ಇಂದಿನಿಂದ ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌..! ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿ ಸಾತ್ವಿಕ್‌-ಚಿರಾಗ್ ಶೆಟ್ಟಿ

Published : Aug 21, 2023, 11:11 AM IST
ಇಂದಿನಿಂದ ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌..! ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿ ಸಾತ್ವಿಕ್‌-ಚಿರಾಗ್ ಶೆಟ್ಟಿ

ಸಾರಾಂಶ

ಕಳೆದ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದ ಸಾತ್ವಿಕ್‌-ಚಿರಾಗ್‌, ಈ ಬಾರಿ ಚಿನ್ನದ ಮೇಲೆ ಕಣ್ಣಿಟ್ಟಿದ್ದಾರೆ. 2019ರ ವಿಶ್ವ ಚಾಂಪಿಯನ್‌ಶಿಪ್‌ ಪಿ.ವಿ.ಸಿಂಧು, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 5 ಪದಕ ಗೆದ್ದಿದ್ದು, ಈ ಬಾರಿ ಮತ್ತೊಂದು ಪದಕ ಜಯಿಸುವ ನಿರೀಕ್ಷೆಯಲ್ಲಿದ್ದಾರೆಯಾದರೂ, ಕಳಪೆ ಲಯದಲ್ಲಿರುವ ಅವರು ಎಷ್ಟು  ದೂರ ಸಾಗಬಲ್ಲರು ಎನ್ನುವ ಕುತೂಹಲವಿದೆ.

ಕೊಪನ್‌ಹೇಗನ್‌(ಡೆನ್ಮಾರ್ಕ್‌): ಉತ್ತಮ ಲಯದಲ್ಲಿರುವ ಎಚ್‌.ಎಸ್‌.ಪ್ರಣಯ್‌ ಹಾಗೂ ಲಕ್ಷ್ಯ ಸೇನ್‌, ಸೋಮವಾರದಿಂದ ಇಲ್ಲಿ ಆರಂಭಗೊಳ್ಳಲಿರುವ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸವಾಲು ಮುನ್ನಡೆಸಲಿದ್ದಾರೆ. ಪುರುಷರ ಡಬಲ್ಸ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿರುವ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿ ಮೇಲೆ ಎಲ್ಲರ ಕಣ್ಣಿದ್ದು, ಪ್ರಶಸ್ತಿ ಜಯಿಸುವ ನೆಚ್ಚಿನ ಜೋಡಿ ಎನಿಸಿದೆ.

ಕಳೆದ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದ ಸಾತ್ವಿಕ್‌-ಚಿರಾಗ್‌, ಈ ಬಾರಿ ಚಿನ್ನದ ಮೇಲೆ ಕಣ್ಣಿಟ್ಟಿದ್ದಾರೆ. 2019ರ ವಿಶ್ವ ಚಾಂಪಿಯನ್‌ಶಿಪ್‌ ಪಿ.ವಿ.ಸಿಂಧು, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 5 ಪದಕ ಗೆದ್ದಿದ್ದು, ಈ ಬಾರಿ ಮತ್ತೊಂದು ಪದಕ ಜಯಿಸುವ ನಿರೀಕ್ಷೆಯಲ್ಲಿದ್ದಾರೆಯಾದರೂ, ಕಳಪೆ ಲಯದಲ್ಲಿರುವ ಅವರು ಎಷ್ಟು  ದೂರ ಸಾಗಬಲ್ಲರು ಎನ್ನುವ ಕುತೂಹಲವಿದೆ. ಸಿಂಧುಗೆ ಮೊದಲ ಸುತ್ತಿನಲ್ಲಿ ಬೈ ಸಿಕ್ಕಿದ್ದರೂ 2ನೇ ಸುತ್ತಿನಿಂದ ಕಠಿಣ ಸ್ಪರ್ಧೆ ಎದುರಾಗುವ ನಿರೀಕ್ಷೆ ಇದೆ. ಕಿದಂಬಿ ಶ್ರೀಕಾಂತ್‌ ಸಹ ಕಣದಲ್ಲಿದ್ದು, ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.

ಈ ವರೆಗೂ 13 ಪದಕ ಜಯಿಸಿರುವ ಭಾರತ

1977ರಲ್ಲಿ ಆರಂಭಗೊಂಡ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಈ ವರೆಗೂ 1 ಚಿನ್ನ, 4 ಬೆಳ್ಳಿ ಹಾಗೂ 8 ಕಂಚಿನ ಪದಕಗಳನ್ನು ಪಡೆದಿದೆ. 1983ರಿಂದ 2005ರ ವರೆಗೂ 2 ವರ್ಷಗಳಿಗೊಮ್ಮೆ ನಡೆಯುತ್ತಿದ್ದ ಟೂರ್ನಿ, ಆ ಬಳಿಕ ಒಲಿಂಪಿಕ್ಸ್‌ ವರ್ಷ ಹೊರತುಪಡಿಸಿ ಉಳಿದ ಸಮಯದಲ್ಲಿ ಪ್ರತಿ ವರ್ಷ ನಡೆಯಲಿದೆ. 1983ರ ಆವೃತ್ತಿಯಲ್ಲಿ ಪ್ರಕಾಶ್‌ ಪಡುಕೋಣೆ ಕಂಚಿನ ಪದಕ ಗೆಲ್ಲುವ ಮೂಲಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎನ್ನುವ ದಾಖಲೆ ಬರೆದಿದ್ದರು.

