ಹ್ಯಾಟ್ರಿಕ್ ಗೆಲುವಿನ ಬಳಿಕ ಬೆಂಗಳೂರು ಎಫ್'ಸಿಗೆ ಸತತ ಎರಡು ಸೋಲಿನ ಆಘಾತ

By Suvarna Web DeskFirst Published Jan 28, 2017, 11:03 AM IST
Highlights

ಐ-ಲೀಗ್'ನಲ್ಲಿ ವ್ಯಕ್ತವಾದ ಪ್ರದರ್ಶನವನ್ನು ಬೆಂಗಳೂರಿಗರು ಮುಂದುವರಿಸಿದರೆ ಎಎಫ್'ಸಿ ಚಾಂಪಿಯನ್ಸ್ ಲೀಗ್'ನಲ್ಲಿ ಮುಂದಿನ ಹಂತಕ್ಕೇರುವುದು ಸಾಧ್ಯವೇ ಇಲ್ಲ.

ಗೋವಾ(ಜ. 28): ಐ-ಲೀಗ್ ಟೂರ್ನಿಯಲ್ಲಿ ಬೆಂಗಳೂರು ಫುಟ್ಬಾಲ್ ಕ್ಲಬ್ ಸತತ ಎರಡನೇ ಸೋಲುಂಡಿದೆ. ನಿನ್ನೆ ಸಂಜೆ ನಡೆದ ಪಂದ್ಯದಲ್ಲಿ ಆತಿಥೇಯ ಚರ್ಚಿಲ್ ಬ್ರದರ್ಸ್ ತಂಡವು 2-1 ಗೋಲುಗಳಿಂದ ಬಿಎಫ್'ಸಿಯನ್ನು ಮಣಿಸಿದೆ. ಮೊದಲ ಮೂರು ಪಂದ್ಯಗಳನ್ನು ಗೆದ್ದು ಲೀಗ್'ನಲ್ಲಿ ಭರ್ಜರಿ ಆರಂಭ ಪಡೆದಿದ್ದ ಹಾಲಿ ಚಾಂಪಿಯನ್ನರಿಗೆ ಇದು ಎರಡನೇ ಸೋಲಾಗಿದೆ. ಕಳೆದ ಭಾನುವಾರದಂದು ಈಸ್ಟ್ ಬೆಂಗಾಳ್ ವಿರುದ್ಧ ಇಷ್ಟೇ ಗೋಲಿನ ಅಂತರದಿಂದ ಸೋಲುಂಡಿತ್ತು.

ತಿಲಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಚರ್ಚಿಲ್ ಬ್ರದರ್ಸ್ ವಿರುದ್ಧ ಬೆಂಗಳೂರಿಗರೇ ಮೊದಲು ಮುನ್ನಡೆ ಪಡೆದುಕೊಂಡಿದ್ದು. ಆದರೆ, ಸೆಕೆಂಡ್ ಡಿವಿಷನ್'ನಿಂದ ಪ್ರೊಮೋಟ್ ಆಗಿ ಬಂದಿರುವ ಚರ್ಚಿಲ್ ಬ್ರದರ್ಸ್ ಸರಿಯಾದ ಸಮಯಕ್ಕೆ ಸಾವರಿಸಿಕೊಂಡು ಪ್ರವಾಸಿಗರ ಮೇಲೆ ಸವಾರಿ ಮಾಡಿತು. ಪಂದ್ಯದ 53ನೇ ನಿಮಿಷದಲ್ಲಿ ಚರ್ಚಿಲ್ ಬ್ರದರ್ಸ್'ಗೆ ವಿಜಯದ ಗೋಲು ಬಂದಿತು. ಗೋವಾದ ಪ್ರತಿಷ್ಠಿತ ಕ್ಲಬ್'ಗೆ ಇದು ಹಾಲಿ ಐ-ಲೀಗ್'ನಲ್ಲಿ ಚೊಚ್ಚಲ ಗೆಲುವಾಗಿದೆ.

ಇನ್ನು, ಜ.31ರಂದು ಬೆಂಗಳೂರು ಎಫ್'ಸಿಗೆ ಅತ್ಯಂತ ಕಠಿಣ ಪಂದ್ಯ ಎದುರಾಗಲಿದೆ. ಎಎಫ್'ಸಿ ಚಾಂಪಿಯನ್ಸ್ ಲೀಗ್'ನ ಕ್ವಾಲಿಫಯರ್ ಪಂದ್ಯದಲ್ಲಿ ಅರಬ್ಬೀ ನಾಡಿನ ಅಲ್-ವೆಹದಾತ್ ಕ್ಲಬ್'ನ ಸವಾಲನ್ನು ಬೆಂಗಳೂರಿಗರು ಎದುರಿಸಲಿದ್ದಾರೆ. ಐ-ಲೀಗ್'ನಲ್ಲಿ ವ್ಯಕ್ತವಾದ ಪ್ರದರ್ಶನವನ್ನು ಬೆಂಗಳೂರಿಗರು ಮುಂದುವರಿಸಿದರೆ ಎಎಫ್'ಸಿ ಚಾಂಪಿಯನ್ಸ್ ಲೀಗ್'ನಲ್ಲಿ ಮುಂದಿನ ಹಂತಕ್ಕೇರುವುದು ಸಾಧ್ಯವೇ ಇಲ್ಲ.

click me!