2015ರ ಕಿವೀಸ್ ವಿಶ್ವಕಪ್ ಹೀರೋ ಕ್ರಿಕೆಟ್’ಗೆ ಗುಡ್’ಬೈ..!

Published : Aug 23, 2018, 10:18 AM ISTUpdated : Sep 09, 2018, 09:50 PM IST
2015ರ ಕಿವೀಸ್ ವಿಶ್ವಕಪ್ ಹೀರೋ ಕ್ರಿಕೆಟ್’ಗೆ ಗುಡ್’ಬೈ..!

ಸಾರಾಂಶ

ಎಲಿಯಟ್‌ ನ್ಯೂಜಿಲೆಂಡ್‌ ಪರ 5 ಟೆಸ್ಟ್‌, 83 ಏಕದಿನ ಮತ್ತು 17 ಟಿ20 ಪಂದ್ಯಗಳನ್ನಾಡಿದ್ದಾರೆ. ಎಲಿಯಟ್‌, ಕಳೆದ ವರ್ಷ ಪಾಕಿಸ್ತಾನ ವಿರುದ್ಧ ವಿಶ್ವ ಇಲೆವೆನ್‌ ಪರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. 

ವೆಲ್ಲಿಂಗ್ಟನ್[ಆ.23]: ದಕ್ಷಿಣ ಆಫ್ರಿಕಾ ಮೂಲದ ನ್ಯೂಜಿಲೆಂಡ್‌ ಆಲ್ರೌಂಡರ್‌ ಗ್ರ್ಯಾಂಟ್‌ ಎಲಿಯಟ್‌, ಬುಧವಾರ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು.  39 ವರ್ಷದ ಎಲಿಯಟ್‌, ತಮ್ಮ ನಿವೃತ್ತಿ ವಿಷಯವನ್ನು ಸಾಮಾಜಿಕ ತಾಣದಲ್ಲಿ ಬಹಿರಂಗಪಡಿಸಿದ್ದಾರೆ. 

ಎಲಿಯಟ್‌ ನ್ಯೂಜಿಲೆಂಡ್‌ ಪರ 5 ಟೆಸ್ಟ್‌, 83 ಏಕದಿನ ಮತ್ತು 17 ಟಿ20 ಪಂದ್ಯಗಳನ್ನಾಡಿದ್ದಾರೆ. ಎಲಿಯಟ್‌, ಕಳೆದ ವರ್ಷ ಪಾಕಿಸ್ತಾನ ವಿರುದ್ಧ ವಿಶ್ವ ಇಲೆವೆನ್‌ ಪರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. 

2015ರ ಏಕದಿನ ವಿಶ್ವಕಪ್’ನ ಸೆಮಿಫೈನಲ್ ಪಂದ್ಯದಲ್ಲಿ ಡೇಲ್ ಸ್ಟೇನ್ ಬೌಲಿಂಗ್’ನಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿ ನ್ಯೂಜಿಲೆಂಡ್ ತಂಡವನ್ನು ಫೈನಲ್’ಗೇರುವಂತೆ ಮಾಡಿದ್ದು ಅವರ ಸ್ಮರಣೀಯ ಇನ್ನಿಂಗ್ಸ್’ಗಳಲ್ಲಿ ಒಂದು.

ಹೀಗಿತ್ತು ಆ ಕ್ಷಣ:

ಎಲಿಯಟ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ‘ಜೋಹಾನ್ಸ್‌ಬರ್ಗ್‌ನಲ್ಲಿ ಆರಂಭಿಸಿ, ಬರ್ಮಿಂಗ್‌ಹ್ಯಾಮ್‌ನಲ್ಲಿ ನನ್ನ ಆಟ ಮುಗಿಸಿದ್ದೇನೆ. 27 ವರ್ಷಗಳ ನನ್ನ ವೃತ್ತಿ ಜೀವನದ ಪ್ರತಿ ಕ್ಷಣವನ್ನು ಇಷ್ಟಪಟ್ಟಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?