
ಸಿಡ್ನಿ(ಸೆ.22): ಕ್ರಿಕೆಟ್ ಅಪಾಯಕಾರಿ ಆಟವೂ ಹೌದು. ಬೌಲರ್‌ಗಳ ಮಾರಕ ಬೌನ್ಸರ್ ತೆಲೆಗೆ ಬಡಿದು ಬ್ಯಾಟ್ಸ್‌ಮನ್ ಸಾವನ್ನಪ್ಪಿರುವ ಘಟನೆ ನಡೆದಿದೆ. ಇನ್ನು ಟಿ20 ಕ್ರಿಕೆಟ್‌ನಿಂದ ಸ್ಫೋಟಕ ಹೊಡೆತಕ್ಕೆ ಬೌಲರ್‌ಗಳು ಅಪಾಯ ಎದುರಿಸಿದ್ದಾರೆ. ಇದೀಗ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಸ್ಫೋಟಕ ಹೊಡೆತದಿಂದ ಬೌಲರ್ ಕೂದಲೆಳೆಯುವ ಅಂತರದಲ್ಲಿ ಪಾರಾದ ಘಟನೆ ನಡೆದಿದೆ.
ಇದನ್ನೂ ಓದಿ: INDvSA:ನೆಚ್ಚಿನ ಮೈದಾನದಲ್ಲಿ ಶಾಕ್; ಆದರೂ ದಾಖಲೆ ಬರೆದ ರೋಹಿತ್!
ನ್ಯೂ ಸೌಥ್ ವೇಲ್ಸ್ ತಂಡದ ಮಿಕಿ ಎಡ್ವರ್ಡ್ಸ್ ಕ್ವೀನ್ಸ್‌ಲ್ಯಾಂಡ್ ತಂಡದ ಸ್ಯಾಮ್ ಹೀಝ್‌ಲೆಟ್‌ಗೆ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ ಸ್ಯಾಮ್ ಫ್ರಂಟ್ ಫೂಟ್ ಬಂದು ಭರ್ಜರಿ ಹೊಡೆತಕ್ಕೆ ಮುಂದಾಗಿದ್ದಾರೆ. ಸ್ಯಾಮ್ ಹೊಡೆತದಿಂದ ಚಿಮ್ಮಿದ ಬಾಲ್ ನೇರವಾಗಿ ಬೌಲರ್ ತಲೆಯತ್ತ ಧಾವಿಸಿತ್ತು. ತಕ್ಷಣವೇ ಕೈ ಅಡ್ಡ ಹಿಡಿದ ಮಿಕಿ ಅಫಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಪ್ರವಾಹ ಸಂತ್ರಸ್ತರಿಗೆ ನೆರವು; ಅಭಿಯಾನದಲ್ಲಿ ಕೊಹ್ಲಿ, ಶಾಸ್ತ್ರಿ!
ಅಪಾಯಕಾರಿ ಘಟನೆಯ ವಿಡಿಯೋ ವೈರಲ್ ಆಗಿದೆ. ಸೆಕೆಂಡ್‌ಗಳ ಅಂತರದಲ್ಲಿ ಮಿಕಿ ಪಾರಾಗಿದ್ದಾರೆ. ಕೈ ಅಡ್ಡ ಹಿಜಿದ ಕಾರಣ ಮಣಿಕಟ್ಟಿಗೆ ಗಂಭೀರ ಗಾಯವಾಗಿದೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಮಿಕಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.