ಪ್ರತಿ ತಂಡದಲ್ಲಿ 14 ಬಾಕ್ಸರ್‌ಗಳು ಇರಲಿದ್ದಾರೆ. ಒಟ್ಟು 7 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಪುರುಷರ ವಿಭಾಗದಲ್ಲಿ 5 (52 ಕೆ.ಜಿ, 57 ಕೆ.ಜಿ, 69 ಕೆ.ಜಿ, 75 ಕೆ.ಜಿ ಮತ್ತು 91 ಕೆ.ಜಿ), ಮಹಿಳಾ ವಿಭಾಗದಲ್ಲಿ 2 (51 ಕೆ.ಜಿ, 60 ಕೆ.ಜಿ) ಸ್ಪರ್ಧೆ ನಡೆಯಲಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ..
ನವದೆಹಲಿ[ಮೇ.01]: ಐಪಿಎಲ್, ಪ್ರೊ ಕಬಡ್ಡಿ ಮಾದರಿ ಬಾಕ್ಸಿಂಗ್ ಲೀಗ್‌ಗೆ ಈ ವರ್ಷ ಚಾಲನೆ ಸಿಗಲಿದೆ. ಭಾರತೀಯ ಬಾಕ್ಸಿಂಗ್ ಲೀಗ್‌ನ ಉದ್ಘಾಟನಾ ಆವೃತ್ತಿ ಜುಲೈ, ಆಗಸ್ಟ್‌ನಲ್ಲಿ ನಡೆಯಲಿದೆ ಎಂದು ಭಾರತೀಯ ಬಾಕ್ಸಿಂಗ್ ಫೆಡರೇಷನ್ (ಬಿಎಫ್‌ಐ) ಮಂಗಳವಾರ ಘೋಷಿಸಿದೆ. ಟೂರ್ನಿ 3 ವಾರಗಳ ಕಾಲ ನಡೆಯಲಿದ್ದು, ಒಟ್ಟು 6 ನಗರಗಳ ತಂಡಗಳು ಪಾಲ್ಗೊಳ್ಳಲಿವೆ.
ಈಗಾಗಲೇ ಹಲವು ಭಾರತೀಯ ಬಾಕ್ಸರ್‌ಗಳು ಟೂರ್ನಿಗೆ ನೋಂದಣಿ ಮಾಡಿಕೊಂಡಿದ್ದು, ವಿದೇಶಿ ಬಾಕ್ಸರ್‌ಗಳು ಸಹ ಸೇರಿಕೊಳ್ಳಲಿದ್ದಾರೆ. ಪ್ರತಿ ತಂಡದಲ್ಲಿ 14 ಬಾಕ್ಸರ್‌ಗಳು ಇರಲಿದ್ದಾರೆ. ಒಟ್ಟು 7 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಪುರುಷರ ವಿಭಾಗದಲ್ಲಿ 5 (52 ಕೆ.ಜಿ, 57 ಕೆ.ಜಿ, 69 ಕೆ.ಜಿ, 75 ಕೆ.ಜಿ ಮತ್ತು 91 ಕೆ.ಜಿ), ಮಹಿಳಾ ವಿಭಾಗದಲ್ಲಿ 2 (51 ಕೆ.ಜಿ, 60 ಕೆ.ಜಿ) ಸ್ಪರ್ಧೆ ನಡೆಯಲಿದೆ.
14 ಬಾಕ್ಸರ್‌ಗಳ ಪೈಕಿ 8 ಭಾರತೀಯರು ಇರಲಿದ್ದಾರೆ. ಒಬ್ಬ ವೃತ್ತಿಪರ ಬಾಕ್ಸರ್‌ಗೂ ತಂಡದಲ್ಲಿ ಅವಕಾಶವಿರಲಿದೆ. ‘ಕಿರಿಯರ ವಿಭಾಗದ ಒಬ್ಬ ಬಾಕ್ಸರ್‌ನನ್ನು ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ, ಆದರೆ ಆತ ಸ್ಪರ್ಧಿಸುವುದಿಲ್ಲ. ಯುವಕರಿಗೆ ಅನುಭವ ಸಿಗಲಿದೆ ಎನ್ನುವ ಉದ್ದೇಶದಿಂದ ಅವಕಾಶ ಕಲ್ಪಿಸಲಾಗುತ್ತದೆ’ ಎಂದು ಬಿಎಫ್‌ಐ ಅಧಿಕಾರಿ ಹೇಳಿದ್ದಾರೆ.
3 ನಗರಗಳಲ್ಲಿ ಪಂದ್ಯಗಳು: ಉದ್ಘಾಟನಾ ಆವೃತ್ತಿಯ ಪಂದ್ಯಗಳು ದೆಹಲಿ, ಗುವಾಹಟಿ ಮತ್ತು ಪುಣೆಯಲ್ಲಿ ನಡೆಯಲಿವೆ. ಸ್ಟಾರ್ ಸ್ಪೋಟ್ಸ್‌ರ್ ಪ್ರಸಾರ ಹಕ್ಕು ಪಡೆದಿದ್ದು, ಪಂದ್ಯಗಳು ನೇರ ಪ್ರಸಾರಗೊಳ್ಳಲಿವೆ. ಸದ್ಯದಲ್ಲೇ ಬಾಕ್ಸರ್‌ಗಳ ಹರಾಜು ನಡೆಯಲಿದೆ. ತಂಡಗಳ ಹೆಸರು, ಮಾಲೀಕರ ವಿವರಗಳನ್ನು ಶೀಘ್ರದಲ್ಲಿ ಪ್ರಕಟಿಸುವುದಾಗಿ ಬಿಎಫ್‌ಐ ತಿಳಿಸಿದೆ.