Latest Videos

ATP Rankings: ನೋವಾಕ್‌ ಜೋಕೋವಿಚ್‌ರನ್ನು ಹಿಂದಿಕ್ಕಿದ ಅಲ್ಕರಜ್‌ ನಂ.1!

By Kannadaprabha NewsFirst Published May 24, 2023, 10:32 AM IST
Highlights

ನೋವಾಕ್‌ ಜೋಕೋವಿಚ್‌ರನ್ನು ಹಿಂದಿಕ್ಕಿದ ಕಾರ್ಲೋಸ್‌ ಆಲ್ಕರಜ್‌
ಎಟಿಪಿ ವಿಶ್ವ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ 20 ವರ್ಷದ ಟೆನಿಸಿಗ ಆಲ್ಕರಜ್
ಮಹಿಳಾ ಸಿಂಗಲ್ಸ್‌ನ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ನಂ.1 ಸ್ಥಾನ

ಪ್ಯಾರಿಸ್‌(ಮೇ.24): ಸ್ಪೇನ್‌ನ 20ರ ಟೆನಿಸಿಗ ಕಾರ್ಲೋಸ್‌ ಆಲ್ಕರಜ್‌ ಎಟಿಪಿ ವಿಶ್ವ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ನೋವಾಕ್‌ ಜೋಕೋವಿಚ್‌ರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ್ದಾರೆ. ಇದರೊಂದಿಗೆ ಫ್ರೆಂಚ್‌ ಓಪನ್‌ನಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ. ಇಟಲಿಯನ್‌ ಓಪನ್‌ ಪ್ರಶಸ್ತಿ ಜಯಿಸಿದ ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ 2ನೇ ಸ್ಥಾನಕ್ಕೇರಿದ್ದು, ಇಟಲಿಯನ್‌ ಓಪನ್‌ನ 4ನೇ ಸುತ್ತಿನಲ್ಲಿ ಸೋಲುಂಡ 22 ಗ್ರ್ಯಾನ್‌ಸ್ಲಾಂಗಳ ಒಡೆಯ ಜೋಕೋವಿಚ್‌ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಇನ್ನು ಮಹಿಳಾ ಸಿಂಗಲ್ಸ್‌ನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ನಂ.1 ಸ್ಥಾನ ಕಾಯ್ದುಕೊಂಡಿದ್ದು, ಆಸ್ಪ್ರೇಲಿಯನ್‌ ಓಪನ್‌ ಚಾಂಪಿಯನ್‌ ಬೆಲಾರುಸ್‌ನ ಅರೈನಾ ಸಬಲೆಂಕಾ 2ನೇ ಸ್ಥಾನದಲ್ಲಿದ್ದಾರೆ.

ಇಂದಿನಿಂದ ಕಿರಿಯರ ಏಷ್ಯಾಕಪ್‌ ಹಾಕಿ ಟೂರ್ನಿ

ಸಲಾಲ್ಹ(ಒಮಾನ್‌): ಈ ವರ್ಷದ ವಿಶ್ವಕಪ್‌ಗೆ ಅರ್ಹತೆ ಪಡೆಯುವ ನಿರೀಕ್ಷೆಯೊಂದಿಗೆ ಭಾರತ ತಂಡ ಬುಧವಾರ ಇಲ್ಲಿ ಆರಂಭಗೊಳ್ಳಲಿರುವ ಕಿರಿಯರ ಏಷ್ಯಾಕಪ್‌ ಹಾಕಿ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ. ಮೊದಲ ಪಂದ್ಯದಲ್ಲಿ ತಂಡಕ್ಕೆ ಚೈನೀಸ್‌ ತೈಪೆ ಎದುರಾಗಲಿದೆ. ‘ಎ’ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಜಪಾನ್‌, ಥಾಯ್ಲೆಂಡ್‌ ಹಾಗೂ ಚೈನೀಸ್‌ ತೈಪೆ ಸ್ಥಾನ ಪಡೆದರೆ, ‘ಬಿ’ ಗುಂಪಿನಲ್ಲಿ ಒಮಾನ್‌, ಕೊರಿಯಾ, ಮಲೇಷ್ಯಾ, ಬಾಂಗ್ಲಾದೇಶ ಹಾಗೂ ಉಜ್ಬೇಕಿಸ್ತಾನ ತಂಡಗಳಿವೆ.

Wresters Protest ಇಷ್ಟು ದಿನ ಬೀದಿಯಲ್ಲಿ ಕೂರಬೇಕು ಎಂದು ಗೊತ್ತಿರಲಿಲ್ಲ: ಕುಸ್ತಿಪಟು ವಿನೇಶ್‌ ಫೋಗಾಟ್‌

ಭಾರತವು ಗುಂಪು ಹಂತದ ತನ್ನ 2ನೇ ಪಂದ್ಯವನ್ನು ಮೇ 25ರಂದು ಜಪಾನ್‌ ವಿರುದ್ಧ ಆಡಲಿದೆ. ಮೇ 27ಕ್ಕೆ ಪಾಕಿಸ್ತಾನ, ಮೇ 28ಕ್ಕೆ ಥಾಯ್ಲೆಂಡ್‌ ವಿರುದ್ಧ ಸೆಣಸಲಿದೆ. ಭಾರತ ಹಾಗೂ ಪಾಕಿಸ್ತಾನ ತಲಾ 3 ಬಾರಿ ಟ್ರೋಫಿ ಜಯಿಸಿ, ಟೂರ್ನಿಯಲ್ಲಿ ಯಶಸ್ವಿ ತಂಡಗಳೆನಿಸಿವೆ. ಈ ಟೂರ್ನಿಯಲ್ಲಿ ಅಗ್ರ 3 ಸ್ಥಾನ ಪಡೆವ ತಂಡಗಳು ಈ ವರ್ಷ ಡಿಸೆಂಬರ್‌ನಲ್ಲಿ ಮಲೇಷ್ಯಾದಲ್ಲಿ ನಡೆಯಲಿರುವ ಕಿರಿಯರ ವಿಶ್ವಕಪ್‌ಗೆ ಅರ್ಹತೆ ಪಡೆಯಲಿವೆ.

