಪೈಪೋಟಿ ನೀಡಿದರೂ ಪಂದ್ಯ ಗೆಲ್ಲಲು ವಿಶ್ವ ನಂ.14ರ ಲಕ್ಷ್ಯ ಸೇನ್‌ಗೆ ಸಾಧ್ಯವಾಗಲಿಲ್ಲ.

click me!