ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಷ್ಟಿತ ಬಾಸ್ಕೆಟ್‌ಬಾಲ್ ಟೂರ್ನಿ
ಭಾರತ ಸೇರಿದಂತೆ 16 ತಂಡಗಳು ಭಾಗಿ
ಭಾರತಕ್ಕಿಂದು ಬಲಿಷ್ಠ ಆಸ್ಟ್ರೇಲಿಯಾ ಎದುರಾಳಿ
ಬೆಂಗಳೂರು(ಸೆ.05): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೋಮವಾರದಿಂದ ಏಷ್ಯಾ ಅಂಡರ್-18 ಮಹಿಳಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್ ನಡೆಯಲಿದೆ. ಸೆ.11ರ ವರೆಗೂ ನಡೆಯಲಿರುವ ಟೂರ್ನಿಯಲ್ಲಿ ಭಾರತ ಸೇರಿ ಒಟ್ಟು 16 ತಂಡಗಳು ಪಾಲ್ಗೊಳ್ಳಲಿವೆ. ಅಗ್ರ 4 ಸ್ಥಾನಗಳನ್ನು ಪಡೆಯುವ ತಂಡಗಳು 2023ರಲ್ಲಿ ಸ್ಪೇನ್‌ನಲ್ಲಿ ನಡೆಯಲಿರುವ ಅಂಡರ್-19 ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯಲಿವೆ.
ತಲಾ 8 ತಂಡಗಳನ್ನು ‘ಎ’ ಹಾಗೂ ‘ಬಿ’ ಎಂದು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ‘ಎ’ ಗುಂಪಿನಲ್ಲಿ ತಲಾ 4 ತಂಡಗಳನ್ನು ‘ಎ’ ಹಾಗೂ ‘ಬಿ’ ವಿಭಾಗಗಳೆಂದು ಮರು ವಿಂಗಡನೆ ಮಾಡಲಾಗಿದೆ. ‘ಎ’ ಗುಂಪಿನ ‘ಎ’ ವಿಭಾಗದಲ್ಲಿ ಭಾರತ ತಂಡ ಸ್ಥಾನ ಪಡೆದಿದ್ದು, ಸೋಮವಾರ ಮೊದಲ ಪಂದ್ಯದಲ್ಲಿ ಆಸ್ಪ್ರೇಲಿಯಾವನ್ನು ಸೆಣಸಲಿದೆ. ಸೆಪ್ಟೆಂಬರ್ 6ರಂದು ದಕ್ಷಿಣ ಕೊರಿಯಾ, ಸೆಪ್ಟೆಂಬರ್ 7ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ‘ಎ’ ಗುಂಪಿನ ‘ಬಿ’ ವಿಭಾಗದಲ್ಲಿ ಚೀನಾ, ಜಪಾನ್, ಚೈನೀಸ್ ತೈಪೆ, ಇಂಡೋನೇಷ್ಯಾ ತಂಡಗಳಿವೆ. ‘ಬಿ’ ಗುಂಪಿನ ‘ಎ’ ವಿಭಾಗದಲ್ಲಿ ಥಾಯ್ಲೆಂಡ್, ಸಮೊವಾ, ಮಾಲ್ಡೀವ್‌್ಸ ಮತ್ತು ಫಿಲಿಪ್ಪೀನ್ಸ್ ಸ್ಥಾನ ಪಡೆದರೆ, ‘ಬಿ’ ಗುಂಪಿನ ‘ಬಿ’ ವಿಭಾಗದಲ್ಲಿ ಹಾಂಕಾಂಗ್, ಮಲೇಷ್ಯಾ, ಜೋರ್ಡನ್, ಮಂಗೋಲಿಯಾ ಇವೆ.
Ultimate Kho Kho: ತೆಲುಗು ಯೋಧಾಸ್ ಮಣಿಸಿದ ಒಡಿಶಾ ಜುಗರ್‌ನಟ್ಸ್ ಚೊಚ್ಚಲ ಚಾಂಪಿಯನ್..!
