ಕ್ಯಾಂಡಿಡೇಟ್ಸ್‌ ಚೆಸ್‌: ವಿದಿತ್‌ ವಿರುದ್ಧ ಪ್ರಜ್ಞಾನಂದಗೆ ಗೆಲುವು, ಗುಕೇಶ್‌ ಡ್ರಾಗೆ ತೃಪ್ತಿ

By Kannadaprabha News  |  First Published Apr 8, 2024, 9:14 AM IST

ಶನಿವಾರ ಮಧ್ಯರಾತ್ರಿ ಮುಕ್ತ ವಿಭಾಗದ 3ನೇ ಸುತ್ತಿನಲ್ಲಿ 18ರ ಪ್ರಜ್ಞಾನಂದ ಅವರು ವಿದಿತ್‌ ಗುಜರಾತಿ ವಿರುದ್ಧ ಜಯಭೇರಿ ಬಾರಿಸಿದರು. ಆದರೆ 2ನೇ ಸುತ್ತಿನಲ್ಲಿ ಪ್ರಜ್ಞಾನಂದ ವಿರುದ್ಧ ಗೆದ್ದಿದ್ದ ಗುಕೇಶ್‌ ಈ ಬಾರಿ ರಷ್ಯಾದ ಇಯಾನ್ ನೆಪೋಮ್ನಿಯಾಚ್ಚಿ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡರು.


ಟೊರೊಂಟೊ(ಕೆನಡಾ): ಇಲ್ಲಿ ನಡೆಯುತ್ತಿರುವ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯಲ್ಲಿ ಭಾರತದ ತಾರಾ ಚೆಸ್‌ ಪಟುಗಳಾದ ಆರ್‌.ಪ್ರಜ್ಞಾನಂದ ಹಾಗೂ ಅವರ ಸಹೋದರಿ ಆರ್.ವೈಶಾಲಿ ಗೆಲುವು ಸಾಧಿಸಿದ್ದಾರೆ.

ಶನಿವಾರ ಮಧ್ಯರಾತ್ರಿ ಮುಕ್ತ ವಿಭಾಗದ 3ನೇ ಸುತ್ತಿನಲ್ಲಿ 18ರ ಪ್ರಜ್ಞಾನಂದ ಅವರು ವಿದಿತ್‌ ಗುಜರಾತಿ ವಿರುದ್ಧ ಜಯಭೇರಿ ಬಾರಿಸಿದರು. ಆದರೆ 2ನೇ ಸುತ್ತಿನಲ್ಲಿ ಪ್ರಜ್ಞಾನಂದ ವಿರುದ್ಧ ಗೆದ್ದಿದ್ದ ಗುಕೇಶ್‌ ಈ ಬಾರಿ ರಷ್ಯಾದ ಇಯಾನ್ ನೆಪೋಮ್ನಿಯಾಚ್ಚಿ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡರು.

Tap to resize

Latest Videos

undefined

ಇನ್ನು ಮಹಿಳಾ ವಿಭಾಗದಲ್ಲಿ ಬಲ್ಗೇರಿಯಾದ ನುರ್‌ಗ್ಯುಲ್‌ ಸಲಿಮೋವಾ ಅವರನ್ನು ಸೋಲಿಸಿದ ವೈಶಾಲಿ, ಟೂರ್ನಿಯ ಮೊದಲ ಗೆಲುವು ದಾಖಲಿಸಿದರು. ಕೊನೆರು ಹಂಪಿ ಹಾಗೂ ಚೀನಾದ ಟಾನ್‌ ಝೊಂಗ್ಯಿ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.

ಕ್ಯಾಂಡಿಡೇಟ್ಸ್ ಚೆಸ್: ವಿದಿತ್, ಗುಕೇಶ್‌ಗೆ 2ನೇ ಸುತ್ತಲ್ಲಿ ಜಯ

ಟೂರ್ನಿಯಲ್ಲಿ ಇನ್ನೂ 11 ಸುತ್ತಿನ ಪಂದ್ಯಗಳು ನಡೆಯಲಿವೆ. ಸದ್ಯ ಪುರುಷರ ವಿಭಾಗದಲ್ಲಿ ಗುಕೇಶ್‌, ಅಮೆರಿಕದ ಫ್ಯಾಬಿಯಾನೊ ಕರುವಾನಾ ಹಾಗೂ ರಷ್ಯಾದ ಇಯಾನ್ ನೆಪೋಮ್ನಿಯಾಚ್ಚಿ ತಲಾ 2 ಅಂಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ವಿದಿತ್‌ ಹಾಗೂ ಪ್ರಜ್ಞಾನಂದ ತಲಾ 1.5 ಅಂಕಗಳನ್ನು ಹೊಂದಿದ್ದಾರೆ.

