ಹಾಕಿ ವಿಶ್ವಕಪ್: ಟೂರ್ನಿಯಿಂದ ಹೊರಬಿದ್ದ ಭಾರತ

By Web DeskFirst Published Aug 3, 2018, 9:54 AM IST
Highlights

ನಿಗದಿತ 60 ನಿಮಿಷಗಳ ಆಟದಲ್ಲಿ ಉಭಯ ತಂಡಗಳು ಯಾವುದೇ ಗೋಲು ಬಾರಿಸಲು ಸಾಧ್ಯವಾಗದ ಕಾರಣ, ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಶೂಟೌಟ್‌ನಲ್ಲಿ ಐರ್ಲೆಂಡ್ ಹಾಗೂ ಭಾರತ ಮೊದಲೆರಡು ಪ್ರಯತ್ನಗಳಲ್ಲಿ ಗೋಲು ಗಳಿಸುವಲ್ಲಿ ವಿಫಲವಾದವು.

ಲಂಡನ್[ಆ.03]: 44 ವರ್ಷಗಳ ಬಳಿಕ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸುವ ಭಾರತ ಮಹಿಳಾ ಹಾಕಿ ತಂಡದ ಕನಸು ಕನಸಾಗಿಯೇ ಉಳಿಯಿತು. ಗುರುವಾರ ರಾತ್ರಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ, ಪೆನಾಲ್ಟಿ ಶೂಟೌಟ್‌ನಲ್ಲಿ ಐರ್ಲೆಂಡ್ ವಿರುದ್ಧ 1-3 ಗೋಲುಗಳ ಸೋಲು ಅನುಭವಿಸಿತು.  ಐರ್ಲೆಂಡ್ ಸೆಮೀಸ್ ಪ್ರವೇಶಿಸಿದರೆ, ಭಾರತ ಟೂರ್ನಿಯಿಂದ ಹೊರಬಿತ್ತು.

ನಿಗದಿತ 60 ನಿಮಿಷಗಳ ಆಟದಲ್ಲಿ ಉಭಯ ತಂಡಗಳು ಯಾವುದೇ ಗೋಲು ಬಾರಿಸಲು ಸಾಧ್ಯವಾಗದ ಕಾರಣ, ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಶೂಟೌಟ್‌ನಲ್ಲಿ ಐರ್ಲೆಂಡ್ ಹಾಗೂ ಭಾರತ ಮೊದಲೆರಡು ಪ್ರಯತ್ನಗಳಲ್ಲಿ ಗೋಲು ಗಳಿಸುವಲ್ಲಿ ವಿಫಲವಾದವು. ಆದರೆ 3, 4 ಹಾಗೂ 5ನೇ ಪ್ರಯತ್ನದಲ್ಲಿ ಐರ್ಲೆಂಡ್ ಆಟಗಾರ್ತಿಯರು ಭಾರತದ ಗೋಲ್ ಕೀಪರ್ ಸವಿತಾರನ್ನು ವಂಚಿಸುವಲ್ಲಿ ಯಶಸ್ವಿಯಾದರು.

ಭಾರತ ಪರ 4ನೇ ಪ್ರಯತ್ನದಲ್ಲಿ ರೀನಾ ಗೋಲು ಬಾರಿಸಿ, ಜಯದ ಆಸೆ ಜೀವಂತವಾಗಿರಿಸಿದ್ದರು. ಆದರೆ ಐರ್ಲೆಂಡ್‌ನ ಕೌಶಲ್ಯದ ಮುಂದೆ ಭಾರತ ಮಂಕಾಯಿತು. ಸೆಮೀಸ್‌ನಲ್ಲಿ ಐರ್ಲೆಂಡ್ ತಂಡ ಸ್ಪೇನ್ ವಿರುದ್ಧ ಸೆಣಸಾಡಲಿದೆ. 

click me!