
ನ್ಯೂಜಿಲೆಂಡ್(ಜೂನ್.3): ನ್ಯೂಜಿಲೆಂಡ್ ಮಾಜಿ ನಾಯಕ ಬ್ರೆಂಡನ್ ಮೆಕ್‌ಕಲಮ್ ಕ್ರಿಕೆಟ್‌ನಲ್ಲಿ ಮಾತ್ರವಲ್ಲ, ರಗ್ಬಿ ಕ್ರೀಡೆಯಲ್ಲೂ ಮಾಸ್ಟರ್. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಲೀಗ್ ಕ್ರಿಕೆಟ್ ಟೂರ್ನಿಗಳಲ್ಲಿ ಸಕ್ರೀಯವಾಗಿರೋ ಮೆಕ್‌ಕಲಮ್ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಬಿಡುವಿನ ವೇಳೆಯಲ್ಲಿ ಮೆಕ್‌ಕಲಮ್ ರಗ್ಬಿ ಆಡೋ ಮೂಲಕ ಗಮನಸೆಳೆದಿದ್ದಾರೆ.
18 ವರ್ಷಗಳ ಬಳಿಕ ಬ್ರೆಂಡನ್ ಮೆಕ್‌ಕಲಮ್ ಇದೀಗ ರಗ್ಬಿ ಆಡಿದ್ದಾರೆ. ಶಾಲಾ ದಿನಗಳಲ್ಲಿ ಅತ್ಯುತ್ತಮ ರಗ್ಬಿ ಪಟುವಾಗಿದ್ದ ಮೆಕ್‌ಕಲಮ್, ಇದೀಗ ನ್ಯೂಜಿಲೆಂಡ್‌ನ ಮತಾಮತ ಬಿ ತಂಡದ ಪರವಾಗಿ ರಗ್ಬಿ ಆಡಿದ್ದಾರೆ. ಗಾಯದ ನಡುವೆಯೂ ರಗ್ಬಿ ಪಂದ್ಯವಾಡಿದ ಮೆಕ್‌ಕಲಮ್ ತಂಡವನ್ನ ಗೆಲ್ಲಿಸಲು ಸಾಧ್ಯವಾಗಲಿಲ್ಲ. ಆದರೆ ಪಂದ್ಯದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮೆಕ್‌ಕಲಮ್ ಸಂತಸ ಹಂಚಿಕೊಂಡಿದ್ದಾರೆ.
ಹೈಸ್ಕೂಲ್ ವಿದ್ಯಾಬ್ಯಾಸದ ವೇಳೆ ರಗ್ಬಿ ನನ್ನ ನೆಚ್ಚಿನ ಕ್ರೀಡೆಯಾಗಿತ್ತು ಎಂದು ಮೆಕ್‌ಕಲಮ್ ನ್ಯೂಜಿಲೆಂಡ್‌ನ ಖಾಸಗಿ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಆಲ್-ಬ್ಲಾಕ್ಸ್ ತಂಡದ ಪರ ರಗ್ಬಿ ಆಡುತ್ತಿದ್ದೆ. ಇದೀಗ 18 ವರ್ಷಗಳ ಬಳಿಕ ಮತ್ತೆ ರಗ್ಬಿ ಆಡಿರೋದು ಖುಷಿ ತಂದಿದೆ ಎಂದು ಮೆಕ್‌ಕಲಮ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.