Chess World Cup 2023: ಎರಡನೇ ಸುತ್ತಿನಲ್ಲೂ ಡ್ರಾ ಸಾಧಿಸಿದ ಪ್ರಜ್ಞಾನಂದ..! ಇಂದು ಟೈ ಬ್ರೇಕರ್

ವಿಶ್ವ ಅಥ್ಲೆಟಿಕ್ಸ್‌: ಫೈನಲ್‌ ಪ್ರವೇಶಿಸದ ಭಾರತೀಯರು

ಬುಡಾಪೆಸ್ಟ್‌(ಹಂಗೇರಿ): ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ನೀರಸ ಪ್ರದರ್ಶನ ಮುಂದುವರಿದಿದೆ. 2ನೇ ದಿನವಾದ ಭಾನುವಾರ, ಸಂತೋಷ್‌ ಕುಮಾರ್‌ ಹಾಗೂ ಅನಿಲ್ ಸರ್ವೇಶ್‌ ಕುಶಾರೆ ಹೀಟ್ಸ್‌ನಲ್ಲೇ ಹೊರಬಿದ್ದರು.

ಪುರುಷರ 400 ಮೀ. ಹರ್ಡಲ್ಸ್‌ ಓಟದ ಹೀಟ್ಸ್‌ನಲ್ಲಿ ಸಂತೋಷ್‌ 7ನೇ ಸ್ಥಾನ ಪಡೆದರು. ಒಟ್ಟಾರೆ 36ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಪುರುಷರ ಹೈಜಂಪ್‌ನಲ್ಲಿ ಅನಿಲ್‌, 2.22 ಮೀ. ಎತ್ತರ ಜಿಗಿಯಲಷ್ಟೇ ಶಕ್ತರಾದರು. 2.30 ಮೀ. ಜಿಗಿದ ಅಥವಾ ಅಗ್ರ 12 ಸ್ಥಾನ ಪಡೆದ ಅಥ್ಲೀಟ್‌ಗಳಷ್ಟೇ ಫೈನಲ್‌ಗೇರಿದರು. 35 ಅಥ್ಲೀಟ್‌ಗಳಿದ್ದ ಸ್ಪರ್ಧೆಯಲ್ಲಿ ಅನಿಲ್‌ ಒಟ್ಟಾರೆ 20ನೇ ಸ್ಥಾನ ಪಡೆದರು.

ISSF World Championships 2023 ಮೆಹುಲಿ ಘೋಷ್‌ಗೆ ಪ್ಯಾರಿಸ್ ಒಲಿಂಪಿಕ್ಸ್‌ ಅರ್ಹತೆ..!

ಇನ್ನು ಶನಿವಾರ ರಾತ್ರಿ ನಡೆದ ಪುರುಷರ ಟ್ರಿಪಲ್‌ ಜಂಪ್‌ನ ಅರ್ಹತಾ ಸುತ್ತಿನಲ್ಲಿ ಪ್ರವೀಣ್‌ ಚಿತ್ರವೇಲ್‌, ಅಬ್ದುಲ್ಲಾ ಅಬೂಬಕರ್‌ ಹಾಗೂ ಎಲ್ಡೋಸ್‌ ಪೌಲ್‌ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಫೈನಲ್‌ಗೇರಲು 17.70 ಮೀ. ದೂರಕ್ಕೆ ನೆಗೆಯಬೇಕಿತ್ತು ಅಥವಾ ಅಗ್ರ 12ರಲ್ಲಿ ಸ್ಥಾನ ಪಡೆಯಬೇಕಿತ್ತು. 16.61 ಮೀ. ನೆಗೆದ ಅಬ್ದುಲ್ಲಾ 15ನೇ ಸ್ಥಾನ ಪಡೆದರೆ, ಪ್ರವೀಣ್(16.38) ಹಾಗೂ ಎಲ್ಡೋಸ್‌(15.59) ಕ್ರಮವಾಗಿ 20 ಹಾಗೂ 29ನೇ ಸ್ಥಾನ ಪಡೆದರು. ಸೋಮವಾರ ಭಾರತೀಯರ ಸ್ಪರ್ಧೆ ಇಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಎಸ್‌ಸಿಎಗೆ ರಾಜ್ಯ ಸರ್ಕಾರ ಶಾಕ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಕ್ಕೆ 'ರೆಡ್ ಸಿಗ್ನಲ್'
2026ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಎರಡು ಅಪರೂಪದಲ್ಲೇ ಅಪರೂಪದ ದಾಖಲೆ ಬರೆಯಲು ರೆಡಿಯಾದ ಟೀಂ ಇಂಡಿಯಾ!