ವಿಶ್ವ ಟಿಟಿ: 3ನೇ ಸುತ್ತಿಗೆ ಪ್ರವೇಶಿಸಿದ ಮನಿಕಾ

ಡರ್ಬನ್‌: ಭಾರತದ ತಾರಾ ಆಟಗಾರ್ತಿ ಮನಿಕಾ ಬಾತ್ರಾ ಇಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್‌ ಟೆನಿಸ್‌ ಚಾಂಪಿಯನ್‌ಶಿಪ್‌ನ ಮಹಿಳಾ ಸಿಂಗಲ್ಸ್‌ನಲ್ಲಿ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಮಂಗಳವಾರ 2ನೇ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.39 ಮನಿಕಾ, ಸಿಂಗಾಪುರದ ವೊಂಗ್‌ ಕ್ಸಿನ್‌ ರು ವಿರುದ್ಧ 11-9, 14-12, 11-4, 11-8 ಅಂತರದಲ್ಲಿ ಗೆಲುವು ಸಾಧಿಸಿದರು. ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಕೊನೆಗೊಂಡಿದೆ. 2ನೇ ಸುತ್ತಿನ ಪಂದ್ಯದಲ್ಲಿ ಸತ್ಯನ್‌ ಜ್ಞಾನಶೇಖರನ್‌, ವಿಶ್ವ ನಂ.9 ಜರ್ಮನಿಯ ಡಾಂಗ್‌ ಕ್ಯು ವಿರುದ್ಧ 6-11, 6-11, 5-11, 7-11ರಲ್ಲಿ ಸೋಲುಂಡರು.

ಜೂ.21ಕ್ಕೆ ಬೆಂಗ್ಳೂರಲ್ಲಿ ಭಾರತ-ಪಾಕ್‌ ಫುಟ್ಬಾಲ್‌!

ಚೆನ್ನೈ: ಭಾರತ ಹಾಗೂ ಪಾಕಿಸ್ತಾನ ತಂಡಗಳು 5 ವರ್ಷಗಳ ಬಳಿಕ ಫುಟ್ಬಾಲ್‌ ಮೈದಾನದಲ್ಲಿ ಮುಖಾಮುಖಿಯಾಗುವ ದಿನ ನಿಗದಿಯಾಗಿದೆ. ದಕ್ಷಿಣ ಏಷ್ಯಾ ಫುಟ್ಬಾಲ್‌ ಫೆಡರೇಶನ್‌(ಸ್ಯಾಫ್‌) ಕಪ್‌ನ ವೇಳಾಪಟ್ಟಿಪ್ರಕಟಗೊಂಡಿದ್ದು, ಜೂ.21ರಂದು ಬದ್ಧವೈರಿಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸೆಣಸಲಿವೆ. 2018ರ ಸ್ಯಾಫ್‌ ಕಪ್‌ನಲ್ಲಿ ಕೊನೆಯ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗಿದ್ದವು.

ಬುಧವಾರ ಇಲ್ಲಿ ನಡೆದ ಕಾರ‍್ಯಕ್ರಮದಲ್ಲಿ ಅಖಿಲ ಭಾರತ ಫುಟ್ಬಾಲ್‌ ಫೆಡರೇಶನ್‌(ಎಐಎಫ್‌ಎಫ್‌) ವೇಳಾಪಟ್ಟಿಪ್ರಕಟಿಸಿತು. ‘ಎ’ ಗುಂಪಿನಲ್ಲಿ ಭಾರತ, ಪಾಕಿಸ್ತಾನದ ಜೊತೆ ಕುವೈಟ್‌ ಹಾಗೂ ನೇಪಾಳ ಸ್ಥಾನ ಪಡೆದರೆ, ‘ಬಿ’ ಗುಂಪಿನಲ್ಲಿ ಲೆಬನಾನ್‌, ಮಾಲ್ಡೀವ್‌್ಸ, ಬಾಂಗ್ಲಾದೇಶ ಹಾಗೂ ಭೂತನ್‌ ತಂಡಗಳಿವೆ.

ಭಾರತ ತಂಡವು ಜೂ.24ರಂದು ನೇಪಾಳ, ಜೂ.27ರಂದು ಕುವೈಟ್‌ ವಿರುದ್ಧ ಆಡಲಿದೆ. ಗುಂಪು ಹಂತವು ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆಯಲಿದ್ದು, ಅಗ್ರ-2 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೇರಲಿವೆ. ಜು.4ರಂದು ಫೈನಲ್‌ ನಡೆಯಲಿದೆ. ಟೂರ್ನಿಗೆ ಬೆಂಗಳೂರು ಆತಿಥ್ಯ ವಹಿಸಲಿದೆ.

click me!