ರಾಸ್ ಟೇಲರ್ ದುರ್ಬಲ ನಾಯಕ

By Suvarna Web DeskFirst Published Oct 25, 2016, 1:59 PM IST
Highlights

2011ರಲ್ಲಿ ತಂಡದ ನಾಯಕ ಡೇನಿಯಲ್ ವೆಟೋರಿ ನಿವೃತ್ತಿಯಾದ ನಂತರ, ತಂಡದಲ್ಲಿ ಹಿರಿಯರಾಗಿದ್ದರೂ ಮೆಕಲಂ ಅವರನ್ನು ಬಿಟ್ಟು ಟೇಲರ್ ಅವರಿಗೆ ನಾಯಕತ್ವ ನೀಡಿದ್ದು ಇಬ್ಬರ ನಡುವಿನ ವಿರಸಕ್ಕೆ ಕಾರಣವಾಗಿತ್ತು

ಮುಂಬೈ(ಅ.25): ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ರಾಸ್ ಟೇಲರ್ ಅವರು ತಮ್ಮ ದುರ್ಬಲ ನಾಯಕತ್ವದಿಂದಾಗಿ ತಂಡವನ್ನು ಪ್ರಪಾತದ ಅಂಚಿಗೆ ಕೊಂಡೊಯ್ದಿದ್ದರು ಎಂದು ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಬ್ರೆಂಡಾನ್ ಮೆಕಲಂ ಇತ್ತೀಚೆಗೆ ಬಿಡುಗಡೆಗೊಂಡಿರುವ ತಮ್ಮ ಆತ್ಮಕಥೆ ‘ಡಿಕ್ಲೇರ್ಡ್’ನಲ್ಲಿ ಹೇಳಿಕೊಂಡಿದ್ದಾರೆ ಎಂದು ಕ್ರಿಕ್ ಇನ್ಫೋ ತಿಳಿಸಿದೆ.

2011ರಲ್ಲಿ ತಂಡದ ನಾಯಕ ಡೇನಿಯಲ್ ವೆಟೋರಿ ನಿವೃತ್ತಿಯಾದ ನಂತರ, ತಂಡದಲ್ಲಿ ಹಿರಿಯರಾಗಿದ್ದರೂ ಮೆಕಲಂ ಅವರನ್ನು ಬಿಟ್ಟು ಟೇಲರ್ ಅವರಿಗೆ ನಾಯಕತ್ವ ನೀಡಿದ್ದು ಇಬ್ಬರ ನಡುವಿನ ವಿರಸಕ್ಕೆ ಕಾರಣವಾಗಿತ್ತು. ತಂಡದ ಮುಖ್ಯ ಕೋಚ್ ಆಗಿ 2012ರಲ್ಲಿ ಮೈಕ್ ಹೆಸನ್ ನೇಮಕಗೊಂಡ ನಂತರ ರಾಸ್ ಅವರಿಗೆ ಆಪ್ತರಾದರು. ಇದಾಗಿ ಕೆಲವೇ ದಿನಗಳಲ್ಲಿ ಬ್ರೆಂಡನ್ ಅವರನ್ನು ತಂಡದಿಂದ ಕೈಬಿಟ್ಟಿದ್ದು ಅವರಿಗೆ ಹಲವಾರು ಅನುಮಾನಗಳನ್ನು ಹುಟ್ಟಿಸಿತ್ತು.

ಅದೇ ವರ್ಷ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದ ವೇಳೆಯಲ್ಲಿ ರಾಸ್ ಟೇಲರ್ ಗಾಯಗೊಂಡು ತಂಡದಿಂದ ಹೊರಗುಳಿದಿದ್ದಾಗ ಮೆಕಲಂ ಅವರಿಗೆ ತಂಡದ ಚುಕ್ಕಾಣಿ ಹಿಡಿಯಲು ಬುಲಾವ್ ನೀಡಲಾಗಿತ್ತು. ಇದನ್ನು ತಮ್ಮ ಆತ್ಮಕಥೆಯಲ್ಲಿ ಸ್ಮರಿಸಿರುವ ಅವರು, ‘‘ವೆಸ್ಟ್ ಇಂಡೀಸ್‌ಗೆ ತೆರಳಿದ್ದಾಗ ತಂಡವು ಸಾಕಷ್ಟು ದುರ್ಬಲವಾಗಿದ್ದನ್ನು ಗಮನಿಸಿದ್ದೆ. ಇದೊಂದು ದುರ್ಬಲ ನಾಯಕತ್ವದಿಂದಾದ ಅವಗಢವಾಗಿತ್ತು’’ ಎಂದು ಮೆಕ್ಲಮ್ ಬಣ್ಣಿಸಿದ್ದಾರೆ.

click me!