INDvSA:ನೆಚ್ಚಿನ ಮೈದಾನದಲ್ಲಿ ಶಾಕ್; ಆದರೂ ದಾಖಲೆ ಬರೆದ ರೋಹಿತ್!

By Web DeskFirst Published Sep 22, 2019, 7:28 PM IST
Highlights

ಸೌತ್ ಆಫ್ರಿಕಾ ವಿರುದ್ದ ಟೀಂ ಇಂಡಿಯಾ ಆರಂಭದಲ್ಲೇ ಆಘಾತ ಅನುಭವಿಸಿದೆ. ನೆಚ್ಚಿನ ಕ್ರೀಡಾಂಗಣಗಲ್ಲಿ ರೋಹಿತ್ ಶರ್ಮಾ ಬಹುಬೇಗನೆ ವಿಕೆಟ್ ಕೈಚೆಲ್ಲಿದ್ದಾರೆ. ಆದರೂ ಎಂ.ಎಸ್.ಧೋನಿ ದಾಖಲೆ ಸರಿಗಟ್ಟಿದ್ದಾರೆ.
 

ಬೆಂಗಳೂರು(ಸೆ.22): ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಆಘಾತ ಅನುಭವಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 6 ರನ್ ಸಿಡಿಸಿ ಔಟಾಗಿದ್ದಾರೆ. ಈ ಮೂಲಕ ಭಾರತ 22 ರನ್‌ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಪತನಗೊಂಡಿತು.

ಇದನ್ನೂ ಓದಿ: ಕರ್ನಾಟಕ ಪ್ರವಾಹ ಸಂತ್ರಸ್ತರಿಗೆ ನೆರವು; ಅಭಿಯಾನದಲ್ಲಿ ಕೊಹ್ಲಿ, ಶಾಸ್ತ್ರಿ!

ರೋಹಿತ್ ಶರ್ಮಾಗೆ ಚಿನ್ನಸ್ವಾಮಿ ಕ್ರೀಡಾಂಗಣ ನೆಚ್ಚಿನ ಮೈದಾನ. ಇದೇ ಮೈದಾನದಲ್ಲಿ ರೋಹಿತ್ ದ್ವಿಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಪ್ರತಿ ಭಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರೋಹಿತ್ ಅಬ್ಬರಿಸಿದ್ದಾರೆ. ಆದರೆ ಈ ಬಾರಿ ರೋಹಿತ್ ಒಂದಂಕಿಗೆ ವಿಕೆಟ್ ಕೈಚೆಲ್ಲಿದ್ದಾರೆ. ರೋಹಿತ್ ಕೇವಲ 6 ರನ್ ಸಿಡಿಸಿ ಔಟಾದರೂ ಎಂ.ಎಸ್.ಧೋನಿ ದಾಖಲೆ ಸರಿಗಟ್ಟಿದ್ದಾರೆ.

ಇದನ್ನೂ ಓದಿ: #INDvSA 3ನೇ ಟಿ20: ಟಾಸ್ ಗೆದ್ದ ಭಾರತ ಬ್ಯಾಟಿಂಗ್

ಭಾರತದ ಪರ ಗರಿಷ್ಠ ಟಿ20 ಪಂದ್ಯ ಆಡಿದ ಸಾಧಕರಲ್ಲಿ ಇದೀಗ ಧೋನಿ ದಾಖಲೆಯನ್ನು ರೋಹಿತ್ ಸರಿಗಟ್ಟಿದ್ದಾರೆ. ಧೋನಿ ಹಾಗೂ ರೋಹಿತ್ 98 ಟಿ20 ಪಂದ್ಯ ಆಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲಿದ್ದಾರೆ.

ಟೀಂ ಇಂಡಿಯಾ ಪರ ಗರಿಷ್ಠ ಟಿ20 ಆಡಿದ ಸಾಧಕರು
ಎಂ.ಎಸ್,ಧೋನಿ = 98 ( ಪಂದ್ಯ)
ರೋಹಿತ್ ಶರ್ಮಾ  = 98 ( ಪಂದ್ಯ)
ಸುರೇಶ್ ರೈನಾ  = 78( ಪಂದ್ಯ) 
ವಿರಾಟ್ ಕೊಹ್ಲಿ  = 72( ಪಂದ್ಯ)
ಯುವರಾಜ್ ಸಿಂಗ್  = 58 ( ಪಂದ್ಯ)
ಶಿಖರ್ ಧವನ್  = 55 ( ಪಂದ್ಯ)

click me!