ಗೆಲುವನ್ನು ಕೇರಳಕ್ಕೆ ಅರ್ಪಿಸಿದ್ದ ಕೊಹ್ಲಿ, ತಮ್ಮ ಇನ್ನಿಂಗ್ಸ್ ಅರ್ಪಿಸಿದ್ದು ಅನುಷ್ಕಾಗೆ..!

Published : Aug 22, 2018, 06:54 PM ISTUpdated : Sep 09, 2018, 08:39 PM IST
ಗೆಲುವನ್ನು ಕೇರಳಕ್ಕೆ ಅರ್ಪಿಸಿದ್ದ ಕೊಹ್ಲಿ, ತಮ್ಮ ಇನ್ನಿಂಗ್ಸ್ ಅರ್ಪಿಸಿದ್ದು ಅನುಷ್ಕಾಗೆ..!

ಸಾರಾಂಶ

ಮೂರನೇ ಟೆಸ್ಟ್’ನ ಮೊದಲ ಇನ್ನಿಂಗ್ಸ್’ನಲ್ಲಿ ಕೇವಲ 3 ರನ್’ಗಳಿಂದ ಕೊಹ್ಲಿ ಶತಕ ವಂಚಿತರಾಗಿದ್ದರು. ಆದರೆ ಎರಡನೇ ಇನ್ನಿಂಗ್ಸ್’ನಲ್ಲಿ ಟೆಸ್ಟ್ ವೃತ್ತಿ ಜೀವನದ 23ನೇ ಶತಕ ಸಿಡಿಸಿದ ಬೆನ್ನಲ್ಲೇ ಕೊಹ್ಲಿ ತನ್ನ ಪ್ರಿಯಪತ್ನಿ ಅನುಷ್ಕಾಗೆ ಪ್ಲೈಯಿಂಗ್ ಕಿಸ್ ನೀಡಿದ್ದರು.

ನಾಟಿಂಗ್’ಹ್ಯಾಮ್[ಆ.22]: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್’ನಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ದಾಖಲಿಸಿದೆ. ಕೊಹ್ಲಿ ಅಮೋಘ ಬ್ಯಾಟಿಂಗ್ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು, ತಮ್ಮ ಇನ್ನಿಂಗ್ಸ್ ಅನ್ನು ತಮ್ಮ ಪತ್ನಿ ಅನುಷ್ಕಾ ಶರ್ಮಾಗೆ ಅರ್ಪಿಸಿದ್ದಾರೆ.

ಮೂರನೇ ಟೆಸ್ಟ್’ನ ಮೊದಲ ಇನ್ನಿಂಗ್ಸ್’ನಲ್ಲಿ ಕೇವಲ 3 ರನ್’ಗಳಿಂದ ಕೊಹ್ಲಿ ಶತಕ ವಂಚಿತರಾಗಿದ್ದರು. ಆದರೆ ಎರಡನೇ ಇನ್ನಿಂಗ್ಸ್’ನಲ್ಲಿ ಟೆಸ್ಟ್ ವೃತ್ತಿ ಜೀವನದ 23ನೇ ಶತಕ ಸಿಡಿಸಿದ ಬೆನ್ನಲ್ಲೇ ಕೊಹ್ಲಿ ತನ್ನ ಪ್ರಿಯಪತ್ನಿ ಅನುಷ್ಕಾಗೆ ಪ್ಲೈಯಿಂಗ್ ಕಿಸ್ ನೀಡಿದ್ದರು. ನಾನು ಈ ಶತಕವನ್ನು ನನ್ನ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ಅರ್ಪಿಸುತ್ತೇನೆ. ನನ್ನ ಪಾಲಿಗೆ ಸ್ಪೂರ್ತಿಯಾಗಿರುವ ಅನುಷ್ಕಾ ಯಾವಾಗಲೂ ಧನಾತ್ಮಕ ಮನೋಭಾವ ಹೊಂದಲು ನೆರವಾಗುತ್ತಾರೆ. ಹೀಗಾಗಿ ಈ ಶತಕವನ್ನು ಅನುಷ್ಕಾಗೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ. 

ಮೂರನೇ ಟೆಸ್ಟ್ ಪಂದ್ಯ ಗೆಲ್ಲುತ್ತಿದ್ದಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಗೆಲುವನ್ನು ಪ್ರವಾಹಕ್ಕೆ ತುತ್ತಾಗಿರುವ ಕೇರಳ ಜನತೆಗೆ ಅರ್ಪಿಸಿದ್ದರು. ಮೂರು ಟೆಸ್ಟ್ ಪಂದ್ಯಗಳಿಂದ ಕೊಹ್ಲಿ ಇದುವರೆಗೆ ಎರಡು ಶತಕ ಹಾಗೂ ಎರಡು ಅರ್ಧಶತಕಗಳ ನೆರವಿನಿಂದ 440 ರನ್ ಬಾರಿಸಿದ್ದಾರೆ.
  

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?