ಫ್ರಾನ್ಸ್‌ನಲ್ಲಿ ಯವರಾಜ್ ಸಿಂಗ್ ಅಭ್ಯಾಸ-ಶೀಘ್ರದಲ್ಲೇ ತಂಡಕ್ಕೆ ಕಮ್‌ಬ್ಯಾಕ್!

By Web DeskFirst Published Aug 7, 2018, 11:20 AM IST
Highlights

ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಲು ಕಸರತ್ತು ಆರಂಭಿಸಿರುವ ಯುವರಾಜ್ ಸಿಂಗ್, ಫ್ರಾನ್ಸ್‌ನಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಮುಂಬರುವ ಏಷ್ಯಾಕಪ್ ಟೂರ್ನಿಯಲ್ಲಿ ಸ್ಥಾನ ಪಡೆಯಲು ಯುವರಾಜ್ ಸಿಂಗ್ ಕಸರತ್ತು ಆರಂಭಿಸಿದ್ದಾರೆ. ಇಲ್ಲಿದೆ ಯುವರಾಜ್ ಸಿಂಗ್ ಅಭ್ಯಾಸದ ವಿವರ ಇಲ್ಲಿದೆ.

ಫ್ರಾನ್ಸ್(ಆ.07): : ಭಾರತ ಕ್ರಿಕೆಟ್ ತಂಡದಿಂದ ದೂರ ಉಳಿದಿರುವ ತಾರಾ ಆಟಗಾರ ಯುವರಾಜ್ ಸಿಂಗ್ ಸದ್ಯ ಫ್ರಾನ್ಸ್‌ನ ಪ್ರತಿಷ್ಠಿತ ಕ್ರೀಡಾ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಸೈಕ್ಲಿಂಗ್, ಈಜು, ರಾಫ್ಟಿಂಗ್, ಓಟ ಹೀಗೆ ಹಲವು ಕಸರತ್ತುಗಳನ್ನು ನಡೆಸುತ್ತಿರುವ ಯುವಿ, ತಮ್ಮ ದೇಹದ ತೂಕವನ್ನು ಇಳಿಸಿಕೊಂಡು ಫಿಟ್ ಆಗಿದ್ದಾರೆ. 

ಯೋ-ಯೋ ಟೆಸ್ಟ್ ಫೇಲಾದ ಕಾರಣ ಅವರನ್ನು ತಂಡದಿಂದ ಹೊರಗಿಡಲಾಗಿದೆ. ತಂಡಕ್ಕೆ ಆಯ್ಕೆಯಾಗಲು ಕಡ್ಡಾಯವಾಗಿ ಯೋ-ಯೋ ಪರೀಕ್ಷೆಯಲ್ಲಿ ಉರ್ತ್ತೀಣರಾಗಬೇಕಿದ್ದು, ಅದಕ್ಕೆ ಬೇಕಿರುವ ಫಿಟ್ನೆಸ್ ಗಳಿಸುವತ್ತ ಯುವರಾಜ್ ಗಮನ ಹರಿಸಿದ್ದಾರೆ.  

 

 

ತಾವು ವಿವಿಧ ಕಸರತ್ತುಗಳನ್ನು ನಡೆಸುತ್ತಿರುವ ವಿಡಿಯೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿರುವ ಯುವರಾಜ್, ‘ಕಳೆದೊಂದು ವಾರದಿಂದ ಕಠಿಣ ಅಭ್ಯಾಸ ನಡೆಸುತ್ತಿದ್ದೇನೆ. ಅತ್ಯಂತ ವೃತ್ತಿಪರ ತಂಡದೊಂದಿಗೆ ಹಲವು ಪರೀಕ್ಷೆ, ಕಲಿಕೆ ಹಾಗೂ ಅಭ್ಯಾಸ ನಡೆಸುತ್ತಿರುವ ಅನುಭವ ವಿಭಿನ್ನವಾಗಿದೆ. ಇನ್ನೂ 3 ವಾರಗಳ ಕಾಲ ಇದು ಮುಂದುವರಿಯಲಿದ್ದು, ಗುಣಮಟ್ಟವನ್ನು ಹೆಚ್ಚಿಸುವ ಸಮಯ ಹತ್ತಿರವಾಗುತ್ತಿದೆ’ ಎಂದು ಬರೆದಿದ್ದಾರೆ. 

ಫ್ರಾನ್ಸ್‌ನಿಂದ ವಾಪಸಾದ ಬಳಿಕ ಯುವರಾಜ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್ಸಿಎ)ಯಲ್ಲಿ ಯೋ-ಯೋ ಪರೀಕ್ಷೆಗೆ ಒಳಗಾಗುವ ನಿರೀಕ್ಷೆ ಇದೆ. ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆಯುವ ಗುರಿ ಹೊಂದಿರುವುದಾಗಿ ಯುವಿ ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 

click me!