ಎರಡೂ ಗುಂಪುಗಳ 'ಎ' ಮತ್ತು 'ಬಿ' ವಿಭಾಗಗಳಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿವೆ. 2ನೇ ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೇರಲು ಅರ್ಹತಾ ಸುತ್ತಿನ ಪಂದ್ಯಗಳನ್ನು ಆಡಲಿವೆ. 'ಎ' ಮತ್ತು 'ಬಿ' ವಿಭಾಗಗಳಲ್ಲಿ ಪ್ರತ್ಯೇಕ ನಾಕೌಟ್ ಹಂತ ನಡೆಯಲಿವೆ. ಟೂರ್ನಿಯಲ್ಲಿ ಚೀನಾ ಅತ್ಯಂತ ಯಶಸ್ವಿ ತಂಡ ಎನಿಸಿದ್ದು, ಬರೋಬ್ಬರಿ 16 ಬಾರಿ ಪ್ರಶಸ್ತಿ ಜಯಿಸಿದೆ. 2018ರಲ್ಲಿ ಬೆಂಗಳೂರಿನಲ್ಲೇ ಪಂದ್ಯಾವಳಿಗಳು ನಡೆದಾಗಲೂ ಚೀನಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಕೋವಿಡ್ ಕಾರಣದಿಂದಾಗಿ 2020ರಲ್ಲಿ ಪಂದ್ಯಾವಳಿಯನ್ನು ರದ್ದುಪಡಿಸಲಾಗಿತ್ತು.
ಭಾರತ-ಆಸ್ಪ್ರೇಲಿಯಾ
ಪಂದ್ಯ: ಸಂಜೆ 6ಕ್ಕೆ
ಕ್ರೀಡಾಂಗಣಕ್ಕೆ ಪ್ರವೇಶ ಉಚಿತ
‘ಎ’ ಗುಂಪಿನ ಪಂದ್ಯಗಳು ಕಂಠೀರವ ಒಳಾಂಗಣ ಕ್ರೀಡಾಂಗಣ, ‘ಬಿ’ ಗುಂಪಿನ ಪಂದ್ಯಗಳು ಕೋರಮಂಗಲ ಒಳಾಂಗಣ ಕ್ರೀಡಾಂಗಣಗಳಲ್ಲಿ ನಡೆಯಲಿವೆ. ಕ್ರೀಡಾಂಗಣಗಳಿಗೆ ಪ್ರೇಕ್ಷಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಐಪಿಎಲ್: ಪಂಜಾಬ್‌ಗೆ ಬೇಯ್ಲಿಸ್ ಹೊಸ ಕೋಚ್?
ನವದೆಹಲಿ: ಪಂಜಾಬ್ ಕಿಂಗ್‌್ಸ 2023ರ ಐಪಿಎಲ್‌ಗೆ ಆಸ್ಪ್ರೇಲಿಯಾದ ಟ್ರೆವರ್ ಬೇಯ್ಲಿಸ್‌ರನ್ನು ಕೋಚ್ ಆಗಿ ನೇಮಕ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಸದ್ಯದಲ್ಲೇ ತಂಡ ಅಧಿಕೃತ ಪ್ರಕಟಣೆ ಹೊರಡಿಸಲಿದೆ ಎಂದು ಪ್ರತಿಷ್ಠಿತ ಕ್ರಿಕೆಟ್ ವೆಬ್‌ಸೈಟ್‌ವೊಂದು ವರದಿ ಮಾಡಿದೆ.
2019ರಲ್ಲಿ ಇಂಗ್ಲೆಂಡ್ ಏಕದಿನ ವಿಶ್ವಕಪ್ ಗೆದ್ದಾಗ ತಂಡದ ಕೋಚ್ ಆಗಿದ್ದ ಟ್ರೆವರ್, 2012 ಹಾಗೂ 2014ರಲ್ಲಿ ಕೋಲ್ಕತಾ ನೈಟ್ರೈಡರ್ಸ್ ಐಪಿಎಲ್ ಗೆದ್ದಾಗ ತಂಡದ ಸಹಾಯಕ ಸಿಬ್ಬಂದಿಯಾಗಿ ಕಾರ‍್ಯನಿರ್ವಹಿಸಿದ್ದರು. ಸನ್ರೈಸರ್ಸ್ ತಂಡದ ಕೋಚ್ ಆಗಿಯೂ ಕೆಲಸ ಮಾಡಿದ ಅನುಭವ ಹೊಂದಿರುವ ಬೇಯ್ಲಿಸ್, ಪಂಜಾಬ್ ತಂಡದಲ್ಲಿ ಅನಿಲ್ ಕುಂಬ್ಳೆ ಸ್ಥಾನವನ್ನು ತುಂಬಲಿದ್ದಾರೆ. 3 ಆವೃತ್ತಿಗಳಿಗೆ ಕೋಚ್ ಆಗಿದ್ದ ಕುಂಬ್ಳೆ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ವಿಫಲರಾಗಿದ್ದರು. ಇದೇ ಕಾರಣದಿಂದ ಅವರ ಗುತ್ತಿಗೆಯನ್ನು ನವೀಕರಿಸದೆ ಇರಲು ತಂಡದ ಮಾಲಿಕರು ನಿರ್ಧರಿಸಿದ್ದರು.