ಮಹಿಳಾ ವಿಭಾಗದಲ್ಲಿ ಚೀನಾದ ಟಾನ್‌ ಝೊಂಗ್ಯಿ 2 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದು, ತಲಾ 1.5 ಅಂಕ ಸಂಪಾದಿಸಿರುವ ವೈಶಾಲಿ, ಕೊನೆರು ಹಂಪಿ ಜಂಟಿ 2ನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ಹಾಕಿ: ಆಸೀಸ್‌ ವಿರುದ್ಧ ಭಾರತಕ್ಕೆ 2ನೇ ಸೋಲು

ಪರ್ಥ್‌: ಆಸ್ಟ್ರೇಲಿಯಾ ವಿರುದ್ಧ ಹಾಕಿ ಸರಣಿಯಲ್ಲಿ ಭಾರತ ಪುರುಷರ ತಂಡ ಸತತ 2ನೇ ಸೋಲನುಭವಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಭಾರತ 0-2 ಹಿನ್ನಡೆ ಅನುಭವಿಸಿದೆ. ಮೊದಲ ಪಂದ್ಯದಲ್ಲಿ ಶನಿವಾರ 1-5 ಗೋಲುಗಳಿಂದ ಸೋತಿದ್ದ ಭಾರತ ತಂಡ ಭಾನುವಾರ 2-4 ಅಂತರದಲ್ಲಿ ಪರಾಭವಗೊಂಡಿತು. 6ನೇ ನಿಮಿಷದಲ್ಲೇ ಆಸೀಸ್‌ ಗೋಲಿನ ಖಾತೆ ತೆರೆದರೂ, ಜುಗ್ರಾಜ್‌ ಸಿಂಗ್‌(9ನೇ ನಿಮಿಷ) ಹಾಗೂ ಹರ್ಮನ್‌ಪ್ರೀತ್‌ ಸಿಂಗ್‌(30ನೇ ನಿಮಿಷ) ಗೋಲು ಬಾರಿಸಿ ಭಾರತಕ್ಕೆ 2-1ರ ಮುನ್ನಡೆ ಒದಗಿಸಿದರು. ಆದರೆ ಬಳಿಕ 3 ಗೋಲು ಬಾರಿಸಿದ ಆತಿಥೇಯ ತಂಡ ಗೆಲುವನ್ನು ತನ್ನದಾಗಿಸಿಕೊಂಡಿತು. 3ನೇ ಪಂದ್ಯ ಏ.10ಕ್ಕೆ ನಡೆಯಲಿದೆ.

ಧೋನಿ, ಕೊಹ್ಲಿ ಹೇರ್‌ಕಟ್‌ ಗೆ ಇಷ್ಟು ರೇಟಾ? ಆಲಿಮ್ ಹಕೀಂ ಹೇಳ್ತಾರೆ ಕೇಳಿ

ಐಎಸ್‌ಎಲ್‌: ಬೆಂಗ್ಳೂರು ಎಫ್‌ಸಿ ಬಹುತೇಕ ಔಟ್‌

ಕೋಲ್ಕತಾ: ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌)ನಲ್ಲಿ ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ 9ನೇ ಸೋಲು ಕಂಡಿದ್ದು. ನಾಕೌಟ್‌ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ. ಭಾನುವಾರ ತಂಡಕ್ಕೆ ಈಸ್ಟ್‌ ಬೆಂಗಾಲ್‌ ವಿರುದ್ಧ 1-2 ಸೋಲು ಎದುರಾಯಿತು. ತಂಡ 21 ಪಂದ್ಯಗಳನ್ನಾಡಿದ್ದು, 22 ಅಂಕದೊಂದಿಗೆ 9ನೇ ಸ್ಥಾನದಲ್ಲಿದೆ. ತಂಡಕ್ಕೆ ಇನ್ನೊಂದು ಬಾಕಿ ಇದೆ. ಅದರಲ್ಲಿ ಗೆದ್ದರೂ ನಾಕೌಟ್‌ಗೇರಬೇಕಿದ್ದರೆ ನಾಕೌಟ್‌ ರೇಸ್‌ನಲ್ಲಿರುವ ಇತರ ತಂಡಗಳು ಸೋಲಬೇಕಿದೆ. 12 ತಂಡಗಳಿರುವ ಲೀಗ್‌ನಲ್ಲಿ ಅಗ್ರ-6 ತಂಡಗಳು ನಾಕೌಟ್‌ ಪ್ರವೇಶಿಸಲಿವೆ.
 

click me!