ಬೌಲರ್‌ಗಳಿಗೂ ಬರಲಿದೆ ಹೆಲ್ಮೆಟ್ -ಹೊಸ ನೀತಿ ಶಿಫಾರಸು!

By Web DeskFirst Published Aug 9, 2018, 11:43 AM IST
Highlights

ಕ್ರಿಕೆಟ್‌ನಲ್ಲಿ ಇಷ್ಟು ದಿನ ಬ್ಯಾಟ್ಸ್‌ಮನ್ ಹಾಗೂ ವಿಕೆಟ್ ಕೀಪರ್ ಹೆಲ್ಮೆಟ್ ಬಳಸುತ್ತಿದ್ದರು. ಬ್ಯಾಟ್ಸ್‌ಮನ್‌ಗಳ ಅಬ್ಬರ ಹೆಚ್ಚಾಗುತ್ತಿದ್ದಂತೆ, ಇತ್ತೀಚೆಗೆ ಅಂಪೈರ್‌ಗಳು ಹೆಲ್ಮೆಟ್ ಬಳಸುತ್ತಿದ್ದಾರೆ. ಇದೀಗ ಬೌಲರ್‌ಗಳಿಗೂ ಹೆಲ್ಮೆಟ್ ಖಡ್ಡಾಯಗೊಳಿಸಲು ಎಂಸಿಸಿ ಹೊಸ ನೀತಿ ಶಿಫಾರಸ್ಸು ಮಾಡಿದೆ.

ಲಂಡನ್(ಆ.09) ಚುಟುಕು ಕ್ರಿಕೆಟ್‌ನಿಂದ ಇದೀಗ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್ ಪ್ರಾಬಲ್ಯ ಹೆಚ್ಚುತ್ತಿದೆ. ಪ್ರತಿ ಎಸೆತವನ್ನೂ ಬೌಂಡರಿ ಗೆರೆ ದಾಟಿಲು ಬ್ಯಾಟ್ಸ್‌ಮನ್‌ಗಳು ಪ್ರಯತ್ನಿಸುತ್ತಿದ್ದಾರೆ. ಇದು ಬೌಲರ್‌ಗಳಿಗೆ ಪ್ರಾಣಕ್ಕೆ ಸಂಚಕಾರ ತಂದಿದೆ.

ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ಅಬ್ಬರದಿಂದ ಬೌಲರ್‌ಗಳು ಗಾಯಗೊಳ್ಳುವ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ಕೌಂಟಿ ಕ್ರಿಕೆಟ್‌ನಲ್ಲಿ
ಬ್ಯಾಟ್ಸ್‌ಮನ್ ಒಬ್ಬ ಬಾರಿಸಿದ ಚೆಂಡು ಬೌಲರ್ ತಲೆಗೆ ಬಡಿದು ಬಲವಾದ ಪೆಟ್ಟು ಬಿದ್ದಿತ್ತು.

 ಆ ಬೌಲರ್ ಅನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಬೇಕಾದ ಪರಿಸ್ಥಿತಿ ಎದುರಾಗಿತ್ತು. ಈ ಕಾರಣದಿಂದಾಗಿ ಬೌಲರ್‌ಗಳಿಗೂ ಸುರಕ್ಷಾ ಕವಚವನ್ನು ಧರಿಸಲು ನಿಯಮ ಜಾರಿ ಮಾಡುವ ಸಾಧ್ಯತೆ ಇದೆ. ಕೆಲ ತಿಂಗಳುಗಳ ಹಿಂದೆ ನ್ಯೂಜಿಲೆಂಡ್‌ನ ದೇಸಿ ಪಂದ್ಯದಲ್ಲಿ ಬೌಲರ್ ವಾರನ್ ಬಾರ್ನ್ಸ್ ಹೆಲ್ಮೆಟ್ ಧರಿಸಿ ಗಮನ ಸೆಳೆದಿದ್ದರು. 

click me!