ಇಂಗ್ಲೆಂಡ್‌ನಲ್ಲಿ ಕ್ರಿಕೆಟಿಗರಿಗೆ ಆಟೋದಲ್ಲಿ ಡ್ರಿಂಕ್ಸ್ ಸರಬರಾಜು !

Published : Aug 07, 2018, 11:36 AM IST
ಇಂಗ್ಲೆಂಡ್‌ನಲ್ಲಿ ಕ್ರಿಕೆಟಿಗರಿಗೆ ಆಟೋದಲ್ಲಿ ಡ್ರಿಂಕ್ಸ್ ಸರಬರಾಜು !

ಸಾರಾಂಶ

ಕ್ರಿಕೆಟ್ ಆಟದ ನಡುವೆ ತಂಪು ಪಾನಿಯ ಸರಬರಾಜು ಮಾಡಲು ಹಲವು ವಾಹನ್ನಗಳನ್ನ ಬಳಸಲಾಗಿದೆ. ಆದರೆ ಇದೇ ಮೊದಲ ಬಾರಿಗೆ ಆಟೋ ರಿಕ್ಷಾದಲ್ಲಿ ಡ್ರಿಂಕ್ಸ್ ಸರಬರಾಜು ಮಾಡೋ ಮೂಲಕ ಗಮನಸೆಳೆದಿದ್ದಾರೆ.  

ಲಂಡನ್(ಆ.07):  ಇಂಗ್ಲೆಂಡ್‌ನ ಕ್ಲಬ್ ಕ್ರಿಕೆಟ್ ಪಂದ್ಯವೊಂದರಲ್ಲಿ ಡ್ರಿಂಕ್ಸ್ ಬ್ರೇಕ್ ವೇಳೆ ಆಟೋ ರಿಕ್ಷಾದಲ್ಲಿ ತಂಪು ಪಾನೀಯವನ್ನು ಮೈದಾನಕ್ಕೆ ಕೊಂಡೊಯ್ದ ಪ್ರಸಂಗ ನಡೆದಿದೆ.  ಈ ಮೂಲಕ ಇದೇ ಮೊದಲ ಬಾರಿಗೆ ಕ್ರಿಕೆಟ್ ಪಂದ್ಯದಲ್ಲಿ ಡ್ರಿಂಕ್ಸ್‌ಗೆ ಆಟೋ ರಿಕ್ಷಾ ಬಳಸಲಾಗಿದೆ.

ಇಂಗ್ಲೆಂಡ್‌ನಲ್ಲಿರುವ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸೇರಿ ರಚಿಸಿಕೊಂಡಿರುವ ‘ಭಾರತ್ ಆರ್ಮಿ’ ಎನ್ನುವ ಗುಂಪು ಆಟೋದಲ್ಲಿ ತಂಪು ಪಾನೀಯ ಸರಬರಾಜು ಮಾಡಿ ಗಮನ ಸೆಳೆದಿದೆ. ಟ್ವೀಟರ್‌ನಲ್ಲಿ ವಿಡಿಯೋ ಸಹ ಹಾಕಿರುವ ‘ಭಾರತ್ ಆರ್ಮಿ’,ಬಿಸಿಸಿಐಗೂ ಆಟೋ ಬಳಸುವಂತೆ ಸಲಹೆ ನೀಡಿದೆ. ವಿಡಿಯೋ ವೈರಲ್ ಆಗಿದೆ.

 

 

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ್ ಆರ್ಮಿ ಅಭಿಮಾನಿ ಬಳಗ, ವಿರಾಟ್ ಕೊಹ್ಲಿಗಾಗಿ ವಿಶೇಷ ಹಾಡೊಂದನ್ನ ರಚಿಸಿತ್ತು. ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದ ವೇಳೆ ಭಾರತ್ ಆರ್ಮಿ ಫ್ಯಾನ್ಸ್, ಕೊಹ್ಲಿ ಹಾಡಿನ ಸ್ಯಾಂಪಲ್ ಹಾಡಿದ್ದರು.


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ತಂಡ ಪ್ರತಿನಿಧಿಸಿದ ಪಾಕಿಸ್ತಾನ ಕಬಡ್ಡಿ ಪಟು, ಇಸ್ಲಾಮಾಬಾದ್‌ನಲ್ಲಿ ಕೋಲಾಹಲ
ಐಪಿಎಲ್ ಹರಾಜಿನ ಬಳಿಕ 4 ಬಲಿಷ್ಠ ತಂಡ ಆಯ್ಕೆ ಮಾಡಿದ ಆರ್. ಅಶ್ವಿನ್; ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕಿಲ್ಲ ಸ್ಥಾನ!