140 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಪುರುಷರು ಮಾಡಲಾಗದ ಈ 'ಐತಿಹಾಸಿಕ ದಾಖಲೆ'ಯನ್ನು ಮಹಿಳೆ ಮಾಡಿದಳು!

By Suvarna Web DeskFirst Published Jul 4, 2017, 4:10 PM IST
Highlights

ಪುರುಷರ ಆಟವೆಂದೇ ಕರೆಯಲ್ಪಡುವ ಆಟ ಕ್ರಿಕೆಟ್'ನಲ್ಲಿ ಮಹಿಳಾ ಕ್ರಿಕೆಟರ್ ಒಬ್ಬಳು ಐತಿಹಾಸಿಕ ದಾಖಲೆಯನ್ನು ಮಾಡಿದ್ದಾರೆ. ಈಕೆ ನಿರ್ಮಿಸಿದ ಆ ದಾಖಲೆ ಈವರೆಗೆ ಯಾವ ಪುರುಷ ಕ್ರಿಕೆಟರ್ ಕೂಡಾ ಮಾಡಿಲ್ಲ. ಅಷ್ಟಕ್ಕೂ ಆ ದಾಖಲೆ ಯಾವುದು ಅಂತೀರಾ? ಇಲ್ಲಿದೆ ವಿವರ

ನವದೆಹಲಿ(ಜು.04): ಪುರುಷರ ಆಟವೆಂದೇ ಕರೆಯಲ್ಪಡುವ ಆಟ ಕ್ರಿಕೆಟ್'ನಲ್ಲಿ ಮಹಿಳಾ ಕ್ರಿಕೆಟರ್ ಒಬ್ಬಳು ಐತಿಹಾಸಿಕ ದಾಖಲೆಯನ್ನು ಮಾಡಿದ್ದಾರೆ. ಈಕೆ ನಿರ್ಮಿಸಿದ ಆ ದಾಖಲೆ ಈವರೆಗೆ ಯಾವ ಪುರುಷ ಕ್ರಿಕೆಟರ್ ಕೂಡಾ ಮಾಡಿಲ್ಲ. ಅಷ್ಟಕ್ಕೂ ಆ ದಾಖಲೆ ಯಾವುದು ಅಂತೀರಾ? ಇಲ್ಲಿದೆ ವಿವರ

ಪುರುಷರ ಮೊದಲ ಅಂತರಾಷ್ಟ್ರೀಯ ಟೆಸ್ಟ್ ಪಂದ್ಯ 15 ಮಾರ್ಚ್ 1877 ರಂದು ನಡೆದಿತ್ತು. ಇನ್ನು ವಿಶ್ವ ಏಕದಿನ ಪಂದ್ಯ 1971ರ ಜನವರಿಯಲ್ಲಿ ನಡೆದಿತ್ತು. ಹೀಗೆ ನೋಡಿದರೆ ಕ್ರಿಕೆಟ್ ಸರಿ ಸುಮಾರು 140 ವರ್ಷಗಳಿಂದ ಆಡಲಾಗುತ್ತಿದೆ. ಏಕದಿನ ಪಂದ್ಯದ ಇತಿಹಾಸ ಕೂಡಾ 46 ವರ್ಷ ಹಿಂದಿನದು. ಈ ನಡುವೆ ವಿಶ್ವದಾದ್ಯಂತ ಅದೆಷ್ಟೋ ದಿಗ್ಗಜ ಬೌಲರ್ಸ್ ಕ್ರಿಕೆಟ್ ಲೋಕಕ್ಕೆ ಬಂದು ಹೋಗಿದ್ದಾರೆ ಆದರೆ ದಕ್ಷಣ ಆಫ್ರಿಕಾದ ಮಹಿಳಾ ಕ್ರಿಕೆಟ್ ನಾಯಕಿ ಡೆನ್ ವೆನ್ ನಿಯೆಕರ್ಕ್ ಒಂದು ವಿಭಿನ್ನ ದಾಖಲೆ ನಿರ್ಮಿಸಿದ್ದಾರೆ. ಲೆಗ್ ಸ್ಪಿನ್ನರ್ ಡೆನ್ ವೆನ್ ನಿಯೆಕರ್ಕ್ ಎದುರಾಳಿ ತಂಡಕ್ಕೆ(ವೆಸ್ಟ್ ಇಂಡೀಸ್) ಒಂದು ರನ್ ಕೂಡಾ ಮಾಡುವ ಅವಕಾಶ ನೀಡದೆ ಒಂದರ ಹಿಂದೆ ಮತ್ತೊಂದರಂತೆ ಬರೋಬ್ಬರಿ ನಾಲ್ಕು ವಿಕೆಟ್ ಉರುಳಿಸಿದ್ದಾರೆ.

ತಮ್ಮ 3.2 ಓವರ್'ಗಳಲ್ಲಿ, 3 ಮೆಡೆನ್ ಓವರ್'ಗಳನ್ನು ಎಸೆದಿದ್ದಾರೆ. ಈ ನಡುವೆ ಒಟ್ಟು ಎದುರಾಳಿಗಳಿಗೆ ಸಿಂಗಲ್ ರನ್ ಗಳಿಸುವ ಅವಕಾಶವನ್ನೂ ನೀಡದೆ ಒಟ್ಟು 4 ವಿಕೆಟ್ ಉರುಳಿಸಿದ್ದಾರೆ. ಇಂತಹ ಒಂದು ಚಮತ್ಕಾರ ಈವರೆಗೆ ಯಾವೊಬ್ಬ ಪುರುಷ ಆಟಗಾರನೂ ಮಾಡಿಲ್ಲ. ಡೆನ್ ವೆನ್ ನಿಯೆಕರ್ಕ್'ನ ಈ ಅದ್ಭುತ ಬೌಲಿಂಗ್'ನಿಂದಲೇ ವಿಶ್ವ ಮಹಿಳಾ ಚಾಂಪಿಯನ್ಸ್ ಟ್ರೋಫಿಯ ಒಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ತನ್ನ ಎದುರಾಳಿಯಾಗಿದ್ದ ವೆಸ್ಟ್ ಇಂಡೀಸ್ ತಂಡವನ್ನು ಕೇವಲ 48ರನ್'ಗಳಲ್ಲಿ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದೆ.

click me!