ಭಾರತ ಫುಟ್ಬಾಲ್ ತಂಡದ ಶ್ರೇಷ್ಠ ಸಾಧನೆ

By Suvarna Web DeskFirst Published Apr 6, 2017, 3:28 PM IST
Highlights

ಇತ್ತೀಚೆಗಷ್ಟೇ ನಡೆದಿದ್ದ ಎಎಫ್‌'ಸಿ ಏಷ್ಯಾ ಕಪ್ ಅರ್ಹತಾ ಸುತ್ತಿನಲ್ಲಿ ಮ್ಯಾನ್ಮಾರ್ ವಿರುದ್ಧ ಭಾರತ 1-0 ಗೋಲಿನ ಜಯ ಸಾಧಿಸಿತ್ತು. ಇದು 64 ವರ್ಷಗಳಲ್ಲಿ ಮ್ಯಾನ್ಮಾರ್ ವಿರುದ್ಧ ಭಾರತದ ಮೊದಲ ಗೆಲುವಾಗಿತ್ತು.

ನವದೆಹಲಿ(ಏ.06): ಭಾರತ ಫುಟ್ಬಾಲ್ ತಂಡ ಇದೇ ಮೊದಲ ಬಾರಿಗೆ ಫಿಫಾ ಶ್ರೇಯಾಂಕದಲ್ಲಿ 101ನೇ ಸ್ಥಾನಕ್ಕೆ ಜಿಗಿದಿದ್ದು, ಈ ಮೂಲಕ ಕಳೆದೆರಡು ದಶಕಗಳಲ್ಲೇ ಅತಿ ಶ್ರೇಷ್ಠ ಸಾಧನೆ ಮಾಡಿದಂತಾಗಿದೆ.

1996ರ ಮೇ ತಿಂಗಳಿನಲ್ಲಿ ಭಾರತ ತಂಡ 101ನೇ ಸ್ಥಾನಕ್ಕೇರಿತ್ತು ಎಂಬುದು ಗಮನಾರ್ಹ. ಕಳೆದ ತಿಂಗಳಿನಲ್ಲಿ 139ನೇ ಸ್ಥಾನದಲ್ಲಿದ್ದ ಅದು 31 ಸ್ಥಾನ ಜಿಗಿತ ಸಾಧಿಸಿದೆ.

ಇತ್ತೀಚೆಗಷ್ಟೇ ನಡೆದಿದ್ದ ಎಎಫ್‌'ಸಿ ಏಷ್ಯಾ ಕಪ್ ಅರ್ಹತಾ ಸುತ್ತಿನಲ್ಲಿ ಮ್ಯಾನ್ಮಾರ್ ವಿರುದ್ಧ ಭಾರತ 1-0 ಗೋಲಿನ ಜಯ ಸಾಧಿಸಿತ್ತು. ಇದು 64 ವರ್ಷಗಳಲ್ಲಿ ಮ್ಯಾನ್ಮಾರ್ ವಿರುದ್ಧ ಭಾರತದ ಮೊದಲ ಗೆಲುವಾಗಿತ್ತು. ಸದ್ಯ, ಏಷ್ಯಾ ಫುಟ್ಬಾಲ್‌'ನಲ್ಲಿ ಭಾರತ 11ನೇ ಸ್ಥಾನದಲ್ಲಿದೆ. ಫಿಫಾದಲ್ಲಿ ಭಾರತದ ಶ್ರೇಷ್ಠ ಸಾಧನೆ ಎಂದರೆ 1996ರ ಫೆಬ್ರವರಿಯಲ್ಲಿ 94ನೇ ಸ್ಥಾನಕ್ಕೆ ಏರಿದ್ದು.

ಈ ನಡುವೆ 7 ವರ್ಷಗಳ ನಂತರ ಬ್ರೆಜಿಲ್ ನಂ.1 ಸ್ಥಾನಕ್ಕೆ ಲಗ್ಗೆ ಹಾಕಿರುವುದು ಫಿಫಾ ಶ್ರೇಯಾಂಕದಲ್ಲಿ ವಿಶೇಷ.

click me!