ಅಪಮಾನಿಸಲು ಮೆಕ್ಸಿಕೊದಿಂದ ಕರೆಸಬೇಕಿತ್ತೇ?

By Suvarna Web DeskFirst Published Apr 6, 2017, 4:11 PM IST
Highlights

ಇದುವರೆಗೆ ಡೇವಿಸ್ ಕಪ್ ಡಬಲ್ಸ್ ಪಂದ್ಯಾವಳಿಯಲ್ಲಿ 42 ಗೆಲುವು ಸಾಧಿಸಿರುವ ಪೇಸ್, ಇಟಲಿಯ ದಿಗ್ಗಜ ನಿಕೊ ಪಿಟ್ರಾಂಜೆಲಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಬೆಂಗಳೂರು(ಏ.06): ಡೇವಿಸ್ ಕಪ್ ತಂಡದಿಂದ ಕೈಬಿಟ್ಟ ಕ್ರಮವನ್ನು ಕಟುವಾದ ಮಾತುಗಳಲ್ಲಿ ಖಂಡಿಸಿರುವ ಪೇಸ್, ತಂಡದಿಂದ ಕೈಬಿಟ್ಟು ಅವಮಾನ ಮಾಡಲು ತನ್ನನ್ನು ಮೆಕ್ಸಿಕೋದಿಂದ ಕರೆಸಬೇಕಿತ್ತೇ ಎಂದು ಕಿಡಿ ಕಾರಿದ್ದಾರೆ.

ಪಂದ್ಯದ ಡ್ರಾ ಪ್ರಕಟವಾದ ಬಳಿಕ ಸುದ್ದಿಗಾರರ ಜತೆಗೆ ಪೇಸ್ ತಮಗಾದ ಅಸಮಾಧಾನವನ್ನು ಹೊರಹಾಕಿದರು.

‘‘ಒಮ್ಮೆ ಶ್ರೇಯಾಂಕದ ಆಧಾರದಲ್ಲಿ ತಂಡವನ್ನು ಆರಿಸಿದರೆ, ಮತ್ತೊಮ್ಮೆ ವೈಯಕ್ತಿಕ ಇಚ್ಛೆಗೆ ಅನುಗುಣವಾಗಿ ತಂಡದ ಆಯ್ಕೆ ನಡೆಯುತ್ತದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಪರೋಕ್ಷವಾಗಿ ತನ್ನ ಮಾಜಿ ಜತೆಯಾಟಗಾರನನ್ನು ಜರೆದ ಪೇಸ್, ತಂಡದ ಆಡದ ನಾಯಕನಾಗಿ ಮಹೇಶ್ ತಳೆದ ನಿರ್ಧಾರವನ್ನು ಪ್ರಶ್ನಿಸಲಾಗದೆ ಹೋದರೂ, ನನ್ನನ್ನು ಇಲ್ಲೀವರೆಗೆ ಕರೆಸಿ ಈ ರೀತಿ ಅಪಮಾನಿಸುವ ಪ್ರಮೇಯವಿರಲಿಲ್ಲ’’ ಎಂದು ಬೇಸರ ವ್ಯಕ್ತಪಡಿಸಿದರು.

ಭಗ್ನಗೊಂಡ ಕನಸು:

ಅಂದಹಾಗೆ 1990ರಲ್ಲಿ ಜೈಪುರದಲ್ಲಿ ನಡೆದಿದ್ದ ಜಪಾನ್ ವಿರುದ್ಧದ ಪಂದ್ಯದೊಂದಿಗೆ ಡೇವಿಸ್ ಕಪ್‌'ಗೆ ಪಾದಾರ್ಪಣೆ ಮಾಡಿದ್ದ ಪೇಸ್, 27 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಡೇವಿಸ್ ಕಪ್ ಭಾರತ ತಂಡದಿಂದ ಕೈಬಿಡಲ್ಪಟ್ಟಿದ್ದಾರೆ. ಇದುವರೆಗೆ ಡೇವಿಸ್ ಕಪ್ ಡಬಲ್ಸ್ ಪಂದ್ಯಾವಳಿಯಲ್ಲಿ 42 ಗೆಲುವು ಸಾಧಿಸಿರುವ ಪೇಸ್, ಇಟಲಿಯ ದಿಗ್ಗಜ ನಿಕೊ ಪಿಟ್ರಾಂಜೆಲಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಒಂದೊಮ್ಮೆ ಉಜ್ಬೇಕಿಸ್ತಾನ ವಿರುದ್ಧದ ಪಂದ್ಯಾವಳಿಯಲ್ಲಿ ಸ್ಥಾನ ಸಿಕ್ಕಿ ಗೆಲುವು ಸಾಧಿಸಿದ್ದರೆ, ಪೇಸ್ ವಿಶ್ವ ದಾಖಲೆ ಬರೆಯುತ್ತಿದ್ದರು.

click me!