
ನವದೆಹಲಿ(ಆ.09): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್), ಆವೃತ್ತಿಯಿಂದ ಆವೃತ್ತಿಗೆ ಜನಪ್ರಿಯಗೊಳ್ಳುತ್ತಲೇ ಇದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಅನ್ನೋ ಹೆಗ್ಗಳಿಗೆ ಪಾತ್ರವಾಗಿರೋ ಐಪಿಎಲ್ ಬ್ರ್ಯಾಂಡ್ ಮೌಲ್ಯ ಬರೋಬ್ಬರಿ 43 ಸಾವಿರ ಕೋಟಿಯಾಗಿದೆ.
ಪ್ರತಿ ವರ್ಷ ವೀಕ್ಷಕರ ಸಂಖ್ಯೆಲ್ಲೂ ಗಣನೀಯ ಏರಿಕೆ ಕಾಣುತ್ತಿರುವ ಐಪಿಎಲ್ ಟೂರ್ನಿ, ಇದೀಗ ಗರಿಷ್ಠ ಬ್ರ್ಯಾಂಡ್ ವ್ಯಾಲ್ಯೂ ಹೊಂದಿದ ಕ್ರಿಕೆಟ್ ಲೀಗ್ ಅನ್ನೋ ದಾಖಲೆ ಬರೆದಿದೆ. ಡಫ್ ಹಾಗೂ ಫೆಲ್ಪ್ಸ್ ಎನ್ನುವ ಜಾಗತಿಕ ಮೌಲ್ಯಮಾಪನ ಹಾಗೂ ಕಾರ್ಪೋರೇಟ್ ಹಣಕಾಸು ಸಲಹಾ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಐಪಿಎಲ್ ಬ್ರಾಂಡ್ ಮೌಲ್ಯ ಬಯಲಾಗಿದೆ.
ಡಫ್ ಹಾಗೂ ಫೆಲ್ಪ್ಸ್ ಪ್ರಕಟಿಸಿರುವ ವರದಿ ಪ್ರಕಾರ, 2018ರಲ್ಲಿ ಐಪಿಎಲ್ ಬ್ರಾಂಡ್ ಮೌಲ್ಯ ₹43 ಸಾವಿರ ಕೋಟಿ (6.3 ಬಿಲಿಯನ್ ಡಾಲರ್)ಗೆ ಏರಿಕೆಯಾಗಿದೆ. 2017ರಲ್ಲಿ ತಂಡದ ಬ್ರಾಂಡ್ ಮೌಲ್ಯ ₹36 ಸಾವಿರ ಕೋಟಿ ಇತ್ತು. ಇದೇ ವೇಳೆ ಮುಂಬೈ ಇಂಡಿಯನ್ಸ್ ಅತಿಹೆಚ್ಚು ಬ್ರಾಂಡ್ ಮೌಲ್ಯ ಹೊಂದಿರುವ ತಂಡ (₹775 ಕೋಟಿ) ಎನಿಸಿಕೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.