ವಿಶ್ವ ಬ್ಯಾಡ್ಮಿಂಟನ್: ಹೊಸ ಇತಿಹಾಸ ಬರೆದ ಸೈನಾ

By Web DeskFirst Published Aug 3, 2018, 10:16 AM IST
Highlights

ಇಲ್ಲಿ ನಡೆಯುತ್ತಿರುವ ಟೂರ್ನಿಯ ಮಹಿಳಾ ಸಿಂಗಲ್ಸ್ ಪ್ರಿ ಕ್ವಾರ್ಟರ್‌ನಲ್ಲಿ ಗುರುವಾರ ಸೈನಾ, 2013ರ ಚಾಂಪಿಯನ್ ಥಾಯ್ಲೆಂಡ್‌ನ ರಚನೋಕ್ ಇಂಟನಾನ್ ವಿರುದ್ಧ 21-16, 21-19 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಕ್ವಾರ್ಟರ್‌ನಲ್ಲಿ ಸೈನಾ, ಒಲಿಂಪಿಕ್ ಹಾಗೂ 2 ಬಾರಿ ವಿಶ್ವ ಚಾಂಪಿಯನ್ ಸ್ಪೇನ್‌ನ ಕ್ಯಾರೋಲಿನಾ ಮರಿನ್ ವಿರುದ್ಧ ಸೆಣಸಲಿದ್ದಾರೆ.

ನಾನ್ಜಿಂಗ್[ಆ.03]: ಭಾರತದ ತಾರಾ ಶಟ್ಲರ್ ಸೈನಾ ನೆಹ್ವಾಲ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಸತತ 8ನೇ ಬಾರಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಮೊದಲ ಮಹಿಳಾ ಆಟಗಾರ್ತಿ ಎನ್ನುವ ದಾಖಲೆ ಬರೆದಿದ್ದಾರೆ. 

ಲ್ಲಿ ನಡೆಯುತ್ತಿರುವ ಟೂರ್ನಿಯ ಮಹಿಳಾ ಸಿಂಗಲ್ಸ್ ಪ್ರಿ ಕ್ವಾರ್ಟರ್‌ನಲ್ಲಿ ಗುರುವಾರ ಸೈನಾ, 2013ರ ಚಾಂಪಿಯನ್ ಥಾಯ್ಲೆಂಡ್‌ನ ರಚನೋಕ್ ಇಂಟನಾನ್ ವಿರುದ್ಧ 21-16, 21-19 ನೇರ
ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಕ್ವಾರ್ಟರ್‌ನಲ್ಲಿ ಸೈನಾ, ಒಲಿಂಪಿಕ್ ಹಾಗೂ 2 ಬಾರಿ ವಿಶ್ವ ಚಾಂಪಿಯನ್ ಸ್ಪೇನ್‌ನ ಕ್ಯಾರೋಲಿನಾ ಮರಿನ್ ವಿರುದ್ಧ ಸೆಣಸಲಿದ್ದಾರೆ.

ಬುಧವಾರ ನಡೆದ ಮಹಿಳಾ ಸಿಂಗಲ್ಸ್‌ನ ಮತ್ತೊಂದು ಪ್ರಿ ಕ್ವಾರ್ಟರ್ ಪಂದ್ಯದಲ್ಲಿ ಪಿ.ವಿ.ಸಿಂಧು, ಕೊರಿಯಾದ ಜಿ ಹ್ಯುನ್ ಸಂಗ್ ವಿರುದ್ಧ21-10, 21-18 ಗೇಮ್’ಗಳಲ್ಲಿ ಜಯಿಸಿ, ಅಂತಿಮ 8ರ ಸುತ್ತಿಗೆ ಪ್ರವೇಶಿಸಿದರು. ಕ್ವಾರ್ಟರ್‌ನಲ್ಲಿ ಸಿಂಧುಗೆ ಜಪಾನ್‌ನ ನಜೋಮಿ ಓಕುಹಾರಾ ಎದುರಾಗಲಿದ್ದಾರೆ. ಓಕುಹಾರಾ ವಿರುದ್ಧ ಕಳೆದ ವರ್ಷ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸಿಂಧು ಸೋತಿದ್ದರು. 

ಪುರುಷರ ಸಿಂಗಲ್ಸ್ ಅಂತಿಮ 16ರ ಸುತ್ತಿನ ಪಂದ್ಯದಲ್ಲಿ ಬಿ.ಸಾಯಿ ಪ್ರಣೀತ್ ಡೆನ್ಮಾಕ್ ನರ್ ಕ್ರಿಸ್ಟಿಯನ್ ವಿಟ್ಟಿಂಗಸ್ ವಿರುದ್ಧ 21-13, 21-11ರಲ್ಲಿ ಸುಲಭ ಗೆಲುವು ಸಾಧಿಸಿ ಕ್ವಾರ್ಟರ್ ಪ್ರವೇಶಿಸಿದರೆ, ಕಿದಾಂಬಿ ಶ್ರೀಕಾಂತ್ ಸೋಲುಂಡು ಹೊರಬಿದ್ದರು. ಮಲೇಷ್ಯಾದ ಡರೆನ್ ಲೀವ್ ವಿರುದ್ಧ ಶ್ರೀಕಾಂತ್ 18-21, 18-21 ಗೇಮ್‌ಗಳಲ್ಲಿ ಪರಭಾವಗೊಂಡರು. 

click me!